ಸಂಚಾರಿ ನಿಯಮ ಪಾಲಿಸಿದ್ರೆ ಪೊಲೀಸರಿಂದ ಉಡುಗೊರೆ
ಜನರು ಸಂಚಾರಿ ನಿಯಮ ಪಾಲಿಸುವಂತೆ ಮಾಡಲು ಟ್ರಾಫಿಕ್ ಪೊಲೀಸರು ಶತಾಯಗತಾಯ ಪ್ರಯತ್ನಿಸುತ್ತಾರೆ. ಅಂದೊಮ್ಮೆ ರಾಜ್ಯದ ಟ್ರಾಫಿಕ್ ಪೊಲೀಸರು ಹೆಲ್ಮೆಟ್ ಹಾಕಿದ ಸವಾರರಿಗೆ ಗುಲಾಬಿ ಹೂವು ಕೊಟ್ಟು ಉತ್ತೇಜಿಸಿದ್ದು ನಿಮಗೆ ನೆನಪಿರಬಹುದು.
ಚಂಡೀಗಢ ರಸ್ತೆಯು ಹೆಚ್ಚು ಶಿಸ್ತಿನ ಮತ್ತು ಕಠಿಣವಾದ ಟ್ರಾಫಿಕ್ ವ್ಯವಸ್ಥೆಯನ್ನು ಹೊಂದಿದೆ. ಅಲ್ಲಿ ಸಮರ್ಪಕ ಸಂಚಾರಿ ವ್ಯವಸ್ಥೆಗೆ ಮತ್ತು ಸಂಚಾರಿ ನೀತಿ ನಿಯಮಗಳನ್ನು ಜನರು ಪಾಲಿಸುವಂತೆ ಮಾಡುವಲ್ಲಿ ಅಲ್ಲಿನ ಟ್ರಾಫಿಕ್ ಪೊಲೀಸರ ಪರಿಶ್ರಮವೂ ಸಾಕಷ್ಟಿದೆ.
ಇದೀಗ ಚಂಡೀಗಢದ ಟ್ರಾಫಿಕ್ ಪೊಲೀಸರು ಅತ್ಯುತ್ತಮವಾಗಿ ಸಂಚಾರಿ ನಿಯಮ ಪಾಲಿಸಿದ ಜನರಿಗೆ ಉಡುಗೊರೆ ನೀಡಿ ಬೆಂಬಲಿಸಿದ್ದಾರೆ. ಅಲ್ಲಿನ ಐದು ಜನರನ್ನು ಅತ್ಯುತ್ತಮ ಚಾಲಕರೆಂದು ಆಯ್ಕೆ ಮಾಡಿದ ಸಂಚಾರಿ ಪೊಲೀಸರು ಉಡುಗೊರೆ ನೀಡಿದ್ದಾರೆ.
ರಾಜ್ಯದ ಟ್ರಾಫಿಕ್ ಪೊಲೀಸರು ಕೂಡ ಉಡುಗೊರೆ ನೀಡುವ ಮೂಲಕ ಸಂಚಾರಿ ನೀತಿನಿಯಮಗಳನ್ನು ಪಾಲಿಸುವಂತೆ ಜನರ ಮನವೊಲಿಸಿದರೆ ಚೆನ್ನಾಗಿತ್ತು ಅಲ್ಲವೇ?


Click it and Unblock the Notifications









