ಈ ಮೂರು ಕಾರುಗಳಲ್ಲಿ ಯಾವುದು ನಿಮಗಿಷ್ಟ?

ರೆನಾಲ್ಟ್ ಫ್ಲೂಯೆನ್ಸ್: ಫ್ರಾನ್ಸಿನ ಪ್ರೀಮಿಯಂ ಸೆಡಾನ್ ರೆನಾಲ್ಟ್ ಫ್ಲೂಯೆನ್ಸ್ ಕಳೆದ ವರ್ಷ ದೇಶದ ರಸ್ತೆಗಿಳಿದಿತ್ತು. ಇದರ ದರ ಸುಮಾರು 12.99 ಲಕ್ಷ ರುಪಾಯಿಯಿಂದ 14.40 ಲಕ್ಷ ರುಪಾಯಿವರೆಗಿದೆ. ಇದು ಪೆಟ್ರೋಲ್ ಮತ್ತು ಡೀಸೆಲ್ ಆಯ್ಕೆಗಳಲ್ಲಿ ದೊರಕುತ್ತಿದೆ. ಜಾಗತಿಕ ಮಾರುಕಟ್ಟೆಗೆ ಫ್ಲೂಯೆನ್ಸ್ 2010ರಲ್ಲಿ ಆಗಮಿಸಿತ್ತು. ಜಾಗತಿಕವಾಗಿ ಲಕ್ಷಕ್ಕಿಂತ ಹೆಚ್ಚು ಕಾರು ಮಾರಾಟವಾದ ಹೆಗ್ಗಳಿಕೆ ರೆನಾಲ್ಟ್ ಫ್ಲೂಯೆನ್ಸ್ ಗಿದೆ.
ಮಹೀಂದ್ರ ಆಂಡ್ ಮಹೀಂದ್ರ ಎಸ್ ಯುವಿ 5ಒಒ: ಸೆಪ್ಟಂಬರ್ 2011ರಲ್ಲಿ ರಸ್ತೆಗಿಳಿದ ಮಹೀಂದ್ರ ಸ್ಪೋರ್ಟ್ ಯುಟಿಲಿಟಿ ವೆಹಿಕಲ್ XUV 500 ಸೃಷ್ಟಿಸಿದ ಹವಾ ಮರೆಯುವ ಹಾಗಿಲ್ಲ. ಜನರ ಬೇಡಿಕೆಗೆ ಬೆದರಿದ ಕಂಪನಿಯು ಕೆಲವೇ ದಿನಗಳಲ್ಲಿ ಬುಕ್ಕಿಂಗ್ ಸ್ಥಗಿತಗೊಳಿಸಿ ಹೆಚ್ಚು ಉತ್ಪಾದನೆ ಆರಂಭಿಸಿತ್ತು. ಇದೀಗ ಎಕ್ಸ್ ಯುವಿ ಬುಕ್ಕಿಂಗ್ ಪುನಾರಂಭವಾಗಿದೆ. ಈ ಕಾರಿನ ದರ ಸುಮಾರು 10.80 ಲಕ್ಷ ರು.ನಿಂದ 12.80 ಲಕ್ಷ ರು. ಆಸುಪಾಸಿನಲ್ಲಿದೆ.


Click it and Unblock the Notifications








