ಬಣ್ಣದ ಜಗತ್ತು ಬಾಲಿವುಡ್ ಆಡಿವುಡ್‌ ಆದ ಕ್ಷಣ

ನಾವು ಹಲವು ವಿಧದ ಪ್ರೀತಿ-ಪ್ರೇಮಗಳನ್ನು ನೋಡಿದ್ದೇವೆ. ಬಣ್ಣದ ಜಗತ್ತೇ ಎಂದೇ ಖ್ಯಾತಿ ಪಡೆದಿರುವ ಬಾಲಿವುಡ್‌ನಲ್ಲಿ ಗಾಸಿಪ್‌ಗಳು ಸಾಮಾನ್ಯ. ಆದರೆ ಬಾಲಿವುಡ್‌ನ ಸೆಲೆಬ್ರಿಟಿಗಳ ಕಾರು ಪ್ರೇಮದ ಕುರಿತು ಎಂದಾದರೂ ತಿಳಿದುಕೊಂಡಿದ್ದೀರಾ.

ಅದರಲ್ಲೂ ದಿನಕ್ಕೊಂದರಂತೆ ಕಾರು ಬದಲಾಯಿಸುವ ಸೆಲೆಬ್ರಿಟಿಗಳು ಒಂದೇ ಬ್ರಾಂಡ್ ಮೇಲೆ ಹೆಚ್ಚು ನಂಟು ಹೊಂದಿದ್ದರೆ ಹೇಗಿರಬಹುದು. ಹೌದು ಜರ್ಮನಿಯ ಪ್ರೀಮಿಯಂ ಕಾರು ತಯಾರಕ ಕಂಪನಿಯಾದ ಆಡಿ ಮೇಲೆ ಬಾಲಿವುಡ್ ನಟಮಣಿಯರು ಹೆಚ್ಚು ಪ್ರೇಮವನ್ನು ಹೊಂದಿದ್ದಾರೆ.

ಇದಕ್ಕಾಗಿಯೇ ಬಾಲಿವುಡ್ ಇದೀಗ ಆಡಿವುಡ್ ಲವ್ ಸ್ಟೋರಿ ಎನಿಸಿಕೊಂಡಿದೆ. ಆಡಿ ಇಂಡಿಯಾಕ್ಕೆ ಇದಕ್ಕಿಂತ ಮಿಗಿಲಾಗಿ ಬೇರೊಂದು ಜನಪ್ರಿಯತೆ ಸಿಗಲಾರದು. ಸಹಜವಾಗಿಯೇ ಬಾಲಿವುಡ್ ಸ್ಟಾರ್‌ಗಳು ಆಡಿ ಇಂಡಿಯಾದ ಬ್ರಾಂಡ್ ಅಂಬಾಸಿಡರ್ ಎನಿಸಿಕೊಳ್ಳುತ್ತಾರೆ.

ಆಡಿ ಇಂಡಿಯಾದ ಕ್ಯೂ7 ಪ್ರೀಮಿಯಂ ಎಸ್‌ಯುವಿ ಹಾಗೂ ಎ8 ಲಗ್ಷುರಿ ಸೆಗ್ಮೆಂಟ್‌ಗಳ ಮೇಲೆ ಬಾಲಿವುಡ್‌ ಸ್ಟಾರ್‌ಗಳು ಹೆಚ್ಚು ಆಕರ್ಷಿತರಾಗಿದ್ದಾರೆ. ಹಾಗಿದ್ದರೆ ಬಾಲಿವುಡ್ ನಟ-ನಟಿಯರ ಆಡಿ ಕಾರುಗಳ ಬಗ್ಗೆ ತಿಳಿದುಕೊಳ್ಳೋಣ.

ಸ್ಟೈಲಿಷ್ ಜಾನ್ ಅಬ್ರಹಾಂ

ಸ್ಟೈಲಿಷ್ ಜಾನ್ ಅಬ್ರಹಾಂ

ತಮ್ಮ ನಟನಾ ಶೈಲಿಯಿಂದ ಹದಿಹರೆಯದವರ ನಿದ್ದೆಗೆಡಿಸುತ್ತಿರುವ ಜಾನ್ ಅಬ್ರಹಾಂ ಆಡಿ ಕ್ಯೂ7 ಖರೀದಿಸಿದವರ ಪೈಕಿ ಮೊದಲಿಗರಾಗಿದ್ದಾರೆ.ಅವರೀಗಲೂ ಆಡಿ ಕ್ಯೂ7 ಕಾರನ್ನೇ ಹೊಂದಿದ್ದಾರೆ.

