ಇನ್ಮುಂದೆ ಮಹಿಳೆಯರೂ ಹೆಲ್ಮೆಟ್ ಧರಿಸೋದು ಕಡ್ಡಾಯ

ನವದೆಹಲಿ, ಏ 26: ದೆಹಲಿಯಲ್ಲಿ ಇನ್ಮುಂದೆ ಮಹಿಳಾ ದ್ಚಿಚಕ್ರ ವಾಹನ ರೈಡರ್ ಮತ್ತು ಹಿಂಬದಿ ಸವಾರರಿಗೆ ಶಿರಸ್ತ್ರಾಣ ಧರಿಸುವುದು ಕಡ್ಡಾಯವಾಗಲಿದೆ. ಮಹಿಳಾ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸಲು ಮೋಟರ್ ಕಾಯಿದೆಯಲ್ಲಿ ಸೂಕ್ತ ತಿದ್ದುಪಡಿ ಮಾಡುವುದಾಗಿ ದೆಹಲಿ ಸರಕಾರವು ಹೈಕೋರ್ಟಿಗೆ ತಿಳಿಸಿದೆ.

ಹೆಲ್ಮೆಟ್ ಕಡ್ಡಾಯ ನೀತಿಯಲ್ಲಿ ಮಹಿಳೆಯರನ್ನು ಹೊರಗಿಟ್ಟಿರುವುದನ್ನು ಪ್ರಶ್ನಿಸಿ ಸಾಮಾಜಿಕ ಸಿನಿಮಾ ತಯಾರಕ ಉಲ್ಲಾಸ್ ಪಿಆರ್ ಸಾರ್ವಜನಿಕ ಹಿತಾಸಕ್ತಿ ದಾವೆ ಹೂಡಿದ್ದರು.

ಈ ಕುರಿತು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಕೆ ಶಿಕ್ರಿ ಮತ್ತು ನ್ಯಾಯಮೂರ್ತಿ ರಾಜೀವ್ ಶಾಹಿ ವಿಭಾಗಿಯ ಪೀಠಕ್ಕೆ ರಾಜ್ಯ ಸಾರಿಗೆ ಇಲಾಖೆಯು ಮೋಟರ್ ಕಾಯಿದೆ ಪ್ರಕಾರವೇ ನಡೆದುಕೊಂಡಿರುವುದಾಗಿ ಮಾಹಿತಿ ನೀಡಿತ್ತು.

ಆದರೆ ಸುರಕ್ಷತೆಯ ದೃಷ್ಟಿಯಿಂದ ಮಹಿಳೆಯರೂ ಹೆಲ್ಮೆಟ್ ಧರಿಸುವುದು ಕಡ್ಡಾಯೆವೆಂಬುದನ್ನು ಎತ್ತಿಹಿಡಿದ ಕೋರ್ಟ್ ಕಾಯಿದೆಯಲ್ಲಿ ತಿದ್ದುಪಡಿ ತರುವಂತೆ ಆದೇಶಿಸಿದೆ. ಅದಕ್ಕೆ ರಾಜ್ಯ ಸರಕಾರವು ಅಸ್ತು ಎಂದಿದ್ದು, ಶೀಘ್ರದಲ್ಲಿ ಕಾಯಿದೆಯಲ್ಲಿ ತಿದ್ದುಪಡಿ ತರುವುದಾಗಿ ಕೋರ್ಟ್ ಮುಂದೆ ತಿಳಿಸಿದೆ.

1993ರ ಮೋಟರ್ ವೆಹಿಕಲ್ ಕಾಯಿದೆಯಲ್ಲಿ ಸಿಕ್ ಜನಾಂಗ ಮತ್ತು ಮಹಿಳೆಯರಿಗೆ ಹೆಲ್ಮೆಟ್ ಧರಿಸುವುದಕ್ಕೆ ವಿನಾಯಿತಿ ನೀಡಲಾಗಿದೆ. "ಪ್ರತಿ ವರ್ಷ ದ್ವಿಚಕ್ರ ವಾಹನ ರಸ್ತೆ ಅಪಘಾತಗಳಲ್ಲಿ 60-70 ಮಹಿಳೆಯರು ತಲೆಗೆ ಪೆಟ್ಟು ಬಿದ್ದು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಸರಕಾರವು ಹಿಂಬದಿ ಸವಾರರು ಸೇರಿದಂತೆ ಎಲ್ಲಾ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸಬೇಕು" ಎಂದು ಉಲ್ಲಾಸ್ ಪಿ ಆರ್ ಹೇಳಿದ್ದಾರೆ.

ಸರಕಾರವು 1993ರ ದೆಹಲಿ ಮೋಟರ್ ಕಾಯಿದೆಯನ್ನು ಮುಂದಿಟ್ಟುಕೊಂಡು ಮಹಿಳೆಯರು ಹೆಲ್ಮೆಟ್ ಧರಿಸುವುದನ್ನು ಐಚ್ಚಿಕಗೊಳಿಸಿತ್ತು. ಆದರೆ ಕೇಂದ್ರ ಮೋಟರ್ ವೆಹಿಕಲ್ ಕಾಯಿದೆಯ ಪ್ರಕಾರ ದ್ವಿಚಕ್ರವಾಹನದಲ್ಲಿ ಮಹಿಳಾ ಹಿಂಬದಿ ಸವಾರರು ಕೂಡ ಹೆಲ್ಮೆಟ್ ಧರಿಸುವುದು ಕಡ್ಡಾಯವೆಂಬ ಮಾಹಿತಿಯನ್ನು ಸರಕಾರಿ ಪರ ವಕೀಲರಾದ ಜುಬೇದಾ ಬೇಗಮ್ ಕೋರ್ಟಿಗೆ ತಿಳಿಸಿದ್ದರು.

ಓದಿ: ಹೆಲ್ಮೆಟಾಯಾಣ: ಪ್ರಾಣರಕ್ಷಕ ಶಿರಸ್ತ್ರಾಣಕ್ಕೆ ಸಾವಿರ ಪ್ರಣಾಮ

More from DriveSpark

Article Published On: Thursday, April 26, 2012, 10:56 [IST]
English summary
Wearing Helmets will Mandatory for Women two Wheeler riders in Delhi. Delhi government told the high court it will amend the motor vehicle rules soon.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+