Ford: ಮಾಡಲ್ ಸ್ಥಗಿತ, ಆದರೆ ಫುಲ್ ಡಿಮ್ಯಾಂಡ್: ಜನ ಸೆಕೆಂಡ್ ಹ್ಯಾಂಡ್‌ನಲ್ಲಿ ಮುಗಿಬಿದ್ದು ಖರೀದಿ!
ವಿಶ್ವಾದ್ಯಂತ ಜನಪ್ರಿಯತೆ ಪಡೆದಿರುವ ಫೋರ್ಡ್ (Ford) ಕಂಪನಿಯು ಭಾರತೀಯ ಮಾರುಕಟ್ಟೆಯಿಂದ ನಿರ್ಗಮಿಸಿದ ಹೊರತಾಗಿಯೂ, ಈ ಬ್ರಾಂಡ್‌ನ ಪ್ರಮುಖ ಕಾರೊಂದು ದೇಶದಲ್ಲಿ ಇನ್ನೂ ಸದ್ದು ಮಾಡುತ್ತಿದೆ. ಸೆಕೆಂಡ್ ಹ್ಯಾಂಡ್ ಮಾರುಕಟ್ಟೆಯಲ್ಲಿ ಈ ಕಾರು ಖರೀದಿದಾರರಿಗೆ ಮೆಚ್ಚಿನ ಆಯ್ಕೆಯಾಗಿರುವುದು ಹಲವರನ್ನು ಅಚ್ಚರಿಗೊಳಿಸಿದೆ. ಅದೇ ಫೋರ್ಡ್‌ನ ಪ್ರಖ್ಯಾತ ಇಕೋಸ್ಪೋರ್ಟ್ (EcoSport) ಎಸ್‌ಯುವಿ, ಇದರ ಘನ ನಿರ್ಮಾಣ ಗುಣಮಟ್ಟದಿಂದ ಭಾರತದಲ್ಲಿ ತನ್ನ ಖ್ಯಾತಿಯನ್ನು ಗಳಿಸಿದೆ. ಇದರೊಳಗಿನ ಆರು ಏರ್‌ಬ್ಯಾಗ್‌ಗಳು, 200 ಎಂಎಂ ಗ್ರೌಂಡ್ ಕ್ಲಿಯರೆನ್ಸ್, ಹೆಚ್ಚಿನ ಸಾಮರ್ಥ್ಯದ ಚಾಸಿಸ್, ಪವರ್‌ಫುಲ್ ಎಂಜಿನ್ ಭಾರತದಲ್ಲಿ ಅದಕ್ಕೆ ಬೇಡಿಕೆ ಹೆಚ್ಚಿಸಿದೆ.
ಈ ಕಾರು 2021 ರಲ್ಲಿ ಭಾರತದಲ್ಲಿ ಸ್ಥಗಿತಗೊಂಡರೂ, ಸೆಕೆಂಡ್‌ಹ್ಯಾಂಡ್ ಕಾರು ಮಾರುಕಟ್ಟೆಯಲ್ಲಿ ಇನ್ನೂ ಸದ್ದು ಮಾಡುತ್ತಿದೆ. ಪ್ರಮುಖ ಸೆಕೆಂಡ್ ಹ್ಯಾಂಡ್ ಕಾರು ಮಾರಾಟಗಾರರಾದ ಸ್ಪಿನ್ನಿಯ Q1 2025 ರ ವರದಿಯ ಪ್ರಕಾರ, ಇಕೋಸ್ಪೋರ್ಟ್ ಜನವರಿ ಮತ್ತು ಮಾರ್ಚ್ ನಡುವೆ ಹೆಚ್ಚು ಮಾರಾಟವಾದ ಕಾಂಪ್ಯಾಕ್ಟ್ SUV ಆಗಿದೆ. ಸುಮಾರು ನಾಲ್ಕು ವರ್ಷಗಳಿಂದ ಹೊಸ ಕಾರು ಬಿಡುಗಡೆಯಾಗದಿದ್ದರೂ ಈ ಮಟ್ಟದ ಬೇಡಿಕೆ ಇರುವುದು ಆಶ್ಚರ್ಯಕರ ತಿರುವಾಗಿದೆ.