ಅಭಿಷೇಕ್ ಬಚ್ಚನ್ ಫೇವರಿಟ್

ಅಭಿಷೇಕ್ ಬಚ್ಚನ್ ಫೇವರಿಟ್

ಬಾಲಿವುಡ್‌ನ ಜನಪ್ರಿಯ ನಟ ಅಭಿಷೇಕ್ ಬಚ್ಚನ್ ಹಾಗೂ ಐಶ್ಚರ್ಯ ರೈ ಬಚ್ಚನ್ ದಂಪತಿಗೆ ಕಳೆದ ವರ್ಷಹೆಣ್ಣು ಮಗು ಜನಿಸಿದ ಸಂದರ್ಭದಲ್ಲಿ ತಮ್ಮ ಮಗಳು ಆರಾಧ್ಯಳಿಗಾಗಿ ಆಕರ್ಷಕ ಆಡಿ ಎ8 ಕಾರನ್ನು ಖರೀದಿಸಿದ್ದರು.

 ಆಸೀನ್ ಪ್ರೀತಿ

ಆಸೀನ್ ಪ್ರೀತಿ

ಗಜನಿ ಚಿತ್ರದ ಮೂಲಕ ಬಾಲಿವುಡ್‌ನ ಮನೆಮಾತಾಗಿದ್ದ ದಕ್ಷಿಣ ಭಾರತದ ಬಹುಭಾಷಾ ತಾರೆ ಆಸಿನ್ ಕೂಡಾ ಆಡಿ ಕ್ಯೂ7 ಕಾರಿನ ಹೆಮ್ಮೆಯ ಮಾಲಿಕರಾಗಿದ್ದಾರೆ.

ಬಿಷಾಶಾ ಬಸು ಸೆಕ್ಸಿ ಕಾರು

ಬಿಷಾಶಾ ಬಸು ಸೆಕ್ಸಿ ಕಾರು

ಇಲ್ಲಿಗೆ ಮುಗಿಯುವುದಿಲ್ಲ ಬಾಲಿವುಡ್ ಆಡಿವುಡ್ ಲವ್ ಸ್ಟೋರಿ. ಬಾಲಿವಡ್‌ನ ಮಾದಕ ಸುಂದರಿ ಬಿಷಾಶಾ ಬಸು ಕೂಡಾ ಆಡಿ ಜತೆ ನಂಟು ಹೊಂದಿದ್ದಾರೆ.

ಇದು ಡಿಫರೆಂಟ್ ಲವ್ ಸ್ಟೋರಿ; ಬಾಲಿವುಡ್ ಆಡಿವುಡ್ ಆದ ಕ್ಷಣ

ಮಾಡೆಲ್ ರಂಗದಿಂದ ಚಿತ್ರರಂಗಕ್ಕೆ ಪ್ರವೇಶಿಸಿದ್ದ ಬಾಲಿವುಡ್ ಬೆಡಗಿ ದಿಯಾ ಮಿರ್ಜಾ ಸಹ ಆಕರ್ಷಕ ಆಡಿ ಕ್ಯೂ7 ಕಾರು ಹೊಂದಿದ್ದಾರೆ.

ಅಡಿ ಅಭಿಮಾನಿ ಗುಲ್ ಪನಾಗ್

ಅಡಿ ಅಭಿಮಾನಿ ಗುಲ್ ಪನಾಗ್

ಬಾಲಿವುಡ್ ನಟಿ ಹಾಗೂ ಮಾಜಿ ಮಾಡೆಲ್ ಗುಲ್ ಪನಾಗ್ ಕೂಡಾ ಜರ್ಮನಿಯ ಈ ಪ್ರೀಮಿಯಂ ಕ್ಯೂ5 ಕಾರಿನ ಅಭಿಮಾನಿಯಾಗಿದ್ದಾರೆ.

