ಬಂದಿದೆ ಇನ್ನೊಂದು ಪರಿಸರ ಸ್ನೇಹಿ ಎಲೆಕ್ಟ್ರಿಕ್ ಗಾಡಿ
2010ನೇ ಇಸವಿಯಲ್ಲಿ ಬಿಆರ್‌ಪಿ (Bombardier Recreational Products) ಮೊದಲ ಬಾರಿಗೆ ಎರಡು ಮಂದಿಗೆ ಸಂಚರಿಸಬಹುದಾದ ವಿದ್ಯುತ್ ಚಾಲಿತ ವಾಹನವನ್ನು ಪರಿಚಯಿಸಿತ್ತು. ಇದೀಗ ಭವಿಷ್ಯದ ಸಂಚಾರ ವಾಹನದತ್ತ ಇನ್ನು ಹೆಚ್ಚು ಕಾರ್ಯ ಮಗ್ನವಾಗಿರುವ ಬಿಆರ್‌ಪಿ ಮತ್ತೊಂದು '2013 ಕ್ಯಾನ್-ಆಮ್ ಇ ಕಮಾಂಡರ್' (2013 Can-Am eCommander Concept) ಎಲೆಕ್ಟ್ರಿಕ್ ವಾಹನದ ಕಾನ್ಸೆಪ್ಟ್ ಪರಚಯಿಸಿದೆ.
ಭವಿಷ್ಯದ ವಾಹನ ರೂಪಿಸುವುದರಲ್ಲಿ ಸತತ ಪ್ರಯತ್ನದ ಫಲವಾಗಿ ನೂತನ ಎಲೆಕ್ಟ್ರಿಕ್ ವಾಹನದ ರೂಪುರೇಷೆ ತಯಾರುಗೊಂಡಿದೆ. ಈ ಪರಿಸರ ಸ್ನೇಹಿ ವಾಹನ ಉತ್ತಮ ನಿರ್ವಹಣೆ ನೀಡಲಿದೆ.
ಪ್ರಮುಖ ವೈಶಿಷ್ಟ್ಯಗಳು:
- ವಿದ್ಯುತ್ ಚಾಲಿತ ವಾಹನ, ಶಿಪ್ರ ಗತಿಯಲ್ಲಿ ಚಾರ್ಜಿಂಗ್
- ಎಲೆಕ್ಟ್ರಿಕ್ ಮೋಟಾರ್ ಪೀಕ್ ಪವರ್- 23 ಕೆಡಬ್ಲ್ಯು
- ಲಿಥಿಯಂ ಇಯಾನ್ ಬ್ಯಾಟರಿ (21.2 kWh)
- ಆಪರೇಟಿಂಗ್ ವೋಲ್ಟೆಜ್ (48 ವಾಟ್)
- ವೈಯಕ್ತಿಕ ಲಾಂಕಿಂಗ್ ಫ್ರಂಟ್/ರಿಯರ್
- ಸೂಪರ್ ಸ್ತಬ್ಧ ಕಾರ್ಯಾಚರಣೆ
ನಿರ್ವಹಣೆ:
- ರೇಂಜ್: 160 ಕೀ.ಮೀ.
- ರಿಚಾರ್ಜಿಂಗ್ ಅವಧಿ: 2 ಗಂಟೆ
- ಎಮಿಷನ್: ಝಿರೋ
- ರಿಜನರೇಟಿವ್ ಲಾಕಿಂಗ್
- ಗರಿಷ್ಠ ವೇಗ: ಗಂಟೆಗೆ 40 ಕೀ.ಮೀ.

ಕ್ಯಾನ್-ಆಮ್ ಇ ಕಮಾಂಡರ್ ಕಾನ್ಸೆಪ್ಟ್ ಮೊದಲ ಬಾರಿಗೆ 2010ರಲ್ಲಿ ಅನಾವರಣಗೊಳಿಸಲಾಗಿತ್ತು. ಇದು 48 ವಾಟ್ ಲಿಥಿಯಂ ಇಯಾನ್ ಬ್ಯಾಟರಿಯಿಂದ ಆಪರೇಟ್ ಆಗಲಿದೆ.

ಹಾಗೆಯೇ ಪ್ರತಿ ಗಂಟೆಗೆ 40 ಕೀ.ಮೀ. ವೇಗತೆಯಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ.

ಸಂಪೂರ್ಣವಾಗಿ ವಿದ್ಯುತ್ ಚಾಲಿತವಾಗಿದ್ದರಿಂದ ಈ ಪರಿಸರ ಸ್ನೇಹಿ ವಾಹನ ಝಿರೋ ಎಮಿಷನ್ ಹೊಂದಿದೆ.

ಒಮ್ಮೆ ಚಾರ್ಜ್ ಮಾಡಿಸಿದರೆ 160 ಕೀ.ಮಿ.ಗಿಂತಲೂ ಹೆಚ್ಚು ದೂರ ಆರಾಮವಾಗಿ ಪಯಣಿಸಬಹುದು.

ಹಾಗೆಯೇ 2 ಗಂಟೆ ಅವಧಿಯಲ್ಲಿ ಬ್ಯಾಟರಿ ರಿಚಾರ್ಜ್ ಮಾಡಿಸಬಹುದಾಗಿದೆ. ಇದರಿಂದ ಶಿಪ್ರ ಗತಿಯ ರಿಚಾರ್ಜ್ ಸೇವೆ ಸಿಗಲಿದೆ.


Click it and Unblock the Notifications