ಸಕಲೇಶಪುರದಲ್ಲಿ ಮಹೀಂದ್ರ ಗ್ರೇಟ್ ಎಸ್ಕೇಪ್
ಡ್ರೈವಿಂಗ್ ಪ್ರಿಯರಿಗೆ ಆಫ್ ರೋಡ್ ಜರ್ನಿಯೆಂದರೆ ಅಚ್ಚುಮೆಚ್ಚು. ಡ್ರೈವ್ ಸ್ಪಾರ್ಕ್ ತಂಡ ಕೂಡ ಇತ್ತೀಚೆಗೆ "ಅಡ್ವೆಂಚರ್ ಡ್ರೈವಿಂಗ್" ಮಾಡಿತ್ತು. ಹಾಗಂತ ನಾವೇನೂ ಹಿಮಾಲಯದ ಬೆಟ್ಟದ ಹಾದಿಗಳಲ್ಲಿ ಸಾಹಸಿ ಸವಾರಿ ಮಾಡಿಲ್ಲ. ಸ್ಕಾಟ್ಲೆಂಡಿಗೂ ಹೋಗಿಲ್ಲ!
ಮೂಡಣದ ಸ್ಕಾಟ್ಲೆಂಡ್ ಖ್ಯಾತಿಯ ನಮ್ಮದೇ ರಾಜ್ಯದ ಸಕಲೇಶಪುರದಲ್ಲಿ ಆಫ್ ರೋಡ್ ಡ್ರೈವಿಂಗ್ ಮಾಡಿದ್ದೇವೆ. ಅಂತಹ ಅವಕಾಶ ನೀಡಿದ್ದು "ಮಹೀಂದ್ರ ಗ್ರೇಟ್ ಎಸ್ಕೇಪ್!". ಥಾರ್ ಸೇರಿದಂತೆ 80ಕ್ಕೂ ಹೆಚ್ಚು ಮಹೀಂದ್ರ ವಾಹನಗಳು ಸಾಹಸಿ ಜರ್ನಿಯಲ್ಲಿ ಭಾಗವಹಿಸಿದ್ದವು.
ಸಕಲೇಶಪುರ ರಸ್ತೆಯಲ್ಲಿ ಐರಾವತ, ಕೆಎಸ್ಆರ್ಟಿಸಿ ಬಸ್ ಡ್ರೈವರುಗಳು ನಿತ್ಯ ಸಾಹಸಿ ಡ್ರೈವಿಂಗ್ ಮಾಡುತ್ತಾರೆ. ನಾವು ಆ ರಸ್ತೆ ಬಿಟ್ಟು ಕಾಫಿ ಎಸ್ಟೇಟ್ ಹಾದಿಗಳಲ್ಲಿ, ಕಲ್ಲು ಮುಳ್ಳಿನ ಹಾದಿಗಳಲ್ಲಿ, ಬೆಟ್ಟದ ಹಾದಿಗಳಲ್ಲಿ, ಕಠಿಣ ದುರ್ಗಮ ಹಾದಿಗಳಲ್ಲಿ ಆಫ್ ರೋಡ್ ಡ್ರೈವಿಂಗ್ ಮಾಡಿದೆವು.
ಆಫ್ ರೋಡ್ ಪ್ರಯಾಣವೆಂದರೆ ಏನೋ ಥ್ರಿಲ್ಲು. ಅಲ್ಲಿ ನೂರಾರು ಸವಾಲುಗಳು ಮಾಮೂಲು. ರಸ್ತೆಯ ಹಂಗಿಲ್ಲದೇ ರಸ್ತೆ ಮಾಡಿಕೊಂಡು ಸವಾರಿ ಮಾಡೋದಿದೆಯಲ್ವ! ಅದರ ಅನುಭವ ಅಕ್ಷರಗಳಲ್ಲಿ ಮೂಡಿಸೋದು ಕಷ್ಟ. ಅದು ಅನುಭವ ವೇದ್ಯ.
ನಮ್ಮ ಬಳಿಯಿದ್ದದ್ದು ಮಹೀಂದ್ರ ಥಾರ್ ಜೀಪು. ಒಟ್ಟು 80 ವಾಹನಗಳು ಈ ಆಫ್ ರೋಡ್ ಜರ್ನಿಯಲ್ಲಿ ಪಾಲ್ಗೊಂಡಿದ್ದವು. ಆಫ್ ರೋಡ್ ಸವಾರಿಗೆ ಮಹೀಂದ್ರ ಥಾರ್ ಉತ್ತಮ ಬಂಡಿಯೆನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಅದರ ಟೈರ್ ಹಿಡಿತ ಎಂತಹ ಕಲ್ಲು, ದಿಬ್ಬಗಳನ್ನು ಹತ್ತಿ ಇಳಿಯಬಲ್ಲದು.
80ರಲ್ಲಿ 20 ಮಹೀಂದ್ರ ವಾಹನಗಳ ನಡುವೆ ಸ್ಪರ್ಧೆಯಿತ್ತು. ಅವರಿಗೆ ವಿನ್ ಆಗುವ ಬಯಕೆಯಿತ್ತು. ಉಳಿದವು ಆಸಕ್ತರ ಸಾಹಸ ಸವಾರಿ. ಅಲ್ಲಿ ವಿನ್ ಆಗುವುದಕ್ಕಿಂತ ಅನನ್ಯ ಆಫ್ ರೋಡಿಂಗ್ ಅನುಭವ ಪಡೆಯುವುದೇ ಮುಖ್ಯವಾಗಿತ್ತು.
ನಿಮಗೂ ಇಂತಹ ಅಡ್ವೆಂಚರ್ ಪ್ರಯಾಣ ಕೈಗೊಳ್ಳಬೇಕೆಂಬ ಬಯಕೆಯಿರಬಹುದು. ನಿಮ್ಮಲ್ಲೂ ಮಹೀಂದ್ರ ಜೀಪ್ ಇದ್ದರೆ ಇದರ ಸದಸ್ಯರಾಗಬಹುದು. ನಿಗದಿತ ಪೀಸ್ ನೀಡಿ ಇಂತಹ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಮಹೀಂದ್ರ ಅಡ್ವೆಂಚರ್ ತಾಣಕ್ಕೆ ಭೇಟಿ ನೀಡಬಹುದು.
ಸಾಹಸಿ ಪ್ರಯಾಣದ ಅನನ್ಯ ಫೋಟೊ ನೋಡ್ಬೇಕಾ? ಈ ಲಿಂಕ್ ಪ್ರವೇಶಿಸಿ


Click it and Unblock the Notifications









