ಸಣ್ಣಕಾರು ಅಪ್ ಬರದಿದ್ರೆ ಫೋಕ್ಸ್‌ವ್ಯಾಗನ್ ಡೌನ್

ದೇಶದಲ್ಲಿ ವಾಹನ ಮಾರಾಟ ಇಳಿಕೆಗೆ ಕಾರಣವೇನು ಎನ್ನುವುದನ್ನು ಅರಿಯಲು ಪ್ರಯತ್ನಿಸುವುದಾಗಿ ಫೋಕ್ಸ್‌ವ್ಯಾಗನ್ ಇಂಡಿಯಾ ತಿಳಿಸಿದೆ. ಪ್ರಸಕ್ತ ವರ್ಷದ ಆರಂಭದಿಂದ ಕಂಪನಿಯ ವಾಹನ ಮಾರಾಟ ಗಮನಾರ್ಹವಾಗಿ ಇಳಿಕೆ ಕಾಣುತ್ತಿದೆ.

"ಈ ವರ್ಷ ಕಾರು ಮಾರಾಟ ಹೆಚ್ಚಿಸಲು ಪ್ರಯತ್ನಿಸಿದ್ದೇವೆ. ಮಾರಾಟ ಹೆಚ್ಚಿಸಲು ನಾವು ಕೈಗೊಂಡ ಕ್ರಮಗಳು ಸಮರ್ಪಕವಾಗಿದ್ದರೆ ಮುಂದಿನ ದಿನಗಳಲ್ಲಿ ಮಾರಾಟ ಸಕಾರಾತ್ಮಕವಾಗಿರಲಿದೆ. ಕಂಪನಿಯು ಗ್ರಾಹಕರ ತೃಪ್ತಿಗೆ ಹೆಚ್ಚಿನ ಒತ್ತು ನೀಡುತ್ತಿದೆ" ಎಂದು ಫೋಕ್ಸ್‌ವ್ಯಾಗನ್ ಗ್ರೂಪ್ ಆಡಳಿತ ಮಂಡಳಿ ಸದಸ್ಯರಾದ ನೀರಜ್ ಗಾರ್ಗ್ ಹೇಳಿದ್ದಾರೆ.

ಕಂಪನಿಯು ಕಳೆದ ವರ್ಷ ಮಾರಾಟದಲ್ಲಿ ಗಮನಾರ್ಹ ಪ್ರಗತಿ ದಾಖಲಿಸಿತ್ತು. 2011ರಲ್ಲಿ ಕಂಪನಿಯ ವಾಹನ ಮಾರಾಟ 78,281 ಯುನಿಟಿಗೆ ತಲುಪಿ ಶೇಕಡ 51.68ರಷ್ಟು ಏರಿಕೆ ದಾಖಲಿಸಿದೆ. "ಕಳೆದ ವರ್ಷದ ವೇಗದಲ್ಲಿ ಈ ವರ್ಷ ವಾಹನ ಮಾರಾಟದಲ್ಲಿ ಪ್ರಗತಿ ಕಾಣಲು ನಮ್ಮಿಂದ ಸಾಧ್ಯವಾಗಿಲ್ಲ. ಕಳೆದ ವರ್ಷ ಮಾರಾಟ ಪ್ರಗತಿ ಅತ್ಯಂತ ಹೆಚ್ಚಾಗಿತ್ತು. ಇದೀಗ ಸಾಧಾರಣ ಮಟ್ಟದಲ್ಲಿದೆ" ಎಂದು ಅವರು ಹೇಳಿದ್ದಾರೆ.

"ಗ್ರಾಹಕರ ನಿರೀಕ್ಷೆಗಳು ಹೆಚ್ಚಾಗುತ್ತಿದೆ. ಗ್ರಾಹಕರ ತೃಪ್ತಿಗೆ ತಕ್ಕಂತೆ ಕಾರ್ಯನಿರ್ವಹಿಸಲು ಪ್ರಯತ್ನಿಸುತ್ತಿದ್ದೇವೆ" ಎಂದು ಅವರು ತಿಳಿಸಿದ್ದಾರೆ. ಅಂದ ಹಾಗೆ ಕಂಪನಿಯು ದೇಶಕ್ಕೆ ಅಪ್ ಎನ್ನುವ ಸಣ್ಣ ಕಾರು ಪರಿಚಯಿಸಲಿದೆ. ಅಪ್ ಬಂದ್ಮೇಲೆ ಮಾರಾಟ UP ಆಗುತ್ತಾ ಕಾದು ನೋಡಬೇಕಿದೆ.

More from DriveSpark

Article Published On: Friday, April 27, 2012, 15:27 [IST]
English summary
Volkswagen India today said that it was looking into the reasons for falling sales in the country. The number of sales of the car maker has been seeing a decline since January this year.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+