ಶ್ರೀಮಂತರಲ್ಲಿ ಅತಿ ಶ್ರೀಮಂತರಿಗಾಗಿ ಆಡಿ ಲಗ್ಷುರಿ ಕಾರು
ಒಂದರ ಬಳಿಕ ಒಂದರಂತೆ ಅತ್ಯಾಕರ್ಷಕ ಕಾರುಗಳನ್ನು ಪರಿಚಯಿಸುತ್ತಾ ಬಂದಿರುವ ಜರ್ಮನಿ ಮೂಲದ ಪ್ರೀಮಿಯಂ ಕಾರು ತಯಾರಕ ಸಂಸ್ಥೆಯಾಗಿರುವ ಆಡಿ, ಭಾರತಕ್ಕೆ ಇನ್ನೊಂದು ಐಷಾರಾಮಿ ಕಾರಿನ ಪರಿಚಯ ಮಾಡಿಕೊಟ್ಟಿದೆ.
ಪವರ್‌ಫುಲ್ ಕಾರಿನ ಸೌಂದರ್ಯವನ್ನು ಸಾರುವ ನೂತನ ಆಡಿ ಆರ್‌ಎಸ್ 5 ಕೂಪೆ ದೇಶಕ್ಕೆ ಅಧಿಕೃತ ಲಗ್ಗೆಯಿಟ್ಟಿದೆ. ಆದರೆ ಈ ಕಾರು ಶ್ರೀಮಂತರಲ್ಲಿ ಅತಿ ಶ್ರೀಮಂತರಿಗೆ ಮಾತ್ರ ಕೈಟಕಲಿದೆ. ಯಾಕೆಂದರೆ ಇದರ ಎಕ್ಸ್ ಶೋ ರೂಂ ದರ ದರ ಬರೋಬ್ಬರಿ 95 ಲಕ್ಷ ರು.ಗಳಾಗಿವೆ.
ಪ್ರಮುಖ ವೈಶಿಷ್ಟ್ಯಗಳು
ಕೇವಲ 4.5 ಸೆಕೆಂಡುಗಳಲ್ಲಿ 0-100 ಕೀ.ಮೀ. ವೇಗವರ್ಧನೆ
4.2 ಲೀಟರ್ ಎಫ್‌ಎಸ್‌ಐ ವಿ8 ಎಂಜಿನ್, 450 ಅಶ್ವಶಕ್ತಿ
ಸ್ಟಾಂಡರ್ಡ್ 7 ಸ್ಪೀಡ್ ಎಸ್ ಟ್ರಾನಿಕ್ ಡ್ಯುಯಲ್ ಕ್ಲಚ್ ಟ್ರಾನ್ಸ್‌ಮಿಷನ್
ಸ್ಪೋರ್ಟ್ಸ್ ಕಾರ್ ಸೆಗ್ಮೆಂಟ್, ಲಗ್ಫುರಿ ಲುಕ್

ಆಡಿ ಆರ್‌ಎಸ್ 5 ಕೂಪೆ ಐಷಾರಾಮಿ ಕಾರಿನ ಮಹಾರಾಷ್ಟ್ರ ಎಕ್ಸ್ ಶೋ ರೂಂ ದರ 95,28,000 ರು.ಗಳಾಗಿವೆ.

ಆಡಿ ಆರ್‌ಎಸ್ 5 ಕೂಪೆ ಕಾರಿನ ಮೂಲಕ ಸ್ಪೋರ್ಟ್ಸ್ ಕಾರು ಸೆಗ್ಮೆಂಟ್‌ನಲ್ಲಿ ಆಡಿ ಅಧಿಪತ್ಯ ಸ್ಥಾಪಿಸುವ ಭರವಸೆಯನ್ನು ಕಂಪನಿ ಹೊಂದಿದೆ.

ಉತ್ತಮ ಇಂಧನ ದಕ್ಷತೆ ಜತೆ ಶ್ರೇಷ್ಠ ಮಟ್ಟ ನಿರ್ವಹಣೆಯನ್ನು ಆರ್‌ಎಸ್ 5 ಕೂಪೆ ಪ್ರದಾನ ಮಾಡುತ್ತಿದೆ.

