ಉಸೇನ್ ಬೋಲ್ಟ್ ಚಿನ್ನದ ಕಾರಿನ ಜಲಕ್
ಭೂಮಿಯ ಅತಿ ವೇಗದ ಓಟಗಾರ ಖ್ಯಾತಿಯ ಹ್ಯಾಟ್ರಿಕ್ ಒಲಿಂಪಿಕ್ ಪದಕ ವಿಜೇತ ವೀರ ಉಸೇನ್ ಬೋಲ್ಟ್ ಅವರಿಗಾಗಿ ನಿಸ್ಸಾನ್ ಜಿಟಿ-ಆರ್ ಪ್ರತ್ಯೇಕವಾಗಿ ತಯಾರಿಸಲಾದ ಕಾರು ಹರಾಜಿಗೆ ಇಡಲಾಗುತ್ತಿದೆ.
ಮೂಲತ: ಜಮೈಕಾ ಮೂಲದವರಾದ ಉಸೇನ್ ಉತ್ತಮ ಮಾನವೀಯ ವ್ಯಕ್ತಿತ್ವವನ್ನು ಹೊಂದಿದ್ದು, ಇದರಂತೆ ಹಿಂದುಳಿದ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸಹಾಯಾಸ್ತ ಚಾಚಿದ್ದಾರೆ.
ಆನ್‌ಲೈನ್ ಶಾಪಿಂಗ್ ವೆಬ್‌ಸೈಟ್ ಆದ ಇ ಬೇಯಲ್ಲಿ ಕಾರನ್ನು ಹರಾಜಿಗೆ ಇಡಲಾಗಿದೆ. ನವೆಂಬರ್ 22ರಿಂದ ಡಿಸೆಂಬರ್ 2ರ ವರೆಗೆ ಸಾಗಲಿರುವ ಹರಾಜು ಪ್ರಕ್ರಿಯೆಯಲ್ಲಿ ಸಂಗ್ರಹವಾಗುವ ಮೊತ್ತವನ್ನು ಸಹಾಯಾರ್ಥ ಸಂಸ್ಥೆಗೆ ನೀಡಲಾಗುವುದು.
ಮಕ್ಕಳ ಉತ್ತಮ ವಿದ್ಯಾಭ್ಯಾಸ ಹಾಗೂ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಬೋಲ್ಟ್ ಇಂತಹದೊಂದು ಮಹತ್ತರ ಕಾರ್ಯಕ್ಕೆ ಮುಂದಾಗಿದ್ದಾರೆ. ನಿಸ್ಸಾನ್ ಸಂಸ್ಥೆ ಈ ವಿಷಯವನ್ನು ಅಧಿಕೃತವಾಗಿ ಘೋಷಿಸಿದೆ.
ಈ ಕಾರಿನ ಮತ್ತೊಂದು ವಿಶೇಷತೆ ಏನೆಂದರೆ ಚಿನ್ನದ ಲೇಪನದಿಂದ ತಯಾರಿಸಲಾಗಿರುವ ನಿಸ್ಸಾನ್ ಜಿಟಿಆರ್ ಕಾರಿನಲ್ಲಿ ಬೋಲ್ಟ್ ಹಸ್ತಾಕ್ಷರ ಕೂಡಾ ಇರಲಿದೆ. ಪ್ರಸಕ್ತ ತಿಂಗಳಲ್ಲೇ ಇ-ಬೇ ಮುಖಾಂತರ ಕಾರು ಹರಾಜಿಗೆ ಒಳಗಾಗಲಿದ್ದು, ಇದರಿಂದ ಬರಲಿರುವ ಹಣವನ್ನು ಒಲಿಂಪಿಕ್ ಚಾಂಪಿಯನ್ ತವರೂರಿನ ಮಕ್ಕಳ ಹಾಗೂ ಯುವ ಜನರ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಅವಕಾಶಗಳಿಗಾಗಿ ಬಳಸಲಾಗುವುದು.
ಹಾಗಿದ್ದರೆ ಉಸೇನ್ ಬೋಲ್ಟ್‌ನ ಚಿನ್ನದ ಕಾರಿನ ಜಲಕ್ ನೋಡೋಣ.

ಉಸೇನ್ ಬೋಲ್ಟ್ ಚಿನ್ನದ ಕಾರಿನ ಜಲಕ್

ಉಸೇನ್ ಬೋಲ್ಟ್ ಚಿನ್ನದ ಕಾರಿನ ಜಲಕ್

ಉಸೇನ್ ಬೋಲ್ಟ್ ಚಿನ್ನದ ಕಾರಿನ ಜಲಕ್

ಉಸೇನ್ ಬೋಲ್ಟ್ ಚಿನ್ನದ ಕಾರಿನ ಜಲಕ್

ಉಸೇನ್ ಬೋಲ್ಟ್ ಚಿನ್ನದ ಕಾರಿನ ಜಲಕ್

ಉಸೇನ್ ಬೋಲ್ಟ್ ಚಿನ್ನದ ಕಾರಿನ ಜಲಕ್

ಉಸೇನ್ ಬೋಲ್ಟ್ ಚಿನ್ನದ ಕಾರಿನ ಜಲಕ್

ಉಸೇನ್ ಬೋಲ್ಟ್ ಚಿನ್ನದ ಕಾರಿನ ಜಲಕ್

ಉಸೇನ್ ಬೋಲ್ಟ್ ಚಿನ್ನದ ಕಾರಿನ ಜಲಕ್

ಉಸೇನ್ ಬೋಲ್ಟ್ ಚಿನ್ನದ ಕಾರಿನ ಜಲಕ್

ಉಸೇನ್ ಬೋಲ್ಟ್ ಚಿನ್ನದ ಕಾರಿನ ಜಲಕ್

ಉಸೇನ್ ಬೋಲ್ಟ್ ಚಿನ್ನದ ಕಾರಿನ ಜಲಕ್

ಉಸೇನ್ ಬೋಲ್ಟ್ ಚಿನ್ನದ ಕಾರಿನ ಜಲಕ್

ಉಸೇನ್ ಬೋಲ್ಟ್ ಚಿನ್ನದ ಕಾರಿನ ಜಲಕ್


Click it and Unblock the Notifications








