2011ರಲ್ಲಿ ರಸ್ತೆಗಿಳಿದ ಅಗ್ರ ಹನ್ನೊಂದು ಕಾರುಗಳ ಪಟ್ಟಿ

ಮಾರುತಿ ಸುಜುಕಿ ನೂತನ ಸ್ವಿಫ್ಟ್: 2011ರಲ್ಲಿ ರಸ್ತೆಗಿಳಿದ ಪ್ರಮುಖ ಕಾರುಗಳಲ್ಲಿ ಮಾರುತಿ ಸುಜುಕಿ ನೂತನ ಸ್ವಿಫ್ಟ್ ಗೆ ಅಗ್ರಸ್ಥಾನ ನೀಡಬಹುದು. ಇದರ ಬುಕ್ಕಿಂಗ್ ಆರಂಭವಾದ ಕೆಲವೇ ದಿನಗಳಲ್ಲಿ 1 ಲಕ್ಷಕ್ಕಿಂತ ಹೆಚ್ಚು ಜನರು ಬುಕ್ಕಿಂಗ್ ಮಾಡಿದ್ದರು. ಮಾರುತಿ ಮಾನೆಸರ್ ಘಟಕದ ನೌಕರರ ಪ್ರತಿಭಟನೆಯಿಂದ ಇದರ ಉತ್ಪಾದನೆಗೆ ಹಿನ್ನಡೆಯಾಗಿತ್ತು.
ಹೋಂಡಾ ಬ್ರಿಯೊ: ಹೋಂಡಾ ಬ್ರಿಯೊ ಕಾರು ದೇಶದ ರಸ್ತೆಗೆ ಸೆಪ್ಟಂಬರ್ 2011ರಲ್ಲಿ ಆಗಮಿಸಿತ್ತು. ಈ ಕಾರು 1.2 ಲೀಟರಿನ ಎಂಜಿನ್ ಹೊಂದಿದ್ದು ನಾಲ್ಕು ಆವೃತ್ತಿಗಳಲ್ಲಿ ದೊರಕುತ್ತಿದೆ. ಇದರ ದರ ಸುಮಾರು 3.95 ಲಕ್ಷ ರುಪಾಯಿಯಿಂದ 5.1 ಲಕ್ಷ ರು.ವರೆಗಿದೆ. ನೂತನ ಬ್ರಿಯೊ ಕಾರು ಷೆವರ್ಲೆ ಬೀಟ್, ಹ್ಯುಂಡೈ ಐ10 ಮತ್ತು ಮಾರುತಿ ವ್ಯಾಗನಾರ್ ಕಾರು ಮಾರುಕಟ್ಟೆಗೆ ಪೈಪೋಟಿ ನೀಡುತ್ತಿದೆ.
ಉಳಿದ ಟಾಪ್ ಕಾರುಗಳನ್ನು ನೋಡಲು ಮುಂದಿನ ಪುಟಕ್ಕೆ ಪ್ರವೇಶಿಸಿ


Click it and Unblock the Notifications








