ಏಕೀಕೃತ ರಸ್ತೆ ತೆರಿಗೆ ವಿಧಿಸಲು ಸರಕಾರ ಚಿಂತನೆ

ಈಗ ಸ್ಥಳೀಯ ಅವಶ್ಯಕತೆ ಮತ್ತು ಸಂಚಾರಿ ದಟ್ಟಣೆಗೆ ಅನುಗುಣವಾಗಿ ವಿವಿಧ ರೀತಿಯ ರಸ್ತೆ ತೆರಿಗೆ ವಿಧಿಸಲಾಗುತ್ತಿದೆ. ಚತ್ತಿಸ್ ಗಡಕ್ಕೆ ಹೋಲಿಸಿದರೆ ಕರ್ನಾಟಕದಲ್ಲಿ ರಸ್ತೆ ತೆರಿಗೆ ಹೆಚ್ಚು. ದೇಶದ ವಿವಿಧ ರಾಜ್ಯಗಳಲ್ಲಿ ರಸ್ತೆ ತೆರಿಗೆ ಶೇಕಡ 2ರಿಂದ ಶೇಕಡ 18ರವರೆಗಿದೆ.
ಇದೀಗ ಕೇಂದ್ರ ಸರಕಾರವು ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳೆರಡಕ್ಕೂ ರಸ್ತೆ ತೆರಿಗೆಯನ್ನು ವಾಹನದ ಎಕ್ಸ್ ಶೋರೂಂ ದರದ ಶೇಕಡ 6ಕ್ಕೆ ನಿಗದಿ ಪಡಿಸುವ ನಿರೀಕ್ಷೆಯಲ್ಲಿದೆ. ಇದರ್ಥವೇನೆಂದರೆ ವಿವಿಧ ರಾಜ್ಯಗಳಲ್ಲಿನ ರಸ್ತೆ ತೆರಿಗೆ ಹೆಚ್ಚಾಗಲಿದೆ.
ಅಂದರೆ ಕೆಲವು ರಾಜ್ಯಗಳು ಶೇಕಡ 6ಕ್ಕಿಂತ ಕಡಿಮೆ ರಸ್ತೆ ತೆರಿಗೆ ವಿಧಿಸುತ್ತಿವೆ. ಎಲ್ಲ ಕಡೆ ಒಂದೇ ರೀತಿ ಆಗುವ ಸಮಯದಲ್ಲಿ ಕಡಿಮೆ ತೆರಿಗೆ ಇರುವ ರಾಜ್ಯಗಳು ಕೂಡ ಅನಿವಾರ್ಯವಾಗಿ ರಸ್ತೆ ತೆರಿಗೆ ಹೆಚ್ಚಿಸಬೇಕಾಗುತ್ತದೆ.
ಆದರೆ ಕರ್ನಾಟಕ ಮತ್ತು ಮಹರಾಷ್ಟ್ರದವರಿಗೆ ಇದು ಶುಭಸುದ್ದಿಯಾದೀತು. ಯಾಕೆಂದರೆ ಈ ರಾಜ್ಯಗಳಲ್ಲಿ ರಸ್ತೆ ತೆರಿಗೆ ಅತ್ಯಧಿಕವಾಗಿದೆ. ಏಕೀಕೃತ ತೆರಿಗೆ ವಿಧಿಸಿದರೆ ಈ ರಾಜ್ಯಗಳು ರಸ್ತೆ ತೆರಿಗೆಯನ್ನು ಕಡಿಮೆ ಮಾಡಬೇಕಾಗುತ್ತದೆ. ರಸ್ತೆ ತೆರಿಗೆಯನ್ನು ಆನ್ ಲೈನ್ ನಲ್ಲಿ ಪಾವತಿಸುವ ಯೋಜನೆ ರೂಪಿಸುವ ಕುರಿತೂ ಸರಕಾರ ಯೋಚಿಸುತ್ತಿದೆ.


Click it and Unblock the Notifications








