ದೇಶದಲ್ಲಿ ಫೋಕ್ಸ್ ವ್ಯಾಗನ್ ಕಾರುಗಳಿಗೆ ಅತ್ಯಧಿಕ ಬೇಡಿಕೆ

Volkswagen Group
ಕಳೆದ ವರ್ಷ ಫೋಕ್ಸ್ ವ್ಯಾಗನ್ ಗ್ರೂಪ್ ಒಟ್ಟಾರೆ ವಾಹನ ಮಾರಾಟ ಶೇಕಡ 109.3ರಷ್ಟು ಪ್ರಗತಿ ಕಂಡಿದೆ. "ಕಂಒನಿಯು 1,11, 623 ಯುನಿಟ್ ಕಾರುಗಳನ್ನು ಮಾರಾಟ ಮಾಡಿದೆ. ಕಂಪನಿಯು 2011ರಲ್ಲಿ ಚಕನ್ ಘಟಕದಲ್ಲಿ 1,05,535 ಯುನಿಟ್ ಕಾರುಗಳನ್ನು ಉತ್ಪಾದಿಸಿತ್ತು" ಎಂದು ಫೋಕ್ಸ್ ವ್ಯಾಗನ್ ಗ್ರೂಪ್ ಪ್ರಮುಖ ಅಧಿಕಾರಿ ಜಾನ್ ಚಕೊ ಹೇಳಿದ್ದಾರೆ.

ದೇಶದಲ್ಲಿ ಆಡಿ, ಸ್ಕೋಡಾ ಮತ್ತು ಫೋಕ್ಸ್ ವ್ಯಾಗನ್ ಮೂರು ಕಂಪನಿಗಳು ಜೊತೆಯಾಗಿ 1,11,623 ಇಷ್ಟು ವಾಹನಗಳನ್ನು ಮಾರಾಟ ಮಾಡಿದೆ. ಇದಕ್ಕೂ ಹಿಂದಿನ ವರ್ಷ ಫೋಕ್ಸ್ ವ್ಯಾಗನ್ ಗ್ರೂಪ್ ಒಟ್ಟು 53,341 ಕಾರುಗಳನ್ನು ಮಾರಾಟ ಮಾಡಿತ್ತು.

ಫೋಕ್ಸ್ ವ್ಯಾಗನ್ ಕಂಪನಿಗೆ ಕಳೆದ ವರ್ಷ ಮರೆಯಲಾಗದ ವರ್ಷ. ಯಾಕೆಂದರೆ ಕಂಪನಿಯು ದೇಶದ ಚಕನ್ ಘಟಕದಲ್ಲಿ 50 ಸಾವಿರನೇ ಮತ್ತು 1 ಲಕ್ಷನೇ ಕಾರನ್ನು ಉತ್ಪಾದಿಸಿತ್ತು. ಫೋಕ್ಸ್ ವ್ಯಾಗನ್ ಗ್ರೂಪ್ ಕಳೆದ ವರ್ಷ ಒಟ್ಟು 10 ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸಿತ್ತು. ಒಟ್ಟಾರೆ ಫೋಕ್ಸ್ ವ್ಯಾಗನ್ ಗ್ರೂಪಿನ 21 ಕಾರುಗಳು ದೇಶದಲ್ಲಿ ಮಾರಾಟವಾಗುತ್ತಿವೆ.

ಕಂಪನಿಯ ಮಾರುಕಟ್ಟೆ ಪಾಲು 2010ರಲ್ಲಿ ಶೇಕಡ 2.5ರಷ್ಟಿತ್ತು. ಇದು 2011ಕ್ಕೆ ಶೇಕಡ 4.9 ಅಂದರೆ ಎರಡುಪಟ್ಟು ಹೆಚ್ಚಾಗಿದೆ. ಕಂಪನಿಯ ಡೀಲರ್ಷಿಪ್ ನೆಟ್ ವರ್ಕ್ ಕೂಡ ದೇಶದಲ್ಲಿ ಹೆಚ್ಚಾಗಿದೆ. 2010ರಲ್ಲಿ ದೇಶದಲ್ಲಿ ಫೋಕ್ಸ್ ವ್ಯಾಗನ್ ಗ್ರೂಪ್ 56 ಡೀಲರುಗಳನ್ನು ಹೊಂದಿತ್ತು. ಆದರೆ ಇದೀಗ ಇದು 219 ಡೀಲರ್ ನೆಟ್ ವರ್ಕ್ ಹೊಂದಿದೆ.

More from DriveSpark

Article Published On: Saturday, January 14, 2012, 11:37 [IST]
English summary
Volkswagen Group India achieved a high growth in 2011. VW Group sold 1,11,623 cars in the year 2011 and produced 1,05,535 cars Chakan plant.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+