2014ರಲ್ಲಿ ಟೊಯೊಟಾ ಕರೊಲ್ಲಾ ಲಾಂಚ್ ?
ಈಗಾಗಲೇ ಕ್ಯಾಮೆರಾ ರಹಸ್ಯ ಕಣ್ಣುಗಳಿಗೆ ಸೆರೆಸಿಕ್ಕಿರುವ 2014 ಟೊಯೊಟಾ ಕರೊಲ್ಲಾ ವರ್ಷಾರಂಭದಲ್ಲಿ ದೇಶದ ರಸ್ತೆ ಪ್ರವೇಶಿಸುವ ಸಾಧ್ಯತೆಯಿದೆ ಎಂದು ವಾಹನೋದ್ಯಮ ಮೂಲಗಳು ತಿಳಿಸಿವೆ.
ಇದೇ ಮೊದಲ ಬಾರಿಗೆ ಭಾರತೀಯ ರಸ್ತೆಗಳಲ್ಲಿ ಟೊಯೊಟಾದ ಈ ಐಷಾರಾಮಿ ಕಾರು ಟೆಸ್ಟಿಂಗ್ ಹಮ್ಮಿಕೊಂಡಿದೆ. ನೂತನ ವರ್ಷನ್ ಎಕ್ಸ್‌ಟೀರಿಯರ್ ವಿನ್ಯಾಸದಲ್ಲಿ ಹೆಚ್ಚಿನ ಬದಲಾವಣೆ ಪಡೆದುಕೊಂಡಿದೆ.
2014 ಟೊಯೊಟಾ ಕರೊಲ್ಲಾ ಜಾಗತಿಕ ಲಾಂಚ್ ಜೂನ್ 6ರಂದು ನಡೆದಿತ್ತು. ನೆಕ್ಸ್ಟ್ ಜನರೇಷನ್ ಟೊಯೊಟಾ ಕರೊಲ್ಲಾ, ಡೈನಾಮಿಕ್ ಎಕ್ಸ್‌ಟೀರಿಯರ್ ವಿನ್ಯಾಸದ ಜತೆ ಹೆಚ್ಚು ಸ್ಥಳಾವಕಾಶದ ಇಂಟಿರಿಯರ್ ವಿಭಾಗ ಪಡೆದಿದೆ. ಹಾಗೆಯ್ ಎಲ್‌ಇಡಿ ಹೆಡ್ ಲ್ಯಾಂಪ್, ಬ್ಲೂಟೂತ್ ಆಡಿಯೋ ಜತೆ ಸ್ಮಾರ್ಟ್ ಕಿ ಸಿಸ್ಟಂ ಹಾಗೂ ಪುಶ್ ಅಪ್ ಸ್ಟಾರ್ಟ್ ಲಭ್ಯವಿರುತ್ತದೆ.
1.8 ಲೀಟರ್ 4 ಸಿಲಿಂಡರ್ ಪೆಟ್ರೋಲ್ ಹಾಗೂ 1.4 ಲೀಟರ್ ಡೀಸೆಲ್ ಹೊಂಡಿರುವ 2014 ಟೊಯೊಟಾ ಕರೆಲ್ಲಾ ಒಟ್ಟು ನಾಲ್ಕು ವೆರಿಯಂಟ್‌ಗಳಲ್ಲಿ ಆಗಮನವಾಗುವ ನಿರೀಕ್ಷೆಯಿದೆ.


Click it and Unblock the Notifications









