ದೇಶಿ ರಸ್ತೆಯಲ್ಲಿ ಕಾರುಗಳನ್ನು ಹೆಚ್ಚಿಸಲು ಫೋಕ್ಸ್ ಪ್ಲಾನ್

ಫೋಕ್ಸ್ ವ್ಯಾಗನ್ ಕಂಪನಿಯು ದೇಶದ ರಸ್ತೆಗೆ ಸಣ್ಣ ಕಾಂಪ್ಯಾಕ್ಟ್ ಸ್ಪೋರ್ಟ್ ಯುಟಿಲಿಟಿ ವೆಹಿಕಲ್ ಮತ್ತು ಮಲ್ಟಿ ಪರ್ಪೊಸ್ ವೆಹಿಕಲ್ ಪರಿಚಯಿಸಲು ಯೋಜಿಸಿದೆ. ಈಗಾಗಲೇ ಮೂರು ಡೋರಿನ ಹ್ಯಾಚ್ ಬ್ಯಾಕ್ ಕಾರು "ಫೋಕ್ಸ್ ವ್ಯಾಗನ್ ಅಪ್" ಜಾಗತಿಕ ರಸ್ತೆಗೆ ಪ್ರವೇಶಿಸಿದೆ. ಶೀಘ್ರದಲ್ಲಿ ದೇಶದ ರಸ್ತೆಗೂ ಆಗಮಿಸಲಿದೆ.
ಕಂಪನಿಯು 5 ಡೋರಿನ ಫೋಕ್ಸ್ ವ್ಯಾನ್ ಅಪ್ ಕಾರನ್ನು ದೇಶದ ರಸ್ತೆಗೆ ಪರಿಚಯಿಸಲಿದೆ. ಕಂಪನಿಯು ಫೋಕ್ಸ್ ವ್ಯಾಗನ್ ಎ00 ಎಂಬ ಅಗ್ಗದ ಕಾರನ್ನು ಕೂಡ ದೇಶಕ್ಕೆ ಪರಿಚಯಿಸಲು ಯೋಜಿಸಿದೆ. ಈ ಕಾರಿನ ದರ 3-4 ಲಕ್ಷ ರು. ಆಸುಪಾಸಿನಲ್ಲಿರಲಿದೆ.


Click it and Unblock the Notifications








