Renault: ಅಧಿಕೃತ ಬಿಡುಗಡೆ ಮುನ್ನವೇ ಶೋರೂಂ ತಲುಪಿದ ರೆನಾಲ್ಟ್ ಡಸ್ಟರ್: ವಿಶೇಷತೆಗಳೇನು?

ಭಾರತದಲ್ಲಿ ರೆನಾಲ್ಟ್ ಡಸ್ಟರ್ ಬಗ್ಗೆ ತಿಳಿಯದ ಆಟೋ ಉತ್ಸಾಹಿಗಳು ಯಾರೂ ಇರುವುದಿಲ್ಲ, ಈ ಕಾರು ಒಂದು ಕಾಲದಲ್ಲಿ ಎಸ್‌ಯುವಿ ವಿಭಾಗದಲ್ಲಿ ಟಾಪ್-5 ಕಾರುಗಲ್ಲಿ ಒಂದಾಗಿ ಸ್ಥಾನ ಪಡೆದಿತ್ತು. ಮೊದಲ ಬಾರಿಗೆ ರೆನಾಲ್ಟ್ ಡಸ್ಟರ್ 2012 ರಲ್ಲಿ ಭಾರತದಲ್ಲಿ ಬಿಡುಗಡೆಯಾಗಿತ್ತು. ಕಾರಣಾಂತರಗಳಿಂದ ಒಂದು ದಶಕದ ನಂತರ, 2022 ರಲ್ಲಿ ಇದನ್ನು ಸ್ಥಗಿತಗೊಳಿಸಲಾಯಿತು. ಇದೀಗ ಈ ಕಾರನ್ನು ಹೊಸ ರಗಡ್ ಲುಕ್, ಪವರ್‌ಫುಲ್‌ ಪರ್ಫಾಮೆನ್ಸ್, ಆಧುನಿಕ ಫೀಚರ್ಸ್‌ನೊಂದಿಗೆ ಕಳೆದ ತಿಂಗಳು ಜನವರಿ 26 ರಂದು ಭಾರತದಲ್ಲಿ ಅನಾವರಣಗೊಳಿಸಲಾಗಿದೆ. ಮಾರ್ಚ್‌ನಲ್ಲಿ ಅಧಿಕೃತವಾಗಿ ಬಿಡುಗಡೆಗೆ ಸಜ್ಜಾಗಿದೆ. ಆದರೆ ಅದಕ್ಕೂ ಮುನ್ನವೇ ಹಲವು ಡೀಲರ್‌ಶಿಪ್‌ಗಳನ್ನು ತಲುಪಿದೆ.

ಕಂಪನಿಯ ಪ್ರಕಾರ 2026 ಮಾರ್ಚ್‌ನಲ್ಲಿ ಬೆಲೆಗಳನ್ನು ಘೋಷಿಸಿ, ಬುಕ್‌ ಮಾಡಿದ ಗ್ರಾಹಕರಿಗೆ ಏಪ್ರಿಲ್‌ನಲ್ಲಿ ಡೆಲಿವರಿ ನೀಡುವ ಪ್ಲಾನ್ ಇತ್ತು. ಆದರೆ ಅದಕ್ಕೂ ಮುಂಚಿತವಾಗಿ ರೆನಾಲ್ಟ್ ಡಸ್ಟರ್ ಎಸ್‌ಯುವಿಗಳು ಭಾರತೀಯ ಶೋರೂಂಗಳನ್ನು ತಲುಪಲು ಪ್ರಾರಂಭಿಸಿವೆ, ಇದರಿಂದಾಗಿ ಖರೀದಿದಾರರು ಹೊಸ ಎಸ್‌ಯುವಿಯನ್ನು ಬಿಡುಗಡೆ ಮುನ್ನವೇ ಶೋರೂಂಗೆ ಭೇಟಿ ನೀಡಿ ಕಾರನ್ನು ನೇರವಾಗಿ ಪರಿಶೀಲಿಸಬಹುದಾಗಿದೆ.

new-gen-renault-duster-reaches-showrooms-expected-price-details

ಸಾಮಾನ್ಯವಾಗಿ ಡೀಲರ್‌ಶಿಪ್‌ಗಳನ್ನು ತಲುಪುವ ಈ ಡಿಸ್ಪ್ಲೆ ವಾಹನಗಳು ಡೆಲಿವರಿಗಳು ಶೀಘ್ರದಲ್ಲೆ ಪ್ರಾರಂಭವಾಗಲಿವೆ ಎಂಬ ಸುಳಿವನ್ನು ನೀಡುತ್ತದೆ. ಜೊತೆಗೆ ಬಿಡುಗಡೆ ಕೂಡ ತೀರಾ ಹತ್ತಿರದಲ್ಲಿದೆ ಎಂಬುದನ್ನು ಸೂಚಿಸುತ್ತದೆ, ಬಹುಶಃ ಮಾರ್ಚ್ ಆರಂಬದಲ್ಲೆ ಬೆಲೆಗಳು ಘೋಷಣೆಯಾಗುವ ಸಾಧ್ಯತೆ ಇದೆ. ಹೀಗೇನಾದೂ ಇದ್ದರೇ ಏಪ್ರಿಲ್‌ನಲ್ಲಿ ಡೆಲಿವರಿಗಳು ನೀಡಬಹುದು ಎಂದು 'Times Now' ವರದಿ ಮಾಡಿದೆ. ಆಸಕ್ತರು ಕಾರಿನ ಸಂಪೂರ್ಣ ಮಾಹಿತಿಗೆ ಈ ಕೆಳಗಿನ ವಿಶೇಷತೆಗಳನ್ನು ನೋಡಿ.

