ವಿತ್ತ ಸಚಿವ ಪ್ರಣಬ್ ಮುಖರ್ಜಿಗೆ ಕಪಿಲಾ ಬರೆದ ಪತ್ರ

ವಿತ್ತ ಸಚಿವ ಪ್ರಣಬ್ ಮುಖರ್ಜಿಗೊಂದು ಪತ್ರ ಬಂದಿದೆ. ಓಲೆ ಬರೆದದ್ದು ನಾನ್ ಪ್ರಾಫಿಟ್ ಸಂಸ್ಥೆ ಐಆರ್ ಎಫ್ ಚೇರ್ಮನ್ ಕೆ. ಕೆ. ಕಪಿಲಾ. ಐಆರ್ ಎಫ್ ಅಂದರೆ ಇಂಟರ್ ನ್ಯಾಷನಲ್ ರೋಡ್ ಫೆಡರೇಷನ್. ರಸ್ತೆ ಸುರಕ್ಷತೆ ಹೆಚ್ಚಿಸುವ ಖಾಸಗಿ ಸಂಸ್ಥೆಗಳಿಗೆ ಮತ್ತು ವ್ಯಕ್ತಿಗಳಿಗೆ ತೆರಿಗೆ ವಿನಾಯಿತಿ ನೀಡಬೇಕು ಎಂದು ಪತ್ರದಲ್ಲಿ ಕೋರಲಾಗಿದೆ.

"ರಸ್ತೆ ಅಪಘಾತ ಸಾರ್ವಜನಿಕರ ಆರೋಗ್ಯದ ಪ್ರಮುಖ ವೈರಿ. ಜನರ ಸುರಕ್ಷತೆಗಾಗಿ ಸರಕಾರ ಹೆಚ್ಚು ಕ್ರಮ ಕೈಗೊಳ್ಳಬೇಕು. ರಸ್ತೆ ಸುರಕ್ಷತೆಗೆ ಸಹಕರಿಸುವ ಖಾಸಗಿ ಸಂಸ್ಥೆಗಳಿಗೆ ಮತ್ತು ವ್ಯಕ್ತಿಗಳಿಗೆ ಬಜೆಟ್ ನಲ್ಲಿ ತೆರಿಗೆ ವಿನಾಯಿತಿ ಘೋಷಿಸಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಇತರ ಅಭಿವೃದ್ಧಿಹೊಂದಿರುವ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದಲ್ಲಿ 15-20 ಪಟ್ಟು ಹೆಚ್ಚು ವಾಹನಗಳಿವೆ ಎನ್ನುವ ಮಾಹಿತಿ ಸೇರಿದಂತೆ ಪ್ರಣಬ್ ಮುಖರ್ಜಿಗೆ ಕಪಿಲಾ ಬರೆದ ಪತ್ರದಲ್ಲಿ ಇನ್ನಷ್ಟು ಪ್ರಮುಖ ಮಾಹಿತಿಗಳಿವೆ.

2000-2001ರಲ್ಲಿ ರಸ್ತೆ ಅಪಘಾತದ ಮೂಲಕ ಸಾಮಾಜಿಕ-ಆರ್ಥಿಕ ನಷ್ಟ 55 ಸಾವಿರ ಕೋಟಿ ರು. ಆಗಿತ್ತು. ಪ್ರತಿವರ್ಷ ಲಕ್ಷ ಲಕ್ಷ ಕೋಟಿ ರುಪಾಯಿ ರಸ್ತೆ ಅಪಘಾತಗಳಿಂದ ನಷ್ಟವಾಗುತ್ತದೆ ಎನ್ನುವ ಯೋಜನಾ ಆಯೋಗದ ಅಂಕಿಅಂಶಗಳನ್ನು ಕಪಿಲಾ ಉಲ್ಲೇಖಿಸಿದ್ದಾರೆ.

"ವಿಶ್ವ ಆರೋಗ್ಯ ಸಂಘಟನೆ(ಡಬ್ಲ್ಯುಎಚ್ಒ) ಪ್ರಕಾರ 2030ಕ್ಕೆ ರಸ್ತೆ ಅಪಘಾತವು ಐದನೇ ಬೃಹತ್ ಸಮಸ್ಯೆಯಾಗಲಿದೆ ಎಂದು ಅವರು ವಿತ್ತ ಸಚಿವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಪ್ರಸಕ್ತ ಬಜೆಟ್ ನಲ್ಲಿ ರಸ್ತೆ ಸುರಕ್ಷತೆಯ ಕಡೆಗೂ ನಿಮ್ಮ ಗಮನವಿರಲಿ ಎಂದು ಹೇಳಿ ಪತ್ರಕ್ಕೆ ಕಪಿಲಾ ಚುಕ್ಕಿಯಿಟ್ಟಿದ್ದಾರೆ. (ಕನ್ನಡ ಡ್ರೈವ್ ಸ್ಪಾರ್ಕ್)

Article Published On: Tuesday, March 6, 2012, 13:00 [IST]
English summary
International Road Federation chairman K.K. Kapila written to Finance Minister Pranab Mukherjee to promoting road safety by giving tax benefits to companies and individuals.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+