ಕ್ರಿಕೆಟಿಗ ವಿರಾಟ್ ಕೊಹ್ಲಿಗೆ ರೆನೊ ಡಸ್ಟರ್ ಬಹುಮಾನ

Posted By:

2012 ಮೈಕ್ರೊಮ್ಯಾಕ್ಸ್ ಕ್ರಿಕೆಟ್ ಕಪ್ ನಲ್ಲಿ ಅಮೋಘ ಪ್ರದರ್ಶನ ನೀಡಿದ ದೇಶದ ಕ್ರಿಕೆಟ್ ತಂಡದ ಉಪನಾಯಕ ವಿರಾಟ್ ಕೋಹ್ಲಿ ಹೊಸ ಕಾರೊಂದನ್ನು ಉಡುಗೊರೆಯಾಗಿ ಪಡೆದಿದ್ದಾರೆ. ಈ ಟೂರ್ನಿಯ ಪ್ರಾಯೋಜಕ ಕಂಪನಿಯಾದ ರೆನೊ ಇಂಡಿಯಾ ನೂತನ ಡಸ್ಟರ್ ಕಾರನ್ನು ವಿರಾಟ್ ಕೋಹ್ಲಿಗೆ ನೀಡಿದೆ.

ರೆನೊ ಇಂಡಿಯಾ ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ಉಪಾಧ್ಯಕ್ಷರಾದ ಲೆನ್ ಕುರೆನ್ ನೂತನ ಕಾರಿನ ಕೀಲಿಕೈಯನ್ನು ವಿರಾಟ್ ಕೋಹ್ಲಿಗೆ ಹಸ್ತಾಂತರಿಸಿದ್ದಾರೆ. ವಿರಾಟ್ ಕೋಹ್ಲಿ ತನ್ನ ತಂಡದೊಂದಿಗೆ ನೂತನ ಕಾರಿನೊಂದಿಗೆ ಒಂದು ರೌಂಡ್ ಹೊಡೆದು ಹರ್ಷ ವ್ಯಕ್ತಪಡಿಸಿದ್ದಾರೆ.

ವಿರಾಟ್ ಕೋಹ್ಲಿ ಟೊಯೊಟಾ ಕಿರ್ಲೊಸ್ಕರ್ ಮೋಟರ್ ಕಂಪನಿಯ ಬ್ರಾಂಡ್ ಅಂಬಾಸಡರ್ ಆಗಿದ್ದಾರೆ. ಪ್ರಸಕ್ತ ವರ್ಷದ ತಿಂಗಳ ಏಪ್ರಿಲ್ ನಲ್ಲಿ ಈ ಡೀಲಿಗೆ ಸಹಿ ಹಾಕಿದ್ದರು. ರೆನೊ ಡಸ್ಟರ್ ಕಳೆದ ತಿಂಗಳು ದೇಶದ ರಸ್ತೆಗೆ ಆಗಮಿಸಿತ್ತು.

ರೆನೊ ಡಸ್ಟರ್ ಬಗ್ಗೆ: ನೂತನ ರೆನೊ ಡಸ್ಟರ್ ಒಟ್ಟು ಆರು ಆವೃತ್ತಿಗಳಲ್ಲಿ ಲಭ್ಯವಿದೆ. ಅದರಲ್ಲಿ ಎರಡು ಪೆಟ್ರೋಲ್ ಆವೃತ್ತಿ. ನಾಲ್ಕು ಡೀಸೆಲ್ ಆವೃತ್ತಿ. ಈ ಕಾರಿನ ಒಟ್ಟಾರೆ ಉದ್ದ 4315 ಎಂಎಂ. ಇದು 106.6 ಅಶ್ವಶಕ್ತಿಯ 1.6 ಲೀಟರಿನ ಪೆಟ್ರೋಲ್ ಎಂಜಿನ್, 83.8 ಅಶ್ವಶಕ್ತಿಯ 1.5 ಲೀಟರಿನ ಡೀಸೆಲ್ ಎಂಜಿನ್ ಮತ್ತು 103.8 ಅಶ್ವಶಕ್ತಿ ನೀಡುವ 1.5 ಲೀಟರಿನ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ದೊರಕುತ್ತದೆ.

ರೆನೊ ಡಸ್ಟರ್ ದರ

ಆರ್‌ಎಕ್ಸ್ಇ 1.6 ಪೆಟ್ರೋಲ್: 7.19 ಲಕ್ಷ ರುಪಾಯಿ

ಆರ್‌ಎಕ್ಸ್ಎಲ್ 1.6 ಪೆಟ್ರೋಲ್: 8.19 ಲಕ್ಷ ರು.

ಆರ್‌ಎಕ್ಸ್ಇ 1.5 ಡೀಸೆಲ್: 7.99 ಲಕ್ಷ ರು.

ಆರ್‌ಎಕ್ಸ್ಎಲ್ 1.5 ಡೀಸೆಲ್: 9.99 ಲಕ್ಷ ರು.

ಆರ್‌ಎಕ್ಸ್ಎಲ್ 1.5 ಡೀಸೆಲ್: 8.99 ಲಕ್ಷ ರು.

ಆರ್‌ಎಕ್ಸ್ಎಲ್ 1.5 ಡೀಸೆಲ್(110 ಪಿಎಸ್ ಪವರ್): 9.99 ಲಕ್ಷ ರು.

ಆರ್‌ಎಕ್ಸ್‌ಝಡ್ 1.5 ಡೀಸೆಲ್(110 ಪಿಎಸ್): 10.99 ಲಕ್ಷ ರು.

ಆರ್‌ಎಕ್ಸ್‌ಝಡ್ 1.5 ಡೀಸೆಲ್: 11.29 ಲಕ್ಷ ರು.

ರೆನೊ ಡಸ್ಟರ್ ಎಸ್‌ಯುವಿ ವಿಮರ್ಶೆ ಓದಿ

English summary
Virat Kohli is now the proud owner of the new Renault Duster. The Indian cricket vice captain was awarded the man of the match award at the recently concluded five match one day international series against Sri Lanka which India won 4-1. The Duster is Renault's cheapest SUV in India.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark