ಟ್ರಾಫಿಕ್ ಪೊಲೀಸರಿಂದ ವೈ ದಿಸ್ ಕೊಲವೆರಿ ಡಿ ಸಾಂಗು!

ಲವ್ವು, ಲವ್ವು, ಯುವರ್ ಲೈಫು, ಆಲ್ವೇಸ್ ಒಬೆ ರೂಲೂ,
ಟ್ರಾಫಿಕ್ ಕಾಪು ರಿಕ್ವೆಸ್ಟ್ ನೌ, ಕೇರ್ ಫುಲ್ಲಿ ಡ್ರೈವು
ಸೌಂಡ್ ಸ್ವಲ್ಪ ಇಂಟ್ರೆಸ್ಟಿಂಗ್ ಆಗಿದೆಯಲ್ವೆ. ಇತ್ತೀಚೆಗೆ ಹಿಟ್ಟಾದ ಧನುಷ್ ಕೊಲವೆರಿ ಹಾಡು ಹಲವು ಅವತರಣಿಕೆಯಲ್ಲಿ ಬಂದಿದೆ. ಇದೀಗ ಈ ಹಾಡನ್ನು ಟ್ರಾಫಿಕ್ ಪೊಲೀಸರು, ಜನರಿಗೆ ಸಂಚಾರಿ ಪಾಠಗಳನ್ನು ಹೇಳಿಕೊಡಲು ಬಳಸಿದ್ದಾರೆ.
ದಿಸ್ ಸಾಂಗ್ ಫಾರ್ ಪುಣೆ ಸೇಫ್, ವಿ ಡೋಂಟ್ ಹ್ಯಾವ್ ಚಾಯ್ಸ್
ವೈ ದಿಸ್ ಆಕ್ಸಿಡೆಂಟ್, ಟ್ರಾಫಿಕ್ ಜಂಪಿಂಗ್, ಪೊಲ್ಯುಷನ್ ಜೀ...
ಕೊಲವೆರಿ ಡಿ ಹಾಡಿನ ಮೂಲಕ ಪುಣೆ ಪೊಲೀಸರು ಅಪಘಾತ ಕಡಿಮೆ ಮಾಡಿ, ಟ್ರಾಫಿಕ್ ನಿಯಮಗಳನ್ನು ಗಾಳಿಗೆ ತೂರದಿರಿ ಮತ್ತು ವಾಯು ಮಾಲಿನ್ಯ ಕಡಿಮೆ ಮಾಡಿ ಎಂದು ಹೇಳುತ್ತಾರೆ. ಬರೀ ಇಷ್ಟೇ ಅಲ್ಲ.
"ಫಾಲೊ ಸಿಗ್ನಲ್ ಇನ್ ಎ ಚೌಕ್
ಝೀಬ್ರಾ ಕ್ರಾಸಿಂಗ್ ಫಾರ್ ಎ ವಾಕು
ಯೂಸ್ ಬೆಲ್ಟ್ ಇನ್ ಎ ಕಾರ್,
ಯೂಸ್ ಹೆಲ್ಮೆಟ್ ಆನ್ ಎ ಹೆಡ್...
ಈ ಹಾಡಿನಲ್ಲಿ ಹೀಗೆ ಸಂಚಾರಿ ನಿಯಮಗಳನ್ನು, ಆದೇಶಗಳನ್ನು ಆತ್ಮೀಯವಾಗಿ ಹೇಳಲಾಗಿದೆ. ಒಟ್ಟಾರೆ ಈ ಹಾಡು ಪುಣೆ ಸಂಚಾರಿ ಪೊಲೀಸರ ಕ್ರಿಯೆಟಿವ್ ಐಡಿಯಾ. ಈ ಹಾಡು ಕಳೆದೆರಡು ದಿನಗಳಿಂದ ಇಂಟರ್ನೆಟಿನಲ್ಲಿ ಓಡಾಡುತ್ತಿದೆ.
"ಹೆಚ್ಚು ಜನರನ್ನು ಗಮನ ಸೆಳೆಯವು ಟ್ಯೂನ್ ರಚಿಸಲು ಬಯಸಿದ್ದೇವು. ಜನಪ್ರಿಯ ಕೊಲವೆರಿ ಡಿ ಹಾಡನ್ನು ಇದಕ್ಕಾಗಿ ಬಳಸಿಕೊಂಡೆವು" ಎಂದು ಪುಣೆ ಟ್ರಾಫಿಕ್ ಪೊಲೀಸ್ ವಿಭಾಗದ ಡೆಪ್ಯೂಟಿ ಕಮಿಷನರ್ ವಿಶ್ವಾಸ್ ಪಾಂಡೆ ಹೇಳಿದ್ದಾರೆ. ಇಂಗ್ಲಿಷ್, ಮರಾಠಿ ಮತ್ತು ಇಂಗ್ಲಿಷ್ ಪದಗಳನ್ನು ಬಳಸಿ ಈ ಹಾಡನ್ನು ರಚಿಸಲಾಗಿದೆ.
ರಸ್ತೆಯಲ್ಲಿನ ಕೊಲ್ಲುವ ಉನ್ಮಾದಕ್ಕೆ ಕೊಲವೆರಿ ಡಿ ಸಾಂಗು ಬ್ರೇಕು ಹಾಕುವುದೇ? ಕಾದುನೋಡಬೇಕಿದೆ. ಎನಿವೇ ನೀವೊಮ್ಮೆ ಕೊಲವೆರಿ ಡಿ ಟೋನ್ ನಲ್ಲಿ ಈ ಹಾಡನ್ನು ಹಾಡಲು ಪ್ರಯತ್ನಿಸಿ.


Click it and Unblock the Notifications