ಹೊಸ ರೆನಾಲ್ಟ್ ಡಸ್ಟರ್ ವಿಶೇಷತೆಗಳು

ಹೊಸ ಡಸ್ಟರ್ ರೂ. 11 ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಈಗಾಗಲೇ ಹೊಸ ಡಸ್ಟರ್‌ಗಾಗಿ ಬುಕಿಂಗ್‌ಗಳು ಆರಂಭವಾಗಿದ್ದು, 21,000 ರೂ. ಪಾವತಿಸಿ ಬುಕ್ ಮಾಡಿಕೊಳ್ಳಬಹುದು. ಒಮ್ಮೆ ಬಿಡುಗಡೆಯಾದ ಬಳಿಕ ಹೊಸ ರೆನಾಲ್ಟ್ ಡಸ್ಟರ್ ಎಸ್‌ಯುವಿ, ಹುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಟಾಟಾ ಸಿಯೆರಾ ಮತ್ತು ಈ ವಿಭಾಗದಲ್ಲಿನ ಇತರ ಪ್ರತಿಸ್ಪರ್ಧಿಗಳಿಗೆ ಪೈಪೋಟಿ ನೀಡಲಿದೆ.

new-gen-renault-duster-reaches-showrooms-expected-price-details

ಹೊಸ ರೆನಾಲ್ಟ್ ಡಸ್ಟರ್‌ನ ಒಳಾಂಗಣವು ಪನೋರಮಿಕ್ ಸನ್‌ರೂಫ್, ಹೊಸ 3-ಸ್ಪೋಕ್ ಸ್ಟೀರಿಂಗ್ ವೀಲ್, ಡ್ಯಾಶ್‌ಬೋರ್ಡ್‌ನಲ್ಲಿ ಡ್ಯುಯಲ್-ಸ್ಕ್ರೀನ್ ಲೇಔಟ್, ಆಂಬಿಯೆಂಟ್ ಲೈಟಿಂಗ್, ಡ್ಯಾಶ್‌ಬೋರ್ಡ್ ಮತ್ತು ಬಾಗಿಲುಗಳ ಮೇಲೆ ಕಾರ್ಬನ್ ಫೈಬರ್ ಇನ್ಸರ್ಟ್‌ಗಳು, ಡ್ಯುಯಲ್ - ಟೋನ್ ಅಪ್ಹೋಲ್ಸ್ಟರಿ ಮತ್ತು ಡ್ಯುಯಲ್ - ಜೋನ್ ಕ್ಲೈಮೇಟ್ ಕಂಟ್ರೋಲ್‌, ಟೈಪ್-ಸಿ ಚಾರ್ಜಿಂಗ್ ಪೋರ್ಟ್‌ಗಳು, ಆಟೋ-ಹೋಲ್ಡ್‌ನೊಂದಿಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಒಳಗೊಂಡಿದೆ.

ಇತರ ಮುಖ್ಯಾಂಶಗಳಲ್ಲಿ ಪವರ್ಡ್ ಫ್ರಂಟ್ ಸೀಟುಗಳು, ಹೊಂದಾಣಿಕೆ ಮಾಡಬಹುದಾದ ಫ್ರಂಟ್ ಆರ್ಮ್‌ರೆಸ್ಟ್, ಪವರ್ಡ್ ಟೈಲ್‌ಗೇಟ್ ಮತ್ತು 60:40 ಸ್ಪ್ಲಿಟ್ ರಿಯರ್ ಸೀಟುಗಳೊಂದಿಗೆ ಬರುತ್ತದೆ. ಅರ್ಕಾಮಿಸ್ ಸೌಂಡ್ ಸಿಸ್ಟಮ್, 360-ಡಿಗ್ರಿ ಕ್ಯಾಮೆರಾ, ಆರು ಏರ್‌ಬ್ಯಾಗ್‌ಗಳು ಮತ್ತು ಲೆವೆಲ್ 2 ADAS ಇದರ ಪ್ರೀಮಿಯಂ ಆಕರ್ಷಣೆಯ ಸೇರ್ಪಡೆಯಾಗಿದ್ದು, ಡಸ್ಟರ್ ಮೊದಲಿಗಿಂತ ಹೆಚ್ಚು ಆಕರ್ಷಕವಾಗಿದೆ.

new-gen-renault-duster-reaches-showrooms-expected-price-details

ಎಂಜಿನ್ ವಿಷಯಕ್ಕೆ ಬಂದರೆ 1.0-ಲೀಟರ್, 3-ಸಿಲಿಂಡರ್, ಟರ್ಬೊ - ಪೆಟ್ರೋಲ್ ಎಂಜಿನ್ ಹಾಗೂ 1.3-ಲೀಟರ್, 4-ಸಿಲಿಂಡರ್, ಟರ್ಬೊ - ಪೆಟ್ರೋಲ್, ಡೈರೆಕ್ಟ್ - ಇಂಜೆಕ್ಷನ್ ಎಂಜಿನ್ ಹಾಗೂ ಎರಡು ಎಲೆಕ್ಟ್ರಿಕ್ ಮೋಟಾರ್‌ಗಳೊಂದಿಗೆ ಜೋಡಿಸಲಾದ 1.8-ಲೀಟರ್, 4-ಸಿಲಿಂಡರ್, ಡೈರೆಕ್ಟ್ - ಇಂಜೆಕ್ಷನ್ ಪೆಟ್ರೋಲ್ ಹೈಬ್ರಿಡ್ ಎಂಜಿನ್ ಆಯ್ಕೆಗಳನ್ನು ಹೊಂದಿರಲಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Friday, February 20, 2026, 14:46 [IST]
English summary
New gen renault duster reaches showrooms expected price details
Read more on renault india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+