ಧರ್ಮಸ್ಥಳದ ವಿಂಟೆಜ್ ಕಾರು ಸಂಗ್ರಹಾಲಯ ನೋಡಿದಿರಾ?

Shri Manjunatheshwara Temple
ಹಳೆಯ, ಅಪರೂಪದ ವಿಂಟೆಜ್ ಕಾರುಗಳನ್ನು ನೋಡಿದಾಗ ಇತಿಹಾಸವೇ ಕಣ್ಮುಂದೆ ಬರುತ್ತದೆ. ಈ ಹಿರಿಯ ಕಾರುಗಳ ಸಂಗ್ರಹಾಲಯವೂ ದೇಶದಲ್ಲಿ ಸಾಕಷ್ಟಿದೆ. ಆದರೆ ಸಾಕಷ್ಟು ಸಂಖ್ಯೆಯಲ್ಲಿ ಇಂತಹ ಕಾರುಗಳಿರುವುದು ಅಪರೂಪ. ಧರ್ಮಸ್ಥಳದಲ್ಲಿ ಡಾ. ವೀರೆಂದ್ರ ಹೆಗಡೆ ಅವರಿಗೆ ಅತ್ಯಂತ ಹೆಚ್ಚು ಹಳೆಯ ವಾಹನಗಳ ಸಂಗ್ರಹವನ್ನು ಹೊಂದಿರುವ ಕೀರ್ತಿಯಿದೆ. ಅಲ್ಲಿ ಹಳೆಯ ಕಾರುಗಳೆಲ್ಲ ರಾಜಾ ಗಾಂಭೀರ್ಯದಿಂದ ನಮ್ಮ ಗಮನ ಸೆಳೆಯುತ್ತವೆ. ಇವೆಲ್ಲ ಹೆಗಡೆಯವರ ಹವ್ಯಾಸ, ಅಭಿರುಚಿ, ಆಸಕ್ತಿಗಳಿಗೆ ಕನ್ನಡಿಯೂ ಹೌದು.

ಸುಮಾರು 800 ವರ್ಷಗಳ ಇತಿಹಾಸವಿರುವ ಶ್ರೀಕ್ಷೇತ್ರ ಧರ್ಮಸ್ಥಳದ ಕಾರು ಸಂಗ್ರಹಾಲಯದಲ್ಲಿರುವ ಕಾರುಗಳಿಗೂ ಐತಿಹಾಸಿಕ ಮಹತ್ವವಿದೆ. ಗಾಂಧೀಜಿ, ನೆಹರು ಸೇರಿದಂತೆ ದೇಶದ ಪ್ರಮುಖ ವ್ಯಕ್ತಿತ್ವಗಳು ಬಳಸಿದವೆಂದು ಕೆಲವು ಕಾರುಗಳು ಬೀಗುತ್ತಿವೆ. ಎಲ್ಲ ಕಾರುಗಳಿಗೂ ಅದರದ್ದೇ ಆದು ಇತಿಹಾಸವಿದೆ. ಆಶ್ಚರ್ಯಕರ ವಿಷಯವೆಂದರೆ ಆ ಕಾರುಗಳು ಇನ್ನೂ ಅತ್ಯುತ್ತಮ "ರನ್ನಿಂಗ್ ಕಂಡಿಷನ್"ನಲ್ಲಿವೆ.

ರಾಜ ಮಹಾರಾಜರು, ಗಣ್ಯರು, ಶ್ರೀಮಂತರು, ಅಧಿಕಾರಿಗಳು, ಸ್ವಾತಂತ್ರ್ಯ ಹೋರಾಟಗಾರರು ಹೀಗೆ ಪ್ರಮುಖರು ಸಂಚರಿಸುತ್ತಿದ್ದ ಕಾರುಗಳು ಇಲ್ಲಿವೆ. ಕಾರುಗಳ ಅನ್ವೇಷಣೆ, ನಿರ್ಮಾಣ ಪ್ರಕ್ರಿಯೆ ಶಾಸ್ತ್ರೀಯವಾಗಿ ಆರಂಭವಾದದ್ದು 1765ರಲ್ಲಿ. 19ನೇ ಶತಮಾನದಲ್ಲಿ ಸಾರೋಟು'ಗಳಂತಹ ಬಂಡಿಗೆ ಉಗಿಯಂತ್ರಗಳನ್ನು ಜೋಡಿಸುವ ಪ್ರಯತ್ನಗಳೂ ನಡೆದವು. ನೂರು ವರ್ಷಗಳ ಹಿಂದೆ ಹಡಗುಗಳ ಮೂಲಕ ಭಾರತಕ್ಕೆ ಕಾರುಗಳು ಬಂದವು. ಈಗ ಭಾರತಕ್ಕೆ ಜಾಗತಿಕವಾಗಿ ಪ್ರಮುಖ ಕಾರು ಮಾರುಕಟ್ಟೆ ಎಂಬ ಹೆಮ್ಮೆಯಿದೆ.

