50ರ ಸಂಭ್ರಮ; ಕುದರೆ ಓಟಕ್ಕೆ ಮಸ್ಟಾಂಗ್ ರೆಡಿ
2015 ಫೋರ್ಡ್ ಮಸ್ಟಾಂಗ್ ಅನಾವರಣಕ್ಕೆ ವೇದಿಕೆ ಸಿದ್ಧಗೊಂಡಿದ್ದು, ಮುಂಬರುವ ಡಿಸೆಂಬರ್ 5ರಂದು ಪ್ರದರ್ಶನ ಕಾಣಲಿದೆ. ಈ ಬಗ್ಗೆ ಕಂಪನಿಯು ಮೊದಲ ಬಾರಿಗೆ ಮಾಧ್ಯಮಕ್ಕೆ ವಿವರಣೆ ನೀಡಿದೆ.
ಹೊಸ ವಿನ್ಯಾಸ ಪಡೆದುಕೊಂಡಿರುವ ಆಲ್ ನ್ಯೂ ಫೋರ್ಡ್ ಮಸ್ಟಾಂಗ್, ಆಧುನಿಕ ತಂತ್ರಜ್ಞಾನಗಳನ್ನು ಒಳಗೊಂಡಿರಲಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಫೋರ್ಡ್ ಸೇಲ್ಸ್ ಆಂಡ್ ಸರ್ವೀಸ್ ಉಪಾಧ್ಯಕ್ಷ ಜಿಮ್ ಫಾರ್ಲೆ, ಮುಂದಿನ 50 ವರ್ಷಗಳ ವರೆಗಿನ ಮಸ್ಟಾಂಗ್ ಸಜ್ಜಾಗಿದೆ ಎಂದಿದ್ದಾರೆ.

ಅಂದ ಹಾಗೆ 50 ವರ್ಷಾಚರಣೆಯ ಅಂಗವಾಗಿ ಮಸ್ಟಾಂಗ್ ನೂತನ ವರ್ಷನ್ ಮಾರುಕಟ್ಟೆ ಪ್ರವೇಶಿಸುತ್ತಿದೆ. 2014 ಡೆಟ್ರಾಯ್ಟ್ ಮೋಟಾರ್ಶೋದಲ್ಲಿ ಅನಾವರಣಗೊಳ್ಳಲಿರುವ ಕ್ರೀಡಾ ಉತ್ಪಾದಕ ಮಸ್ಟಾಂಗ್ ಕಾರು ಎಪ್ರಿಲ್‌ನಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ.
ಹಾಗೆಯೇ ಇದೇ ಮೊದಲ ಬಾರಿಗೆ 2015 ಮಸ್ಟಾಂಗ್ ನೇರವಾಗಿ ಯುರೋಪ್‌ಯೇತರ ರಾಷ್ಟ್ರಗಳಲ್ಲಿ ಮಾರಾಟವಾಗಲಿದೆ. ಇನ್ನು ಭಾರತಕ್ಕೆ ಆಗಮನವಾದ್ದಲ್ಲಿ ಇದು ದೇಶದ ಅಭಿಮಾನಿಗಳಿಗೆ ವಿನೂತನ ಚಾಲನಾ ಅನುಭವ ನೀಡಲಿದೆ.


Click it and Unblock the Notifications








