ಅಗ್ಗದ ಆಟೋಮ್ಯಾಟಿಕ್ ಕೊರೊಲಾ ಸ್ವಾಗತಕ್ಕೆ ರೆಡಿಯಾಗಿರಿ

ನೂತನ ಆವೃತ್ತಿಯ ಹೆಸರು ಟೊಯೊಟಾ ಕೊರೊಲಾ ಆಲ್ಟಿಸಿ ಜಿ-ಎಚ್ವಿ ಎಟಿ. ಇದು ಟೊಯೊಟಾದ 1.8 ಲೀಟರಿನ ಪೆಟ್ರೋಲ್ ಎಂಜಿನ್ ಹೊಂದಿರಲಿದೆ. ಕೊರೊಲಾದ ಕೆಲವು ಸ್ಟಾಂಡರ್ಡ್ ಫೀಚರ್ ಕೈಬಿಟ್ಟು ಹೋಗುವ ಕಾರಣ ನೂತನ ಕಾರಿನ ದರ ಕಡಿಮೆಯಾಗಿರಲಿದೆ.
ನೂತನ ಕೊರೊಲಾ ಕಾರು ದೇಶದ ಅಗ್ಗದ ಡಿ-ಸೆಗ್ಮೆಂಟ್ ಸೆಡಾನ್ ಕಾರಾಗಲಿದೆ. ಆಟೋಮ್ಯಾಟಿಕ್ ಗೇರ್ ಬಾಕ್ಸ್ ಕೇವಲ ಪೆಟ್ರೋಲ್ ಆವೃತ್ತಿಗೆ ಬರಲಿರುವುದು ಈ ಕಾರಿನಲ್ಲಿ ಇಷ್ಟವಾಗದ ಒಂದು ಸಂಗತಿಯಾಗಿದೆ. ಡೀಸೆಲ್ ಕಾರು ಹಳೆಯ 6 ಸ್ಪೀಡಿನ ಮ್ಯಾನುಯಲ್ ಗೇರ್ ಬಾಕ್ಸ್ ಹೊಂದಿರಲಿದೆ.
ಈಗಾಗಲೇ ನೂತನ ಕಾರಿನ ಕುರಿತು ಕಂಪನಿ ಬಾಯಿಬಿಟ್ಟಿದೆ. ದಿನಪತ್ರಿಕೆಗಳ ಜಾಹೀರಾತಿನಲ್ಲೂ ಹೊಸ ಆವೃತ್ತಿಯ ಹೆಸರಿದೆ. ಟಾಪ್ ಎಂಡ್ ವಿಎಲ್ ಪೆಟ್ರೋಲ್ ಆವೃತ್ತಿಗಿಂತ ನೂತನ G-HV AT Corolla ದರ ಸುಮಾರು 1.24 ಲಕ್ಷ ರು. ಕಡಿಮೆಯಾಗಿರಲಿದೆ. ಮ್ಯಾನುಯಲ್ ಆವೃತ್ತಿಗಿಂತ ಆಟೋಮ್ಯಾಟಿಕ್ ಆವೃತ್ತಿ ಕಡಿಮೆ ದರಕ್ಕೆ ಖರೀದಿಸಲು ಇದಕ್ಕಿಂತ ಅತ್ಯುತ್ತಮ ಅವಕಾಶ ಬೇರೆ ಸಿಗದು.
ಅತ್ಯುತ್ತಮ ಗುಣಮಟ್ಟದ ನಿರ್ಮಾಣ, ವಿಶ್ವಾಸನಿಯತೆ ಮತ್ತು ಕಡಿಮೆ ನಿರ್ವಹಣೆ ವೆಚ್ಚದ ಕಾರಣದಿಂದ ಕೊರೊಲಾ ಕಾರುಗಳು ಇಷ್ಟವಾಗುತ್ತವೆ. ಆದರೆ ನೂತನ ಎಚ್-ಜಿವಿ ಆಟೋಮ್ಯಾಟಿಕ್ ಆವೃತ್ತಿಯು ಕೊರೊಲಾದ ಎಲ್ಲಾ ಫೀಚರುಗಳನ್ನು ಹೊಂದಿರುವುದಿಲ್ಲವೆನ್ನುವುದು ತುಸು ಬೇಜಾರಿನ ಸಂಗತಿ.


Click it and Unblock the Notifications








