ವಿಶ್ವದ ಹಳೇ ಕಾರು ಹರಾಜು, ಏನು ವಿಶೇಷ?
ಸುಮಾರು 109 ವರ್ಷಗಳಷ್ಟು ಹಳೆಯದಾದದ ಫೋರ್ಡ್ ಕಾರೊಂದನ್ನು ಹರಾಜಿನಲ್ಲಿ ಬಿಕರಿ ಮಾಡಲು ಸಿದ್ಧತೆ ನಡೆದಿದೆ. ಅದರಲ್ಲೇನು ವಿಶೇಷವೆಂಬ ಪ್ರಶ್ನೆ ನಿಮ್ಮಲ್ಲಿರಬಹುದು. ತೀವ್ರ ಹಣಕಾಸು ಬಿಕ್ಕಟ್ಟಿನಲ್ಲಿದ್ದ ಸಮಯದಲ್ಲಿದ್ದ ಫೋರ್ಡ್ ಕಂಪನಿಯನ್ನು ಮೇಲಕ್ಕೆತ್ತಿದ್ದೇ ಈ ಹಳೆ ಕಾರು.
ಈ ಕಾರಣಕ್ಕಾಗಿ 1903ರಲ್ಲಿ ನಿರ್ಮಿಸಿರುವ ಚಾಸಿ 30 ಹೆಸರಿನ ಕಾರು ಫೋರ್ಡಿಗೆ ಮಹತ್ವದಾಗಿದೆ. ಕಳೆದ 109 ವರ್ಷಗಳಲ್ಲಿ ಈ ಕಾರು ಐದು ಮಾಲಿಕರನ್ನು ಕಂಡಿದೆ. ಈ 2007ರಲ್ಲಿ ಈ ಕಾರನ್ನು ಮರು ನಿರ್ಮಾಣ ಮಾಡಲಾಗಿದೆ.
ಹಳೆ ಫೋರ್ಡ್ ಚಾಸಿ 30 ಕಾರು ದುಬಾರಿ ದರಕ್ಕೆ ಹರಾಜಾಗುವ ನಿರೀಕ್ಷೆಯಿದೆ. ಒಂದು ನಿರೀಕ್ಷೆಯ ಪ್ರಕಾರ ಸುಮಾರು 3ರಿಂದ 5 ದಶಲಕ್ಷ ಡಾಲರಿಗೆ ಕ್ಲಾಸಿಕ್ 30 ಬಿಕರಿಯಾಗುವ ಸಾಧ್ಯತೆಯಿದೆ.
ಅಕ್ಟೋಬರ್ 11ರಂದು ಪೆನ್ಸಿಲ್ವೇನಿಯಾದಲ್ಲಿ ಪ್ರಶಿದ್ಧ ಹರಾಜು ಸಂಸ್ಥೆ ಆರ್ ಎಂ ಆಕ್ಷನ್ಸ್ ಈ ಕಾರನ್ನು ಹರಾಜು ಮಾಡಲಿದೆ. ಚಾಸಿ ಕಾರನ್ನು ನಿರ್ಮಿಸಿದ ಮೊದಲ ವರ್ಷದಲ್ಲಿ ಕಂಪನಿಯು ಸುಮಾರು 1,750 ಕಾರುಗಳನ್ನು ಉತ್ಪಾದಿಸಿತ್ತು. ಮುಂದಿನ ದಿನಗಳಲ್ಲಿ ಚಾಸಿ 70 ಕಾರಿಗೆ ಬೇಡಿಕೆ ಗಮನಾರ್ಹವಾಗಿ ಏರಿಕೆ ಕಂಡಿತ್ತು.
ಫೋರ್ಡ್ ಚಾಸಿ 70 ಕಾರು 1669ಸಿಸಿಯ ಟ್ವಿನ್ ಸಿಲಿಂಡರ್ ಎಂಜಿನ್ ಹೊಂದಿದೆ. ಇದು ಕೇವಲ 8 ಹಾರ್ಸ್ ಪವರ್ ನೀಡುತ್ತದೆ. ಈ ಕಾರಲ್ಲಿ ಗಂಟೆಗೆ ಗರಿಷ್ಠ 28 ಕಿ.ಮೀ. ವೇಗದಲ್ಲಿ ಸಾಗಬಹುದಾಗಿದೆ.


Click it and Unblock the Notifications