ಕತ್ರಿನಾ ಕೈಫ್ ಬಾಯ್‌ಫ್ರೆಂಡ್

ಕತ್ರಿನಾ ಕೈಫ್ ಬಾಯ್‌ಫ್ರೆಂಡ್

ಬಾಲಿವುಡ್‌ನ ಕ್ಯೂಟ್ ನಟಿ ಕತ್ರಿನಾ ಕೈಫ್ ಸಹ ಆಡಿ ಜತೆ ನಂಟು ಹೊಂದಿದ್ದಾರೆ. ಬಾಲಿವುಡ್ ನಟಮಣಿಯರು ಯಾಕೆ ಆಡಿ ಕ್ಯೂ7 ಜತೆ ಅಷ್ಟೊಂದು ಪ್ರೀತಿ ಹೊಂದಿದ್ದಾರೆ ಎಂಬುದಂತೂ ಅರ್ಥವಾಗುತ್ತಿಲ್ಲ. ಆದರೆ ಕತ್ರಿನಾ ಸಹ ಐಷಾರಾಮಿ ಆಡಿ ಕ್ಯೂ7 ಅಭಿಮಾನಿಯಾಗಿದ್ದಾರೆ.

ಕಾಜೋಲ್ ಫೇವರಿಟ್

ಕಾಜೋಲ್ ಫೇವರಿಟ್

90ರ ದಶಕದಲ್ಲಿ ಬಾಲಿವುಡ್ ಜಗತ್ತನ್ನು ಹೆಚ್ಚೆದ್ದು ಕುಣಿಸಿದ್ದ ನಟಿ ಕಾಜೋಲ್ ಆಡಿ ಕ್ಯೂ7 ಕಾರನ್ನು ತಮ್ಮದಾಗಿಸಿದ್ದಾರೆ.

ರಣಬೀರ್ ಕಪೂರ್

ರಣಬೀರ್ ಕಪೂರ್

ಬಾಲಿವುಡ್ ನಟ ರಣಬೀರ್ ಕಪೂರ್ ಸಹ ಆಡಿ ಎಸ್‌ಯುವಿ ಕಾರು ತಮ್ಮದಾಗಿಸಿದ್ದಾರೆ.

ಸಲ್ಮಾನ್ ಖಾನ್ ಬಾಡಿಗಾರ್ಡ್

ಸಲ್ಮಾನ್ ಖಾನ್ ಬಾಡಿಗಾರ್ಡ್

ಬಾಡಿಗಾರ್ಡ್ ಚಿತ್ರದ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದ ಸಲ್ಮಾನ್ ಖಾನ್ ಅವರಿಗೆ ಇತ್ತೀಚೆಗಷ್ಟೇ ಆಡಿ ಕ್ಯೂ7 ಉಡುಗೊರೆಯಾಗಿ ನೀಡಲಾಗಿತ್ತು.

ಸಂಜಯ್ ದತ್

ಸಂಜಯ್ ದತ್

ತಮ್ಮದೇ ಆದ ವಿಶೇಷ ಪಾತ್ರಗಳ ಮೂಲಕ ಜನಪ್ರಿಯವಾಗಿರುವ ಸಂಜಯ್ ದತ್ ಗ್ಯಾರೇಜ್‌ನಲ್ಲೂ ಆಡಿ ಎಸ್‌ಯುವಿ ಕಾರಿದೆ.

ಇದು ಡಿಫರೆಂಟ್ ಲವ್ ಸ್ಟೋರಿ; ಬಾಲಿವುಡ್ ಆಡಿವುಡ್ ಆದ ಕ್ಷಣ

ಜಾನ್ ಅಬ್ರಹಾಂ ಪ್ರೇಯಸಿ

ಇದು ಡಿಫರೆಂಟ್ ಲವ್ ಸ್ಟೋರಿ; ಬಾಲಿವುಡ್ ಆಡಿವುಡ್ ಆದ ಕ್ಷಣ

ದಿಯಾ ಮಿರ್ಜಾ ಬಾಯ್‌ಫ್ರೆಂಡ್

ಬಾಲಿವುಡ್ ಆಡಿವುಡ್ ಲವ್ ಸ್ಟೋರಿ

ಬಾಲಿವುಡ್ ಆಡಿವುಡ್ ಲವ್ ಸ್ಟೋರಿ

ಒಟ್ಟಿನಲ್ಲಿ ಮೇಲೆ ತಿಳಿಸಲಾದ ಈ ಎಲ್ಲ ನಟಮಣಿಯರ ಆಡಿ ಪ್ರೇಮ ಬಹಳ ಕ್ರೇಜ್ ಹುಟ್ಟಿಸಲು ಕಾರಣಾಗಿದೆ.

More from DriveSpark

Article Published On: Friday, December 7, 2012, 10:06 [IST]
English summary
Audi, the German premium carmaker has emerged as one of the most favoured car brand by Bollywood celebrities. Here is a photo feature of Bollywood Celebrities and Their Audis
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+