ರಾಜ್ಯದಲ್ಲೂ ಶೀಘ್ರದಲ್ಲಿ ಟಿಂಟೆಡ್ ಗ್ಲಾಸ್ ನಿಷೇಧ: ಅಶೋಕ್

ರಾಜ್ಯದಲ್ಲಿ ವಾಹನಗಳು ಗಾಢ ಬಣ್ಣದ ಟಿಂಟೆಡ್ ಗ್ಲಾಸ್ ಬಳಸುವುದನ್ನು ನಿಷೇಧಿಸುವ ಕುರಿತು ಶೀಘ್ರದಲ್ಲಿ ಸಾರಿಗೆ ಮತ್ತು ಇತರ ಇಲಾಖೆಗಳೊಂದಿಗೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದೆಂದು ಸಾರಿಗೆ ಸಚಿವ ಆರ್ ಅಶೋಕ್ ಹೇಳಿದ್ದಾರೆ.

ಇಂದಿನಿಂದ(ಮೇ 4) ಅನುಮತಿ ಇರುವುದಕ್ಕಿಂತ ಹೆಚ್ಚು ಪ್ರಮಾಣದ ಟಿಂಟೆಡ್ ಗ್ಲಾಸ್ ಬಳಸುವುದನ್ನು ಬ್ಯಾನ್ ಮಾಡಿರುವ ದೆಹಲಿ ಸರಕಾರದ ಕ್ರಮವನ್ನು ಅವರು ಶ್ಲಾಘಿಸಿದ್ದಾರೆ. ಶೀಘ್ರದಲ್ಲಿ ರಾಜ್ಯದಲ್ಲೂ ಈ ಕಾನೂನು ಅನುಷ್ಠಾನಗೊಳಿಸುವ ಭರವಸೆಯನ್ನು ಅವರು ನೀಡಿದ್ದಾರೆ.

ಸೀಟ್ ಬೆಲ್ಟ್ ಕಡ್ಡಾಯ ಸೇರಿದಂತೆ ಹಲವು ಸಂಚಾರಿ ನಿಯಮಗಳನ್ನೂ ಕಟ್ಟುನಿಟ್ಟಾಗಿ ಜಾರಿಗೊಳಿಸುವ ಇಂಗಿತವನ್ನು ಅವರು ವ್ಯಕ್ತಪಡಿಸಿದ್ದಾರೆ. ಟಿಂಟೆಡ್ ಗ್ಲಾಸ್ ಮಾನದಂಡದ ಕುರಿತು ಸಾರಿಗೆ ಇಲಾಖೆಯೊಂದಿಗೆ ಸಮಲೋಚಿಸುವುದಾಗಿ ಅವರು ಹೇಳಿದ್ದಾರೆ.

ವಾಹನ ಕಂಪನಿಗಳು ಉತ್ಪಾದಿಸುವ ವಾಹನಗಳ ಮುಂಭಾಗದ ಮತ್ತು ಹಿಂಭಾಗದ ಕಿಟಕಿಗಳಲ್ಲಿ ಶೇಕಡ 70ರಷ್ಟು ವೀಕ್ಷಣೆ ಸಾಧ್ಯವಿರಬೇಕು. ಸೈಡ್ ಕಿಟಕಿಗಳಲ್ಲಿ ಶೇಕಡ 40ರಷ್ಟು ವೀಕ್ಷಣೆ ಸಾಧ್ಯವಿರಬೇಕು ಎಂದು ಎಂದು ಸುಪ್ರಿಂ ಕೋರ್ಟ್ ಇತ್ತೀಚೆಗೆ ಆದೇಶ ನೀಡಿತ್ತು.

ಈ ಕಾನೂನನ್ನು ಶೀಘ್ರದಲ್ಲಿ ಅನುಷ್ಠಾನಗೊಳಿಸುವಂತೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಿಯ ಆಡಳಿತ ಪ್ರದೇಶಗಳಿಗೆ ಕೋರ್ಟ್ ಆದೇಶಿಸಿತ್ತು.

ಝಡ್ ಮತ್ತು ಝಡ್ ಪ್ಲಸ್ ಭದ್ರತೆ ಇರುವ ವಿಐಪಿಗಳಿಗೆ ನೂತನ ಟಿಂಟೆಡ್ ಕಾನೂನು ಅನ್ವಯಿಸುವುದಿಲ್ಲ. ಗಾಢ ಬಣ್ಣದ ಟಿಂಟೆಡ್ ಗ್ಲಾಸ್ ಬಳಸುವುದು ಅಪರಾಧಿಗಳಿಗೆ ವರವಾಗಿ ಪರಿಣಮಿಸಿತ್ತು. ಇದನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಅವಿಷೇಕ್ ಗೋಯೆಂಕಾ ಸಾರ್ವಜನಿಕ ಹಿತಾಶಕ್ತಿ ದಾವೆ ಹೂಡಿದ್ದರು.

ಈ ದಾವೆ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್ ಚ್ ಕಪಾಡಿಯ, ಎ.ಕೆ. ಪಟ್ನಾಯಿಕ್ ಮತ್ತು ಎಸ್ ಕುಮಾರ್ ಅವರಿದ್ದ ತ್ರಿಸದಸ್ಯ ಪೀಠವು ವಾಹನ ಕಾಯಿದೆಯಲ್ಲಿ ಅನುಮತಿ ಇರುವುದಕ್ಕಿಂತ ಹೆಚ್ಚು ಪ್ರಮಾಣದ ಟಿಂಟೆಡ್ ಗ್ಲಾಸ್ ಬಳಸುವುದನ್ನು ನಿಷೇಧಿಸುವಂತೆ ಕಟ್ಟುನಿಟ್ಟಾಗಿ ಸೂಚಿಸಿದೆ.

More from DriveSpark

Article Published On: Friday, May 4, 2012, 16:09 [IST]
English summary
Tinted glass related Rules will be implemented in Karnataka Soon. According to Transport Minister R Ashoka, implementing Tinted glass related Rules is his main priority.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+