ದೀಪಾವಳಿಗೂ ಮೊದಲು 2014 ರೇಂಜ್ ರೋವರ್ ರಸ್ತೆಗೆ
ದೀಪಾವಳಿ ಹಬ್ಬದ ಆವೃತ್ತಿಗೂ ಮುನ್ನ ಭಾರತೀಯ ರಸ್ತೆಗೆ 2014 ರೇಂಜ್ ರೋವರ್ ಸ್ಪೋರ್ಟ್ ಎಂಟ್ರಿ ಕೊಡಲಿದೆ. ಜಾಗತಿಕವಾಗಿ ಅತಿಶ್ರೇಷ್ಠ ಐಷಾರಾಮಿ ಆಫ್-ರೋಡ್ ಕಾರೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ರೇಂಜ್ ರೋವರ್‌ನ ಹೊಸ ವೆರಿಯಂಟ್ ಇನ್ನಷ್ಟು ಪವರ್‌ಫುಲ್ ಎನಿಸಿಕೊಳ್ಳಲಿದೆ.
ಎಂಜಿನ್, ವೆರಿಯಂಟ್
ನಿಮ್ಮ ಮಾಹಿತಿಗಾಗಿ, ಬ್ರಿಟನ್‌ನಲ್ಲಿ ರೇಂಜ್ ರೋವರ್‌ನ ಐದು ವೆರಿಯಂಟ್‌ಗಳು ಲಭ್ಯವಿದೆ. ಈ ಪೈಕಿ ಭಾರತಕ್ಕೆ ಎರಡು ವೆರೆಯಂಟ್‌ಗಳು ಮಾತ್ರ ಆಗಮನವಾಗಲಿದೆ. ಮೊದಲ 3 ಲೀಟರ್ ವಿ6 ಡೀಸೆಲ್ ಎಂಜಿನ್ 292 (600 ಟರ್ಕ್ಯೂ) ಪವರ್ ಸರಬುರಾಜು ಮಾಡಲಿದೆ. ಹಾಗೆಯೇ 5 ಲೀಟರ್ ವಿ8 ಸೂಪರ್ ಚಾರ್ಜ್ಡ್ ಪೆಟ್ರೋಲ್ ಎಂಜಿನ್ 510 (625 ಎನ್‌ಎಂ ಟರ್ಕ್ಯೂ) ಪವರ್ ಸಪ್ಲೇ ಮಾಡಲಿದೆ. ಈ ಎರಡು ಎಂಜಿನ್‌ಗಳು 8 ಸ್ಪೀಡ್ ಝಡ್‌ಎಫ್ ಟ್ರಾನ್ಸ್‌ಮಿಷನ್ ಹೊಂದಿರಲಿದೆ.
ಕಂಪ್ಲೀಟ್ ಬಿಲ್ಟ್ ಯುನಿಟ್ ಮುಖಾಂತರ ಭಾರತದ ಗ್ರಾಹಕರಿಗೆ ರೇಂಜ್ ರೋವರ್ ಲಭಿಸಲಿದೆ. ಇನ್ನು ಮೂರು ಸಾಲುಗಳ ಆರಾಮದಾಯಕ ಸಿಟ್ಟಿಂಗ್ ವ್ಯವಸ್ಥೆ ಹೊಂದಿರುವ ರೇಂಜ್ ರೋವರ್ ಉತ್ತಮ ಕೌಟುಂಬಿಕ ಕಾರು ಎನಿಸಿಕೊಳ್ಳಲಿದೆ.
ಇನ್ನು ಕಾರಿನ ಆಳಭಾಗದಲ್ಲಿ ಐಷಾರಾಮಿ ಫೀಚರ್ಸ್ ಲಭ್ಯವಿದ್ದು, ಮೆರಿಡಿಯನ್ ಆಡಿಯೋ ಸಿಸ್ಟಂ, 8 ಇಂಚು ಟಚ್ ಸ್ಕ್ರೀನ್ ಮಾಹಿತಿ ಸಿಸ್ಟಂ ಸೇರಿದಂತೆ ಅನೇಕ ಸೌಲಭ್ಯ ಲಭ್ಯವಿರಲಿದೆ.


Click it and Unblock the Notifications









