40 ಕಿ.ಮೀ. ಮೈಲೇಜಿನ ನ್ಯಾನೊ ಡೀಸೆಲ್ ಕಾರು

ಜಗತ್ತಿನ ಅಗ್ಗದ ಪುಟ್ಟಕಾರು ಟಾಟಾ ನ್ಯಾನೊ ಡೀಸೆಲ್ ಆಯ್ಕೆಯಲ್ಲಿ ಪ್ರಸಕ್ತ ವರ್ಷ ದೇಶದ ರಸ್ತೆಗಿಳಿಯಲಿದೆಯೆಂಬ ಸುದ್ದಿ ನಮಗೆ ತಲುಪಿದೆ. ಸುಮಾರು 40 ಕಿ.ಮೀ. ಮೈಲೇಜ್ ನೀಡುವ ನ್ಯಾನೊ ಡೀಸೆಲ್ ಕಾರಿನ ನಿರ್ಮಾಣ ಕಾರ್ಯಗಳು ಮುಗಿದಿವೆ ಎಂದು ವರದಿಗಳು ಹೇಳಿವೆ.

ವಿಶೇಷವೆಂದರೆ ಈ ಕಾರು ಪ್ರತಿಲೀಟರ್ ಡೀಸೆಲಿಗೆ 40 ಕಿ.ಮೀ.ಗಿಂತಲೂ ಹೆಚ್ಚು ಮೈಲೇಜ್ ನೀಡಲಿದೆಯಂತೆ. ಇಷ್ಟು ಮೈಲೇಜ್ ದೊರಕಿದರೆ ಪ್ರತಿ ಕಿ.ಮೀ. ಪ್ರಯಾಣಕ್ಕೆ ತಗುಲುವ ವೆಚ್ಚ ಒಂದು ರುಪಾಯಿ!

ಜನವರಿಯಲ್ಲಿ ನಡೆದ ದೆಹಲಿ ವಾಹನ ಪ್ರದರ್ಶನದಲ್ಲಿ ಈ ಕಾರು ಪ್ರದರ್ಶನಗೊಳ್ಳುವ ನಿರೀಕ್ಷೆಯಲ್ಲಿ ಎಲ್ಲರಿದ್ದರು. ಆದರೆ ಕಂಪನಿಯು ನ್ಯಾನೊ ಕಾರಿನ ಸಿಎನ್ ಜಿ ಆಯ್ಕೆಯನ್ನು ಮಾತ್ರ ಅಲ್ಲಿ ಪ್ರದರ್ಶಿಸಿತ್ತು.

ನ್ಯಾನೊ ಡೀಸೆಲ್ ಕಾರಿನ ದರದ ಕುರಿತು ಸಾಕಷ್ಟು ವದಂತಿಗಳು ಹರಿದಾಡುತ್ತಿವೆ. ಪೆಟ್ರೋಲ್ ಆವೃತ್ತಿಗಿಂತ ನ್ಯಾನೊ ಡೀಸೆಲ್ ಕಾರಿನ ದರ ಹೆಚ್ಚಿರುವುದು ನಿಶ್ಚಿತ. ಆದರೆ ಆಲ್ಟೊ ಮತ್ತು ಇಯಾನ್ ಕಾರಿಗಿಂತ ಕಡಿಮೆ ಇರುವ ಸಾಧ್ಯತೆಯಿದೆ. ಒಟ್ಟಾರೆ 2 ಲಕ್ಷ ರುಪಾಯಿಗಿಂತ ಇದರ ದರ ಹೆಚ್ಚಿರಲಿದೆ.

ನ್ಯಾನೊ ಡೀಸೆಲ್ ಈ ವರ್ಷದ ಅಂತ್ಯದೊಳಗೆ ರಸ್ತೆಗಿಳಿಯುವ ನಿರೀಕ್ಷೆಯಿದೆ. ಈ ಕಾರಿನ ಟೆಸ್ಟ್ ಅಂತಿಮ ಹಂತದಲ್ಲಿದೆ ಎಂದು ವರದಿಗಳು ಹೇಳಿವೆ. ಡೀಸೆಲ್ ಕಾರುಗಳಿಗೆ ಅತ್ಯಧಿಕ ಬೇಡಿಕೆಯಿರುವುದರಿಂದ ನ್ಯಾನೊ ಡೀಸೆಲಿಗೆ ಅತ್ಯಧಿಕ ಬೇಡಿಕೆ ಕಾಣುವ ನಿರೀಕ್ಷೆಯಿದೆ. ಒಟ್ಟಾರೆ ಇದರ ಮೈಲೇಜ್ ವಿಷಯವು ಮಾರಾಟದಲ್ಲಿ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆಯಿದೆ. (ಕನ್ನಡ ಡ್ರೈವ್ ಸ್ಪಾರ್ಕ್)

More from DriveSpark

Article Published On: Wednesday, March 21, 2012, 12:36 [IST]
English summary
Will Tata Nano Diesel Really Come This Year? Now reports about the Tata Nano Diesel's launch have increased as Bosche has reportedly completed development of the diesel engine that delivers a mileage of 40kmpl.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+