ಚಾಸೀಸ್
ಆಡಿ ಡ್ರೈವ್ ಸೆಲೆಕ್ಟ್ ಡ್ರೈವಿಂಗ್ ಡೈನಾಮಿಕ್ ಸಿಸ್ಟಂ, ಡೈನಾಮಿಕ್ ಸ್ಟೀರಿಂಗ್
ಗರಿಷ್ಠ ನಿರ್ವಹಣೆಯ ಬ್ರೇಕ್
ಸ್ಪೋರ್ಟ್ ಸಸ್ಪೆಷನ್ ಪ್ಲಸ್ ಜತೆ ಡೈನಾಮಿಕ್ ರೈಡ್ ಕಂಟ್ರೋಲ್

ಬಾಡಿ
ಎಲೆಗಂಟ್ ಕೂಪೆ ವಿನ್ಯಾಸ
ಕ್ಸೆನಾನ್ ಪ್ಲಸಸ್ ಹೆಡ್ ಲೈಟ್ಸ್ ಜತೆ ಎಲ್‌ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್ ಹಾಗೂ ಎಲ್‌ಇಡಿ ಟೈಲ್‌ಲೈಟ್ಸ್
ಆರ್‌ಎಸ್ ಬಾಡಿ ಸ್ಟೈಲಿಂಗ್

ಇಂಟಿರಿಯರ್ ಹಾಗೂ ನಿಯಂತ್ರಣ
ಎಕ್ಸ್‌ಕ್ಲೂಸಿವ್ ಇಂಟಿರಿಯರ್
ಪವರ್ ಹೊಂದಾಣಿಸಬಹುದಾದ ಎಸ್ ಸ್ಪೋರ್ಟ್ಸ್ ಸೀಟ್
ಕ್ಲೈಮೇಟ್ ಕಂಟ್ರೋಲ್ ಕಂಫರ್ಟ್ ಸೀಟ್ಸ್

ಸುರಕ್ಷತೆ
ಏರ್ ಬ್ಯಾಗ್
ಆಡಿ ಪಾರ್ಕಿಂಗ್ ಸಿಸ್ಟಂ ಪ್ಲಸ್

ಏತನ್ಮಧ್ಯೆ 2013ನೇ ಸಾಲಿನ ಮೊದಲಾರ್ಧದಲ್ಲಿ ಭರ್ಜರಿ ಸೇಲ್ಸ್ ದಾಖಲಿಸಿಕೊಂಡಿರುವ ಆಡಿ ಇಂಡಿಯಾ, ಶೇಕಡಾ 21ರಷ್ಟು ವೃದ್ಧಿಯನ್ನು ದಾಖಲಿಸಿದೆ.

ಈ ಸಾಲಿನಲ್ಲಿ ಒಟ್ಟು 4846 ಯುನಿಟ್ ಸೇಲ್ ಮಾಡುವಲ್ಲಿ ಆಡಿ ಯಶಸ್ವಿಯಾಗಿದ್ದರೆ ಕಳೆದ ವರ್ಷವಿದು ಕೇವಲ 4000 ಯುನಿಟ್‌ಗೆ ಸೀಮಿತವಾಗಿತ್ತು.

ಈ ಪೈಕಿ ಜೂನ್ ತಿಂಗಳಲ್ಲಿ ಮಾತ್ರವಾಗಿ 750 ಯುನಿಟ್ ಸೇಲ್ ಮಾಡುವ ಮೂಲಕ ಶೇಕಡಾ 4ರಷ್ಟು ವೃದ್ಧಿ ದಾಖಲಿಸಿದೆ.

ಹಾಗೆಯೇ 2013 ವರ್ಷಾಂತ್ಯದ ವೇಳೆಗೆ ಈಗ ಇರುವ 26 ಡೀಲರ್‌ಶಿಪ್‌ಗಳ ಸಂಖ್ಯೆಯನ್ನು 32ಕ್ಕೆ ಏರಿಸುವ ಯೋಜನೆಯನ್ನು ಆಡಿ ಹೊಂದಿದೆ.

ಆಡಿ ಎ4
ಆಡಿ ಎ6
ಆಡಿ ಎ7 ಸ್ಪೋರ್ಟ್ ಬ್ಯಾಕ್
ಆಡಿ ಎ8ಎಲ್,
ಆಡಿ ಕ್ಯೂ3
ಆಡಿ ಕ್ಯೂ5
ಆಡಿ ಕ್ಯೂ7
ಆಡಿ ಎಸ್4
ಆಡಿ ಆರ್‌ಎಸ್ 5 ಕೂಪೆ
ಆಡಿ ಟಿಟಿ ಕೂಪೆ
ಆಡಿ ಆರ್8
ಆಡಿ ಆರ್8 ವಿ10 ಪ್ಲಸ್
ಆಡಿ ಆರ್8 ಸ್ಪೈಡರ್


Click it and Unblock the Notifications








