ವಿಶ್ವದ ದುಬಾರಿ ಪೆರಾರಿ ಜಿಟಿಒ ಮಾರಾಟ, ಎಷ್ಟಕ್ಕೆ?
ಫೆರಾರಿ 250 ಜಿಟಿಒ ಕಾರನ್ನು ಇಂಗ್ಲೆಂಡಿನ ರೇಸ್ ಡ್ರೈವರ್ Stirling Mossಗಾಗಿ ನಿರ್ಮಿಸಲಾಗಿತ್ತು. 1962ರಿಂದ 1964ರ ಅವಧಿವರೆಗೆ ಇಂತಹ 39 ಫೆರಾರಿ ಜಿಟಿಒ ಕಾರುಗಳನ್ನು ಅಭಿವೃದ್ಧಿಪಡಿಸಲಾಗಿತ್ತು. ಮೇ ತಿಂಗಳಲ್ಲಿ ಅನಮೆರಾ ಡಾಟ್ ಕಾಮ್ ಎಂಬ ವೆಬ್ ತಾಣದಲ್ಲಿ ಇದನ್ನು ಮಾರಾಟಕ್ಕಿಡಲಾಗಿತ್ತು.
ಜಗತ್ತಿನ ದುಬಾರಿ ಕಾರೆಂಬ ಹೆಗ್ಗಳಿಕೆಯ ಫೆರಾರಿ ಜಿಟಿಒ ಖರೀದಿಸಿದ್ದು ಯಾರು? ಮಾರಾಟ ಮಾಡಿದ್ದು ಯಾರೆಂಬ ಕುತೂಹಲ ನಿಮಗಿರಬಹುದು. ಡಚ್ ಮೂಲದ ಉದ್ಯಮಿ ಎರಿಕ್ ಹರಿಮಾ ಫೆರಾರಿ ಜಿಟಿಒ ಕಾರನ್ನು ಅಮೆರಿಕದ ಕಾರು ಸಂಗ್ರಹಕಾರ ಕ್ರಿಗ್ ಮೆಕ್ ಎಂಬಾತನಿಗೆ ಮಾರಾಟ ಮಾಡಿದ್ದಾನೆ.
ಈ ದುಬಾರಿ ಕಾರು ಹರಾಜು ಪ್ರಕ್ರಿಯೆಯ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲು ಅವರಿಬ್ಬರು ನಿರಾಕರಿಸಿದ್ದಾರೆ.
"ಈಗ ಕಾರು ಸಂಗ್ರಹಕಾರರು ಮಾರುಕಟ್ಟೆಯಲ್ಲಿ ತುಂಬಾ ಆಕ್ಟಿವ್ ಆಗಿದ್ದಾರೆ. ಇಲ್ಲಿ ಖರೀದಿ ಮತ್ತು ಮಾರಾಟ ಭರಾಟೆ ಇತ್ತೀಚೆಗೆ ಗಮನಾರ್ಹವಾಗಿ ಏರಿಕೆ ಕಾಣುತ್ತಿದೆ" ಎಂದು ಫೆರಾರಿ ದುಬಾರಿ ಕಾರು ಮಾರಾಟಕ್ಕೆ ಫೆರಾರಿ ಡೀಲರೊಬ್ಬರು ಪ್ರತಿಕ್ರಿಯಿಸಿದ್ದಾರೆ.


Click it and Unblock the Notifications