2025 ರಲ್ಲಿಯೂ ಯಾಕಿಷ್ಟು ಬೇಡಿಕೆ?: ಇಕೋಸ್ಪೋರ್ಟ್‌ನ ನೇರವಾದ SUV ನಿಲುವು, ದಪ್ಪವಾದ ಮುಂಭಾಗದ ಗ್ರಿಲ್ ಮತ್ತು ಹಿಂಭಾಗದಲ್ಲಿ ನೀಡಲಾದ ಸ್ಪೇರ್ ವೀಲ್ ಇದಕ್ಕೆ ಆಕರ್ಷಕ ನೋಟವನ್ನು ನೀಡುತ್ತದೆ. ಅನೇಕ ಹೊಸ ಕಾಂಪ್ಯಾಕ್ಟ್ SUV ಗಳು ವಿನ್ಯಾಸದಲ್ಲಿ ಮೃದುವಾಗಿದ್ದರೂ, ಇಕೋಸ್ಪೋರ್ಟ್ ರಗಡ್ ಲುಕ್‌ನೊಂದಿಗೆ ಅಡ್ವೆಂಚರ್ ಎಸ್‌ಯುವಿಯಾಗಿ ಎದ್ದುಕಾಣುತ್ತದೆ.
ಸೌಕರ್ಯ ಮತ್ತು ವೈಶಿಷ್ಟ್ಯಗಳ ಕಡೆಗೆ ಹೆಚ್ಚು ಒಲವು ತೋರುವ ಅನೇಕ ಕಾಂಪ್ಯಾಕ್ಟ್ ಎಸ್‌ಯುವಿಗಳಿಗಿಂತ ಭಿನ್ನವಾಗಿ, ಇಕೋಸ್ಪೋರ್ಟ್ ಯಾವಾಗಲೂ ಸ್ವಲ್ಪ ಡ್ರೈವರ್ ಉತ್ಸಾಹಿ ಸ್ನೇಹಿಯಾಗಿದೆ. ಇದರ 1.5-ಲೀಟರ್ ಟಿಡಿಸಿಐ ಡೀಸೆಲ್ ಎಂಜಿನ್ ಅದರ ಚುರುಕಾದ ಪರ್ಫಾಮೆನ್ಸ್‌ಗೆ ಹೆಸರುವಾಸಿಯಾಗಿದ್ದು, 23 ಕಿ.ಮೀ ವರೆಗೆ ಮೈಲೇಜ್ ನೀಡುತ್ತದೆ. ಇದರಲ್ಲಿ ಪೆಟ್ರೋಲ್ ಆಯ್ಕೆಯೂ ಇದ್ದು, 1.0-ಲೀಟರ್ ಇಕೋಬೂಸ್ಟ್ ಟರ್ಬೊ-ಪೆಟ್ರೋಲ್ ಎಂಜಿನ್ ಬೆಸ್ಟ್ ಆಯ್ಕೆಯಾಗಿದೆ.

ಇಂದಿನ ಸೆಕೆಂಡ್ ಹ್ಯಾಂಡ್ ಕಾರು ಮಾರುಕಟ್ಟೆಯಲ್ಲಿ, 2017 ರಿಂದ 2021 ರ ನಡುವೆ ಉತ್ತಮ ಕಂಡಿಷನ್‌ನಲ್ಲಿರುವ ಇಕೋಸ್ಪೋರ್ಟ್ ಸಾಮಾನ್ಯವಾಗಿ ರೂ. 5.5 ರಿಂದ ರೂ. 7.5 ಲಕ್ಷಕ್ಕೆ ಹೋಗುತ್ತದೆ. ಮರುಮಾರಾಟ ಮೌಲ್ಯವೂ ಸಹ ಇದ್ದು, ಐದು ವರ್ಷಗಳ ನಂತರವೂ ಇಕೋಸ್ಪೋರ್ಟ್ ತನ್ನ ಮೂಲ ಮೌಲ್ಯದ ಸುಮಾರು ಶೇ65 ರಿಂದ ಶೇ70 ರಷ್ಟನ್ನು ಹೊಂದಿದೆ.
