ಕಾರಿನ ಎಕ್ಸಾಸ್ಟ್ ಹೊಗೆಯಿಂದ ಹೃದಯಕ್ಕೆ ಚಿಕಿತ್ಸೆ?

ಇಲ್ಲಿವರೆಗೆ ಕಾರಿನ ವಿಷಯುಕ್ತ ಹೊಗೆಯಿಂದ ಹಲವಾರು ಆರೋಗ್ಯ ಸಮಸ್ಯೆಗಳು ಉಂಟಾಗುವುದೆಂದು ಹೇಳಲಾಗಿತ್ತು. ಆದರೆ ಕಾರಿನ ಎಕ್ಸಾಸ್ಟ್ ಹೊರಸೂಸುವ ವಿಷಯುಕ್ತ ಪದಾರ್ಥಗಳಲ್ಲಿ ಹೃದಯದ ತೊಂದರೆಗಳನ್ನು ಗುಣಪಡಿಸುವ ಔಷಧಿಯೂ ಇದೆ ಎಂದು ನೂತನ ಸಂಶೋಧನೆಯೊಂದು ಹೇಳಿದೆ.

ಕಾರಿನ ಹೊಗೆಕೊಳವೆ ಹೊರಸೂಸುವ ವಿಷಯುಕ್ತ ರಾಸಾಯನಿಕಗಳಲ್ಲಿ ಕೆಲವು ರಾಸಾಯನಿಕಗಳು ಹೃದಯದ ಸಮಸ್ಯೆಗೆ ಪರಿಹಾರ ನೀಡಬಲ್ಲದು ಎಂದು ನೂತನ ಸಂಶೋಧನೆ ಹೇಳಿದೆ. ಹಂದಿಗಳ ಮೇಲೆ ಬ್ರಿಟನ್ ವಿಜ್ಞಾನಿಗಳು ಮಾಡಿದ ಈ ಪ್ರಯೋಗ ಯಶಸ್ವಿಯಾಗಿದೆ ಎಂದು ಡೈಲಿ ಮೈಲ್ ವರದಿ ಮಾಡಿದೆ.

ರಕ್ತನಾಳದಲ್ಲಿ ರಕ್ತದ ಪರಿಚಲನೆ ಸರಾಗಗೊಳಿಸಲು ಮತ್ತು ರಕ್ತ ಹೆಪ್ಪುಗಟ್ಟುವುದನ್ನು ತಡೆಗಟ್ಟಲು ಹೈಲ್ಯಾಂಡ್ ಮತ್ತು ಇಸ್ಲಾಂಡ್ಸ್ ಯುನಿವರ್ಸಿಟಿ(ಯುಎಚ್ಐ)ಯ ಸಂಶೋಧಕರು ಕಾರು ಎಕ್ಸಾಸ್ಟ್ ಹೊರಸೂಸುವ ಕಾರ್ಬನ್ ಮೊನೊಕ್ಷೈಡ್ ಮತ್ತು ನೈಟ್ರಿಕ್ ಆಕ್ಷೈಡ್ ಬಳಸಿದ್ದಾರೆ.

ಕಾರು ಹೊರಸೂಸುವ ವಿಷಯುಕ್ತ ಟಾಕ್ಸಿನ್ ಗಳನ್ನು ಅತಿಕಡಿಮೆ ಪ್ರಮಾಣದಲ್ಲಿ ಹೃದಯಕ್ಕೆ ನೀಡಿ ನಾವು ಸಂಶೋಧನೆ ನಡೆಸಿದ್ದೇವೆ. ಇದು ರಕ್ತದ ಹರಿವು ಸರಾಗಗೊಳಿಸಲು ಮತ್ತು ರಕ್ತ ಹೆಪ್ಪುಗಟ್ಟುವುದನ್ನು ತಡೆಗಟ್ಟಲು ಯಶಸ್ವಿಯಾಗಿದೆ ಎಂದು ಪ್ರೊಫೆಸರ್ ಅಯನ್ ಮೆಗ್ಸೆನ್ ಹೇಳಿದ್ದಾರೆ. ಅವರು ಈ ಸಂಶೋಧನ ತಂಡದ ಲೀಡರ್.

ಹೃದಯಾಘಾತ ಮತ್ತು ಸ್ಟ್ರೋಕ್ ಗಳಿಂದ ಬಳಲುವ ರೋಗಿಗಳಿಗೆ ನೂತನ ಸಂಶೋಧನೆಯು ನೆರವಾಗಲಿದೆ. "ಕಾರಿನ ಎಕ್ಸಾಸ್ಟ್ ಹೊರಸೂಸುವ ರಾಸಾಯನಿಕದ ಲಕ್ಷದ ಒಂದು ಭಾಗವನ್ನು(ಅತಿಕಡಿಮೆ) ಮಾತ್ರ ಚಿಕಿತ್ಸೆಗೆ ಬಳಸಲಾಗುವುದು" ಎಂದು ಮೆಗ್ನೆನ್ ಹೇಳಿದ್ದಾರೆ.

"ಭಾರಿ ಪ್ರಮಾಣದ ಇಂತಹ ಹೊಗೆ ಆರೋಗ್ಯಕ್ಕೆ ಅಪಾಯಕಾರಿ. ಆದರೆ ಸಣ್ಣ ಡೋಸ್ ನಿಂದ ಈ ರೀತಿಯ ಉಪಯೋಗಗಳೂ ಇವೆ" ಎಂದು ಜೆರೆಮಿ ಪಾರ್ಸೆನ್ ಹೇಳಿದ್ದಾರೆ. ಅವರು ಬ್ರಿಟನ್ ಹಾರ್ಟ್ ಪೌಂಡೆಷನ್ ನ ಸಹಾಯಕ ನಿರ್ದೇಶಕ.

More from DriveSpark

Article Published On: Friday, August 3, 2012, 12:25 [IST]
English summary
Small quantities of toxic chemicals found in car exhaust fumes to cure heart disease, the Daily Mail reported.
Read more on ಕಾರು car
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+