ಆರು ವರ್ಷದ ಪೋರನ ಮೇಲೆ ಫೈನ್ ಹಾಕಿದ ಟ್ರಾಫಿಕ್ ಪೊಲೀಸಪ್ಪ!

Traffic police fined 6 year old boy
ಇದು ಮೆಕ್ಸಿಕೊ ನಗರದಲ್ಲಿ ಇತ್ತೀಚೆಗೆ ಸುದ್ದಿಮಾಡಿದ ಘಟನೆ. ಸಂಚಾರಿ ನಿಯಮ ಉಲ್ಲಂಘಿಸಿದ ಕಾರಣಕ್ಕಾಗಿ ಆರು ವರ್ಷದ ಪೋರನ ಮೇಲೆ ಅಲ್ಲಿನ ಟ್ರಾಫಿಕ್ ಪೊಲೀಸರು ಫೈನ್ ಹಾಕಿದ್ದಾರೆ. ಈ ಘಟನೆ ನಡೆದದ್ದು ಡಿಸೆಂಬರ್ 27ರಂದು. ಅಲ್ಲಿಂದ ಇಲ್ಲಿವರೆಗೆ ಈ ಕೇಸ್ ಸಾಕಷ್ಟು ಏಳುಬೀಳು ಕಂಡಿದೆ. ಸ್ಟೋರಿ ಕೊಂಚ ಇಂಟ್ರೆಸ್ಟಿಂಗ್ ಆಗಿರೋ ಕಾರಣ ಈ ಸುದ್ದಿಯನ್ನು ಕನ್ನಡ ಡ್ರೈವ್ ಸ್ಪಾರ್ಕ್ ಹೆಕ್ಕಿ ನಿಮ್ಮ ಮುಂದಿರಿಸಿದೆ.

ಕ್ರಿಸ್ ಮಸ್ ಉಡುಗೊರೆಯಾಗಿ ದೊರಕಿದ ಆಟಿಕೆ ಬೈಕನ್ನು ಸ್ಪೋರ್ಟ್ ಯುಟಿಲಿಟಿ ವೆಹಿಕಲಿಗೆ ಡಿಕ್ಕಿ ಹೊಡೆಸಿದ್ದಾನೆ. ಆರು ವರ್ಷದ ಹುಡುಗನ ಹೆಸರು ಗೇಲ್ ಸ್ಯಾಂಟಿಗೊ. ಆತ ತನ್ನ ಮನೆಯ ಹತ್ತಿರದಲ್ಲಿ ರೈಡ್ ಮಾಡುತ್ತಿದ್ಗ. ಆಗ ಸ್ಟಾಪ್ ಸಿಗ್ನಲ್ ದಾಟಿ ಮುಂದಕ್ಕೆ ಹೋದ ಆಟಿಕೆ ಬೈಕ್ ಸ್ಪೋರ್ಟ್ ಯುಟಿಲಿಟಿ ವೆಹಿಕಲಿಗೆ ದಿಕ್ಕಿ ಹೊಡೆಯಿತು. ಪುಣ್ಯಕ್ಕೆ ಹುಡುಗನಿಗೆ ಏನೂ ಆಗಲಿಲ್ಲ.

"ಪುಟ್ಟ ಮಗುವಿನ ಮೇಲೆ ಫೈನ್ ಹಾಕಿರೋದು ಹಾಸ್ಯಾಸ್ಪದ ಎಂದು ಹೇಳಕೆ ನೀಡಿದ ಹುಡುಗನ ಅಮ್ಮ ಕಾರ್ಲಾ ನೊರಿಗೊ, "ಗ್ಯಾಸೊಲಿನ್ ಚಾಲಿತ ಚಿಕಣಿ ಆಟಿಕೆ ಬೈಕಿಗೆ ದಂಡ ವಿಧಿಸಿರುವುದು ಟ್ರಾಫಿಕ್ ಪೊಲೀಸರಿಗೆ ಬುದ್ಧಿ ಇಲ್ಲವೆಂದು ತೋರಿಸುತ್ತದೆ" ಎಂದು ಹೇಳಿದ್ದಾರೆ.

"ನನ್ ಮಗನಿಗೆ ಬೈಕ್ ವಾಪಸ್ ಮಾಡಬೇಕು ಮತ್ತು ವಿಧಿಸಿರುವ ದಂಡ ವಾಪಸ್ ಪಡೆಯಬೇಕು. ಅವನಲ್ಲಿ ವಾಹನ ಚಾಲನೆ ಪರವಾನಿಗೆ ಇಲ್ಲವೆಂದು ಫೈನ್ ಹಾಕ್ತರಲ್ವ? ಅವ್ರಿಗೆ ಬುದ್ದಿ ಇದೆಯಾ? ಅವನಲ್ಲಿ ಲೈಸನ್ಸ್ ಯಾಕಿಲ್ಲವೆಂದರೆ ಅವನಿಗಿನ್ನೂ ಆರು ವರ್ಷ" ಎಂದು ಕಾರ್ಲಾ ಕೋಪದಿಂದ ಕಿಡಿಕಾರುತ್ತ ಮಾಧ್ಯಮದ ಮುಂದೆ ಹೇಳಿದ್ದರು.


ಆಟಿಕೆ ಬೈಕನ್ನು ವಾಪಸ್ ಪಡೆಯಲು 183 ಡಾಲರ್ ದಂಡ ನೀಡಬೇಕೆಂದು ಟ್ರಾಫಿಕ್ ಪೊಲೀಸರು ತಿಳಿಸಿದಾಗ ಈ ಸುದ್ದಿಯನ್ನು ಮಾಧ್ಯಮದ ಮುಂದೆ ತರಲು ನಿರ್ಧರಿಸಿದಳು. ಕೊನೆಗೆ ಈಕೆಯ ಜಗಳಕ್ಕೆ ಮತ್ತು ಮಾಧ್ಯಮ ಬೆಂಬಲಕ್ಕೆ ಬೆದರಿದ ಪೊಲೀಸರು ತನಿಖೆ ನಡೆಸಿ ಈ ಘಟನೆಯಲ್ಲಿ ಸ್ಪೋರ್ಟ್ ಕಾರು ನಡೆಸುತ್ತಿದ್ದ ಮಹಿಳೆಯದ್ದೇ ತಪ್ಪು ಎಂದು ತೀರ್ಪು ನೀಡಿ ಪುಟ್ಟನ ಆಟಿಕೆ ಬೈಕನ್ನು ವಾಪಸ್ ನೀಡಿದ್ರು.

ಬೈಕ್ ಪಡೆದದ್ದು ಪುಟಾಣಿ ಗೇಲ್ ಗೆ ಖುಷಿಯನ್ನೇನೂ ನೀಡಿತ್ತು. ಆದ್ರೆ ಅಪಘಾತದ ನಂತರ ಅದು ಹಾಳಾಗಿದೆಯಂತೆ! ಪಾಪ್ ಗೇಲ್

Article Published On: Monday, January 23, 2012, 18:17 [IST]
English summary
Traffic police of Mexican city fined a 6 year old boy for riding his toy motorcycle without a license. Boy name Gael Santiago. He was riding his toy bike near his home, and that bike collided with an SUV that had jumped a stop sign. 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+