ಚಿಂತೆ ಬೇಡೆ: ಫೋರ್ಡ್ ಭಾರತದಲ್ಲಿ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ ನಂತರ ಅನೇಕ ಖರೀದಿದಾರರು ಆರಂಭದಲ್ಲಿ ಹೆದರಿದ್ದರು. ಸರ್ವಿಸ್ ಮತ್ತು ಬಿಡಿಭಾಗಗಳ ಬಗ್ಗೆ ಕಳವಳಗಳು ವ್ಯಾಪಕವಾಗಿದ್ದವು. ಆದರೆ ವಾಸ್ತವವು ಹೆಚ್ಚು ಭರವಸೆ ನೀಡುತ್ತದೆ. ಬಿಡುಗಡೆಯ ಸಮಯದಲ್ಲಿ ಶೇ70 ಕ್ಕಿಂತ ಹೆಚ್ಚು - ಬಿಡಿಭಾಗಗಳು ವ್ಯಾಪಕವಾಗಿ ಲಭ್ಯವಿದೆ.

ಹಲವಾರು ಲೋಕಲ್ ಗ್ಯಾರೇಜ್‌ಗಳು ಮತ್ತು ಸೇವಾ ಜಾಲಗಳು ಈ ಕಾರಿಗೆ ಬೇಕಾದ ಬಿಡಿಭಾಗಗಳನ್ನು ಇಂದಿಗೂ ಹೊಂದಿದ್ದಾರೆ. ವಾಸ್ತವವಾಗಿ ಕೆಲ ಮಾಲೀಕರು ಕ್ಲಚ್ ಬದಲಿ ಮತ್ತು ಸಸ್ಪೆನ್ಷನ್ ಪರೀಕ್ಷೆಗಳಂತಹ ರಿಪೇರಿಗಳು ಹುಂಡೈ ವೆನ್ಯೂ ನಂತಹ ಹೊಸ ಪ್ರತಿಸ್ಪರ್ಧಿಗಳಿಗೆ ನೀವು ಪಾವತಿಸುವುದಕ್ಕಿಂತ ಶೇ25 ರಿಂದ 30 ರಷ್ಟು ಅಗ್ಗವಾಗಿದೆ ಎಂದು ಹೇಳುತ್ತಾರೆ.
ಬೆಸ್ಟ್ ಆಯ್ಕೆ: ಕಠಿಣ ನಗರ ಪರಿಸ್ಥಿತಿಗಳು, ದೀರ್ಘ ಪ್ರಯಾಣಗಳು ಮತ್ತು ಹೆಚ್ಚುತ್ತಿರುವ ಮಾಲೀಕತ್ವದ ವೆಚ್ಚಗಳನ್ನು ಕಡಿಮೆ ಮಾಡಲು ಫೋರ್ಡ್ ಇಕೋಸ್ಪೋರ್ಟ್ ಬೆಸ್ಟ್ ಆಯ್ಕೆಯಾಗಿದೆ. ಭಾರತೀಯ ಖರೀದಿದಾರರಿಗೆ, ಇಕೋಸ್ಪೋರ್ಟ್ ಅಪರೂಪದ ಮಿಶ್ರಣವನ್ನು ನೀಡುತ್ತದೆ. ಕಾಂಪ್ಯಾಕ್ಟ್ ಎಸ್‌ಯುವಿ ತರಹದ ನಿಲುವು, ಉತ್ತಮ ಎಂಜಿನ್, ಆರಾಮದಾಯಕ ಇಂಟೀರಿಯರ್ ಇದರ ಹೈಲೆಟ್‌ಗಳಾಗಿವೆ. ಈ ಕಾರಿನ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.


Click it and Unblock the Notifications