ಧರ್ಮಸ್ಥಳದಲ್ಲಿರುವ ಕಾರು ಸಂಗ್ರಹಾಲಯದಲ್ಲಿ ಅಮೆರಿಕ ನಿರ್ಮಿತ 1926ರ ಅಂಬ್ಯುಲೆನ್ಸ್ ,ಫೋರ್ಡ್ , ತ್ರಿಭುವನ್ ಮೋಟಾರ್ ಸಂಸ್ಥೆಯ ಸುನೀಲ್ 1936 ಆಸ್ಟಿನ್- 10, ಗಣೇಶ್ ರಾವ್ ಅವರ 1936ರ ಮೋರಿಸ್ ಮೈನರ್ -8, ಗಿರೀಶ್ ಪಿ ವಿ ಅವರ 1951ರ ಮೋರೀಸ್ ಮೈನರ್ ಕಾರುಗಳಿವೆ. ಶ್ರೀನಿವಾಸ್ ಕಿಣಿ ಅವರ 1951ರ ಮೋರಿಸ್ ಮೈನ್ 1952 ಮೋರೀಸ್ ಆಕ್ಸ್ ಫರ್ಡ್, ಆಂಟನಿ ಡಿ ಸೋಜ ಅವರ 1951ರ ಮೋರಿಸ್ ಮೈನರ್, ನರೇಶ್ ಕುಮಾರ್ ಅವರ 1954ರ ಹಿಂದೂಸ್ತಾನ್ -14, ರಾಘವ ಅವರ 1957ರ ವಾನ್ ಗಾರ್ಡ್ ಎಂಬ ಹಳೆಯ ಆವೃತ್ತಿಗಳಿವೆ., ರಾಜವರ್ಮ ಬಲ್ಲಾಳ್ ಅವರ 1962ರ ಷೆವರ್ಲೆ, ಫೋರ್ಡ್ ವಿಲ್ಲಿಸ್ ಜೀಪ್, ಸುರೇಶ್ ಅತ್ತಾವರ ಅವರ 1958ರ ಅಮೆರಿಕನ್ ಜೀಪ್ ಧರ್ಮಸ್ಥಳದಲ್ಲಿರುವ ಇನ್ನಿತರ ಕೆಲವು ಮಾದರಿಗಳಾಗಿವೆ.

ಧರ್ಮಸ್ಥಳದಲ್ಲಿರುವ ಕೆಲವು ಹಳೆಯ ಕಾರುಗಳು
* 1903ರ ರೆನಾಲ್ಟ್( ಒಂದು ಸಿಲಿಂಡ್, 4.5 ಹಾರ್ಸ್ ಪವರ್): ಇದು ಭಾರತದ ಸುಸ್ಥಿತಿಯಲ್ಲಿರುವ ಹಳೆಯ ಕಾರು.
* ಫೋರ್ಡ್ ಸನ್ ಟ್ರ್ಯಾಕ್ಟರ್, 1920: ಈ ಕಾರುಗಳು 1964ರವರೆಗೆ ರಸ್ತೆಯಲ್ಲಿದ್ದವು.
* ರೋಲ್ಸ್ ರಾಯ್ಸಿ(6 ಸಿಲಿಂಡರ್, 20 ಹಾರ್ಸ್ ಪವರ್)
* 1925ರ ಫಿಯೆಟ್(4 ಸಿಲಿಂಡರ್, 10.50 ಬಿಎಚ್ ಪಿ, 10.50 ಹಾರ್ಸ್ ಪವರ್
* ಡೈಮ್ಲರ್ ಬೆಂಝ್(6 ಸಿಲಿಂಡರ್, 20 ಹಾರ್ಸ್ ಪವರ್).
* 1926ರ ಆಂಬ್ಯುಲೆನ್ಸ್(4 ಸಿಲಿಂಡರ್, 25 ಹಾರ್ಸ್ ಪವರ್)
* ಮೋರಿಸ್ ಮೈನರ್

ಧರ್ಮಸ್ಥಳಕ್ಕೆ ಹೋಗಿ ಮಂಜುನಾಥನ ದರ್ಶನ ಮಾಡಿದ ಮೇಲೆ ಅಲ್ಲೆ ಪಕ್ಕದಲ್ಲಿರುವ ಹಳೆಯ ಕಾರುಗಳ ಸಂಗ್ರಹಾಲಯ ನೋಡಲು ಮರೆಯಬೇಡಿ. ಸಂಗ್ರಹಾಲಯದೊಳಗೆ ಕ್ಯಾಮರಾ ಕೊಂಡೊಯ್ಯುವಾಗಿಲ್ಲ. ಹಾಗಂತ ಛೇ ಇದರ ಫೋಟೊ ಬೇಕಿತ್ತು ಅಂತ ನಿಮಗೆ ಬೇಸರವಾಗದು. ಐದು ರೂಪಾಯಿಗೊಂದರಂತೆ ಅಲ್ಲಿರುವ ಕಾರುಗಳ ಪ್ರಿಂಟ್ ಮಾಡಿದ ಫೋಟೊಗಳನ್ನು ಅಲ್ಲೇ ಕೌಂಟರ್ ನಲ್ಲಿ ಖರೀದಿಸಬಹುದು.

Most Read Articles

Kannada
English summary
Dharmasthala is the home to Sri Manjunatheshwara Temple with golden lingam, a famous temple dedicated to Lord Shiva. There is a vintage car museum is like a study place for history of transportation having a collection from an old horse chariot to rare vintage cars, all in good running conditions.
Story first published: Saturday, August 13, 2011, 10:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X