ಕಾರುಗಳಿಗೆ ಲೈಫ್ ಟೈಂ ತೆರಿಗೆ ವಿಧಿಸಿದ ದೀದಿ

ಪಶ್ಚಿಮ ಬಂಗಾಳ, ಸೆ 3: ಕಾರು ಖರೀದಿದಾರರು ಪ್ರತಿ ವರ್ಷಕ್ಕೊಮ್ಮೆ ತೆರಿಗೆ ಪಾವತಿ ಮಾಡುವ ಬದಲಾಗಿ, ಒಂದೇ ಸಾರಿ ಅಜೀವ ತೆರಿಗೆ ಪಾವತಿಸುವ ಅವಕಾಶವನ್ನು ರಾಜ್ಯದ ಜನರಿಗೆ ಪಶ್ಚಿಮ ಬಂಗಾಳ ಸರಕಾರ ನೀಡಿದೆ.

ಕಾರು ಅಜೀವ ತೆರಿಗೆ ಪಾವತಿ ಒಂದು ಹೊಸ ಆಯ್ಕೆಯಾಗಿದ್ದು, ಇಷ್ಟವಿಲ್ಲದವರು ಪ್ರತಿ ವರ್ಷ ಎಂದಿನಂತೆ ವಾರ್ಷಿಕ ತೆರಿಗೆ ಪಾವತಿಸಬಹುದು. ನೂತನ ತೆರಿಗೆ ನೀತಿ ಇಂದಿನಿಂದ(ಸೆ 3) ನೂತನ ತೆರಿಗೆ ನೀತಿ ಜಾರಿಗೆ ಬರಲಿದೆ.

ಹೆಚ್ಚು ಆದಾಯ ಸಂಗ್ರಹಿಸುವ ಉದ್ದೇಶದಿಂದ ಪಶ್ಚಿಮ ಬಂಗಾಳ ಸರಕಾರ ಈ ನೀತಿ ಜಾರಿಗೆ ತಂದಿದೆ ಎಂದು ವರದಿಗಳು ಅಭಿಪ್ರಾಯಪಟ್ಟಿವೆ. ವಾಹನ ಮಾತ್ರವಲ್ಲದೇ ಇತರ ಸೆಗ್ಮೆಂಟಿನಲ್ಲೂ ಸರಕಾರವು ತೆರಿಗೆ ವಿಧಾನಗಳನ್ನು ಬದಲಾಯಿಸಿದೆ.

ದೇಶದಲ್ಲಿ ದ್ವಿಚಕ್ರ ವಾಹನ ಖರೀದಿಗೆ ಮಾತ್ರ ಅಜೀವ ತೆರಿಗೆ ಸಂಗ್ರಹಿಸುವ ಕ್ರಮವಿದೆ. ಕಾರುಗಳು ಮತ್ತು ವಾಣಿಜ್ಯ ವಾಹನಗಳು ಪ್ರತಿ ವರ್ಷ ರಸ್ತೆ ತೆರಿಗೆ ಪಾವತಿಸಬೇಕು. ಆದರೆ ಈ ನೀತಿ ಪಶ್ಚಿಮ ಬಂಗಾಳದಲ್ಲಿ ಬದಲಾವಣೆಯಾಗಿದೆ.

ಲೈಫ್ ಟೈಂ ತೆರಿಗೆಯಿಂದಾಗಿ ಪಶ್ಚಿಮ ಬಂಗಾಳದ ಜನರು ಇನ್ಮುಂದೆ ಹೊಸ ಕಾರು ಖರೀದಿಸುವಾಗ ಕೊಂಚ ಹೆಚ್ಚು ಹಣ ಪಾವತಿಸಬೇಕಿದೆ. ಆದರೆ ಇದು ಕಡ್ಡಾಯವಾಗಿರದ ಕಾರಣ ಗ್ರಾಹಕರಿಗೆ ಹಳೆಯ ವಾರ್ಷಿಕ ಪಾವತಿ ನೀತಿಯನ್ನೂ ಆಯ್ಕೆ ಮಾಡಿಕೊಳ್ಳಬಹುದು.

ನೂತನ ಅಜೀವ ತೆರಿಗೆ ನೀತಿ ಆಗಾಗ ಕಾರು ಬದಲಾಯಿಸುವರಿಗೆ ಸೂಕ್ತವಾಗಿಲ್ಲ. ಆದರೆ ಒಂದೇ ಕಾರನ್ನು ಹಲವಾರು ವರ್ಷ ಬಳಸುವರು ಒಮ್ಮೆಲೆ ಲೈಫ್ ಟೈಂ ತೆರಿಗೆ ಕಟ್ಟಿ ಪ್ರತಿ ವರ್ಷ ತೆರಿಗೆ ಕಟ್ಟುವ ಸಮಸ್ಯೆಯಿಂದ ಪಾರಾಗಬಹುದು.

ಕಾರಿನ ದರ ಶೇಕಡ 10ರಷ್ಟು ಲೈಫ್ ಟೈಂ ತೆರಿಗೆ ವಿಧಿಸಲಾಗುತ್ತದೆ. ನೂತನ ತೆರಿಗೆ ನೀತಿಯನ್ನು ಕೇವಲ ದ್ವಿಚಕ್ರವಾಹನ, ಕಾರು ಮತ್ತು ವ್ಯಾನುಗಳಿಗೆ(14 ಸೀಟುಗಳವರೆಗಿನ ವಾಹನ) ಮಾತ್ರ ವಿಧಿಸಲಾಗಿದೆ. ಟ್ರಾನ್ಸ್ ಪೋರ್ಟ್ ವಾಹನಗಳಿಗೆ ಎಂದಿನಂತೆ ವಾರ್ಷಿಕ ತೆರಿಗೆ ವಿಧಿಸಲಾಗುವುದು ಎಂದು ಸರಕಾರ ಹೇಳಿದೆ.

More from DriveSpark

Article Published On: Monday, September 3, 2012, 15:15 [IST]
English summary
The West Bengal government has announced that car buyers can now pay a lifetime tax on cars instead of the current method of paying tax on an annual basis. This will mean car buyers will no longer have to pay car tax on an annual basis.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+