ಟಾಪ್ ಮೈಲೇಜ್ ಲಗ್ಷುರಿ ಕಾರು: ಜಾಗ್ವಾರ್ ಎಕ್ಸ್‌ಜೆ
ಬ್ರಿಟನಿನ ಪ್ರೀಮಿಯಂ ಐಷಾರಾಮಿ ಕಾರು ಕಂಪನಿ ಜಾಗ್ವಾರ್ ಹೆಸರು ಭಾರತದಲ್ಲೂ ಪ್ರಖ್ಯಾತಿ ಪಡೆದಿದೆ. ಟಾಟಾ ಮೋಟರ್ಸ್ 2008ರಲ್ಲಿ ಈ ಕಂಪನಿಯನ್ನು ಸ್ವಾಧೀನ ಪಡಿಸಿಕೊಂಡಿತ್ತು. ಜಾಗ್ವಾರ್ ಕಂಪನಿಯ ಅತ್ಯಧಿಕ ಮೈಲೇಜ್ ಕಾರೆಂದರೆ ಎಕ್ಸ್‌ಜೆ ಡೀಸೆಲ್.
ಐಷಾರಾಮಿ ಸಲೂನ್ ಜಾಗ್ವಾರ್ ಎಕ್ಸ್‌ಜೆ ಪ್ರತಿಲೀಟರಿಗೆ ಹೆದ್ದಾರಿಯಲ್ಲಿ 12.5 ಕಿ.ಮೀ. ಮತ್ತು ಸಿಟಿ ರಸ್ತೆಯಲ್ಲಿ 8 ಕಿ.ಮೀ. ಮೈಲೇಜ್ ನೀಡುತ್ತದೆ. ಇದು 2,993 ಸಿಸಿ ಆರು ಸಿಲಿಂಡರ್ ಎಂಜಿನ್ ಹೊಂದಿದೆ. ಇದರ ತೂಕ 1,773 ಕೆಜಿ.
ಅತ್ಯಧಿಕ ಕಾರ್ಯಕ್ಷಮತೆಗೆ ಹೆಸರುವಾಸಿಯಾಗಿರುವ ಜಾಗ್ವಾರ್ ಎಕ್ಸ್‌ಜೆ ಎಂಜಿನ್ 275 ಪಿಎಸ್ ಪವರ್ ಮತ್ತು 600 ಎನ್ಎಂ ಟಾರ್ಕ್ ಪವರ್ ನೀಡುತ್ತದೆ. ಈ ಕಾರು 6 ಸ್ಪೀಡಿನ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಹೊಂದಿದೆ. ಈ ಕಾರಿನ ದರ 93.01 ಲಕ್ಷ ರು. ಆಸುಪಾಸಿನಲ್ಲಿದೆ. (ಕನ್ನಡ ಡ್ರೈವ್‌ಸ್ಪಾರ್ಕ್).


Click it and Unblock the Notifications
