2011 ಕಾರು: ಸನ್ನಿ, ವೆಂಚೂರ್ ಮತ್ತು ಸ್ಕೋಡಾ ಯೆಟಿ

ನಿಸ್ಸಾನ್ ಸನ್ನಿ ಡೀಸೆಲ್: ಸೆಪ್ಟಂಬರ್ 2010ರಲ್ಲಿ ನಿಸ್ಸಾನ್ ಸನ್ನಿ ಪೆಟ್ರೋಲ್ ಕಾರು ರಸ್ತೆಗಿಳಿದಿತ್ತು. ಡಿಸೆಂಬರ್ 2011ರಲ್ಲಿ ಕಂಪನಿಯು ಸನ್ನಿ ಡೀಸೆಲ್ ಆವೃತ್ತಿಯನ್ನು ಪರಿಚಯಿಸಿದೆ. ಇದರ ದರ ಸುಮಾರು 7.98 ಲಕ್ಷ ರು.ನಿಂದ 8.78 ಲಕ್ಷ ರು.ವರೆಗಿದೆ. ಈ ಕಾರಿನ ಮೈಲೇಜ್ ಲೀಟರಿಗೆ 21.64 ಕಿ.ಮೀ. ಇದೆ. ಬೆಂಗಳೂರಿನಲ್ಲಿ ಡ್ರೈವ್ ಸ್ಪಾರ್ಕ್ ತಂಡ ನಡೆಸಿದ ಸನ್ನಿ ಟೆಸ್ಟ್ ಡ್ರೈವ್ ವರದಿ ಓದಿರಿ.
ಸ್ಕೋಡಾ ಯೆಟಿ 4×2: ಸ್ಕೋಡಾ ಕಂಪನಿಯು 2010ರಲ್ಲಿ ಯೆಟಿ ಕಾರಿನ 4X4 ಆವೃತ್ತಿಯನ್ನು ಪರಿಚಯಿಸಿತ್ತು. ನವೆಂಬರ್ 2011ರಲ್ಲಿ ಕಂಪನಿಯು ಸ್ಕೋಡಾ ಯೆಟಿ 4×2 ಪರಿಚಯಿಸಿದೆ. ಇದರ ದರ ಸುಮಾರು 13.20 ಲಕ್ಷ ರುಪಾಯಿ ಆಸುಪಾಸಿನಲ್ಲಿದೆ. ಇದು 5 ಸ್ಪೀಡ್ ಮ್ಯಾನುಯಲ್ ಗೇರ್ ಬಾಕ್ಸ್ ಹೊಂದಿದೆ.


Click it and Unblock the Notifications








