45 ಸಾವ್ರದ ಸ್ಕೂಟರಿಗೆ 12 ಲಕ್ಷ ರು.ನ ಪ್ಯಾನ್ಸಿ ನಂಬರ್

ಪಂಜಾಬಿನ ವಿಕ್ಕಿ ಬ್ರೇರ್ ಹರಾಜಿನಲ್ಲಿ ಪಿಬಿ-30-ಜೆ-0003 ನಂಬರನ್ನು 12 ಲಕ್ಷ ರುಪಾಯಿಗೆ ತನ್ನದಾಗಿಸಿಕೊಂಡಿದ್ದಾರೆ. ತನ್ನಲ್ಲಿರುವ ಹಳೆಯ ಐಕಾನಿಕ್ ವೆಸ್ಪಾ ಸ್ಕೂಟರ್ ಗಾಗಿ ಈ ನಂಬರ್ ಖರೀದಿಸಿದ್ದು ಎಂದಾಗ ಎಲ್ಲರೂ ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದಾರೆ.
ಇಂಟ್ರೆಸ್ಟಿಂಗ್ ಎಂದರೆ ಬೇರೊಬ್ಬ ವ್ಯಕ್ತಿ ಈ ನಂಬರ್ ಪ್ಲೇಟನ್ನು ತನ್ನ ದುಬಾರಿ ಮರ್ಸಿಡಿಸ್ ಬೆಂಝ್ ಕಾರಿಗೆ ಖರೀದಿಸಲು ಇಚ್ಚಿಸಿದ್ದರು. ಅದಕ್ಕಾಗಿ ಹರಾಜಿನಲ್ಲಿ ಹತ್ತು ಲಕ್ಷ ರು.ವರೆಗೆ ಬಂದಿದ್ದರು. ಆದರೆ ರಿಕ್ಕಿ ಕ್ರೇಝಿನೆದರೂ 12 ಲಕ್ಷ ರು. ನೀಡಲಾಗದೇ ಆತ ಹಿಂದೆ ಸರಿದಿದ್ದಾರೆ.
ಮೂರು ಮತ್ತು ಏಳು ಅಂಕೆ ನನ್ನ ಅದೃಷ್ಟದ ಸಂಖ್ಯೆ ಎನ್ನುವುದು ರಿಕ್ಕಿ ಉವಾಚ. ಈಗಾಗಲೇ ಸ್ಕಾರ್ಪಿಯೊ ಕಾರಿಗೆ 0007 ಅಂಕೆಯ ವಿಐಪಿ ನಂಬರ್ ಪಡೆದಿದ್ದಾನೆ.
ಕೆಲವು ತಿಂಗಳ ಹಿಂದೆ ದುಬೈನಲ್ಲಿ ನಡೆದ ಹರಾಜೊಂದರಲ್ಲಿ ದ್ವಿಚಕ್ರ ವಾಹನದ ನಂಬರ್ ಪ್ಲೇಟ್ ಸಂಖ್ಯೆ ಯೊಂದು ಸುಮಾರು 18 ಕೋಟಿ ರೂಪಾಯಿಗೆ ಬಿಕರಿಯಾಗಿತ್ತು. ಕೆ 50 ಎಂಬ ನಂಬರ್ ಪ್ಲೇಟನ್ನು ಅತ್ಯಧಿಕ ದರಕ್ಕೆ ಹರಾಜು ಮಾಡಲಾಗಿದೆ ಎಂದು ರಸ್ತೆ ಮತ್ತು ಸಾರಿಗೆ ಅಥಾರಿಟಿ ಪ್ರಕಟಣೆಯಲ್ಲಿ ತಿಳಿಸಿತ್ತು.
ಚಂಡಿಗಡದಲ್ಲಿ ಕೆಲವು ದಿನದ ಹಿಂದೆ ವಾಹನ ರಿಜಿಸ್ಟ್ರೇಷನ್ ಸಂಖ್ಯೆ ಹರಾಜು ನಡೆಯಿತು. ಇದರಲ್ಲಿ ಎಕೆ-47 ಸಂಖ್ಯೆ 3.10 ಲಕ್ಷ ರು.ಗೆ ಹರಾಜಾಗಿದೆ. ಗನ್ ಹೆಸರಿನ ನೋಂದಣಿ ಸಂಖ್ಯೆ ಪಡೆಯಲು ಹೆಚ್ಚು ಜನರಿಗೆ ಇಷ್ಟವಾಗಿತ್ತು.
ಮಂತ್ರಿಗಳು, ರಾಜಕಾರಣಿಗಳು, ಪೋಲಿಸ್ ಅಧಿಕಾರಿಗಳು, ಉದ್ಯಮಿಗಳು ಮತ್ತು ವಿವಿಧ ಕ್ಷೇತ್ರದಲ್ಲಿ ದುಡಿಯುತ್ತಿರುವ ಪ್ರಮುಖ ವ್ಯಕ್ತಿಗಳಿಗೆ ಇಂತಹ ಕಾರು ನಂಬರ್ ಶೋಕಿ ಜಾಸ್ತಿ. ಇವರು ತಮಗೆ ಹಿಡಿಸಿದ ನಂಬರುಗಳು ಎಷ್ಟು ದುಬಾರಿಯಾಗಿದ್ದರೂ ಸರಿ ದೂಸರ ಮಾತನಾಡದೇ ಖರೀದಿಸುತ್ತಾರೆ.
ಬೆಂಗಳೂರು ಆರ್ ಟಿಒ ಮಾಹಿತಿ ಪ್ರಕಾರ ಶುಲ್ಕ ಹೆಚ್ಚಿಸುವ ಮೊದಲು ಅಂದರೆ ಜನವರಿ 2009ರಿಂದ ಜನವರಿ 2010ರ ಅವಧಿಯಲ್ಲಿ ಸುಮಾರು 405 ವಾಹನ ಮಾಲೀಕರು ರನ್ನಿಂಗ್ ಸೀರಿಸ್ ನ ಫ್ಯಾನ್ಸಿ ನಂಬರ್ ಗಾಗಿ ಬುಕ್ಕಿಂಗ್ ಮಾಡಿದ್ದರು. 56 ಜನರು ಅಡ್ವಾನ್ಸ್ ಸೀರಿಸ್ ನಂಬರ್ ಗಾಗಿ ಕಾದಿರಿಸಿದ್ದರು. ಆದರೆ ನಂತರ ಫ್ಯಾನ್ಸಿ ನಂಬರ್ ಗೆ ಆರ್ ಟಿಒ ಶುಲ್ಕ ಹೆಚ್ಚಿಸಿದ್ದರಿಂದ ಜನರಲ್ಲಿ ಫ್ಯಾನ್ಸಿ ನಂಬರ್ ಕ್ರೇಝ್ ಗಮನಾರ್ಹವಾಗಿ ಕಡಿಮೆಯಾಗಿದೆ.


Click it and Unblock the Notifications








