ಫಾರ್ಚ್ಯೂನರ್‌ಗೆ ಶುರುವಾಯಿತು ಎದೆ ನಡುಕ: ಫೋರ್ಡ್‌ನ ಈ ಕಾರಿಗೆ ಟೊಯೊಟಾ ಹೆದರುತ್ತಿರುವುದೇಕೆ?
ಭಾರತೀಯ ಮಾರುಕಟ್ಟೆಯ ಫುಲ್ ಸೈಕ್ ಎಸ್‌ಯುವಿ ಸೆಗ್ಮೆಂಟ್‌ನಲ್ಲಿ ಕಳೆದ ಒಂದಷ್ಟು ವರ್ಷಗಳಿಂದ ವೀರಾಜಮಾನವಾಗಿ ಮೆರೆಯುತ್ತಿದೆ. ಈ ಸೆಗ್ಮೆಂಟ್‌ನಲ್ಲಿ ಟೊಯೋಟಾ ಫಾರ್ಚ್ಯೂನರ್ ತನಗೆ ಬೇರೆ ಯಾವುದೇ ಎದುರಾಳಿಗಳಿಲ್ಲದೇ ತನ್ನ ಜೈತ್ರ ಯಾತ್ರೆಯನ್ನು ಮುಂದುವರೆಯುತ್ತಿರುವ ಸಂಧರ್ಭದಲ್ಲಿ ಆ ಸುದ್ದಿಯೊಂದು ಶಾಕ್ ನೀಡಿದೆ. ಹೌದು, ಈಗಾಗಲೇ ಫೋರ್ಡ್ ಭಾರತಕ್ಕೆ ಮರಳಲಿದ್ದು ತನ್ನ ಐಕಾನಿಕ್ ಫುಲ್‌ಸೈಜ್ ಎಸ್‌ಯುವಿ ಎಂಡೀವರ್ ಅನ್ನು ಎವರೆಸ್ಟ್ ಎಂದು ಮರು ನಾಮಕರಣ ಮಾಡಿ ಭಾರತೀಯ ಮಾರುಕಟ್ಟೆಗೆ ಲಾಂಚ್ ಮಾಡಲಿದೆ. ಹಾಗಾದರೆ ಎಂಡೀವರ್‌ಗೆ ಫಾರ್ಚ್ಯೂನರ್ ಇಷ್ಟೊಂದಯ ಹೆದರಲು ಕಾರಣವೇನೆಂದು ನೋಡೋಣ.
ಅಮೆರಿಕದ ದೈತ ಫೋರ್ಡ್ ಕಂಪನಿಯು ಹಲವು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಕಾರ್ಯಚರಣೆ ನಡೆಸುತ್ತಿರುವ ಜನಪ್ರಿಯ ಕಾರು ತಯಾರಕ ಕಂಪನಿಯಾಗಿದೆ. ಆದರೆ ಫೋರ್ಡ್ ಕಂಪನಿಯು ನಷ್ಟದಿಂದ ಭಾರತದಲ್ಲಿ ಉತ್ಪಾದನೆ ಮತ್ತು ಮಾರಾಟ ನಿಲ್ಲಿಸಿದ್ದರು ಎಂಬುದು ಎಲ್ಲರಿಗೂ ತಿಳಿದಿರುವ ನಗ್ನ ಸತ್ಯ.

ಆದರೆ ಕಳೆದ ಕೆಲವು ತಿಂಗಳುಗಳಲ್ಲಿ, ಭಾರತೀಯ ಮಾರುಕಟ್ಟೆಗೆ ಫೋರ್ಡ್ ರಿ-ಎಂಟ್ರಿ ಬಗ್ಗೆ ವದಂತಿಗಳು ಹರಡಿವೆ. ಫೋರ್ಡ್ ಕಂಪನಿಯು ತನ್ನ ಫೋರ್ಡ್ ಎಂಡೀವರ್ ಎಸ್‌ಯುವಿಯನ್ನು ಮುಂದಿನ ವರ್ಷ ಬಿಡುಗಡೆಗೊಳಿಸುವ ಸಾಧ್ಯತೆಗಳಿದೆ. ಜಾಗತಿಕವಾಗಿ ಫೋರ್ಡ್ ಎವರೆಸ್ಟ್ ಎಂದು ಕರೆಯಲ್ಪಡುವ ವಾಹನವನ್ನು ಇತ್ತೀಚೆಗೆ ಚೆನ್ನೈನಲ್ಲಿ ಕಾಣಿಸಿಕೊಂಡಿದೆ. ಹೊಸ ಎಂಡೀವರ್ ಮತ್ತು ಮಿಡ್ ಗಾತ್ರದ ಎಸ್‍ಯುವಿಯಂತಹ ಮಾದರಿಗಳಿಗೆ ಇತ್ತೀಚಿನ ಪೇಟೆಂಟ್ಗಳು ಊಹಾಪೋಹವನ್ನು ಹೆಚ್ಚಿಸಿದೆ.
ಹೊಸ ಫೋರ್ಡ್ ಎವರೆಸ್ಟ್ (Ford Everest ) f ಅನ್ನು (ಭಾರತದಲ್ಲಿ ಫೋರ್ಡ್ ಎಂಡೀವರ್ ಎಂದು ಕರೆಯಲಾಗುತ್ತದೆ) ಚೆನ್ನೈನಲ್ಲಿ ಟವ್ ಟ್ರಕ್‌ನಲ್ಲಿ ಸಾಗಿಸುವ ದೃಶ್ಯವೊಂದು ಭಾರೀ ವೈರಲ್ ಆಗಿದೆ. ಥೈಲ್ಯಾಂಡ್‌ನಲ್ಲಿ ಈಗಾಗಲೇ ಲಭ್ಯವಿರುವ ಎವರೆಸ್ಟ್ ಮಾದರಿಯಾಗಿದೆ. ವರದಿಗಳ ಪ್ರಕಾರ, ಫೋರ್ಡ್ ಎಂಡೀವರ್ (Ford Endeavour) ಕಂಪನಿಯ ಚೆನ್ನೈ ಸ್ಥಾವರದಲ್ಲಿ ಜೋಡಿಸಲಾದ ಕಂಪ್ಲೀಟ್ಲಿ ಬಿಲ್ಟ್ ಅಪ್ (CBU) ಯುನಿಟ್ ಆಗಿ ಭಾರತಕ್ಕೆ ಮರಳಬಹುದು.

ಈ ತಂತ್ರವು ಅದರ ಹಿಂದಿನದಕ್ಕೆ ಹೋಲಿಸಿದರೆ ಹೆಚ್ಚಿನ ಬೆಲೆಗೆ ಕಾರಣವಾಗಬಹುದು. ಫೋರ್ಡ್‌ನ ಇಂಡಿಯಾ ರಿಟರ್ನ್ ಮತ್ತು ಉತ್ಪನ್ನದ ಕಾರ್ಯತಂತ್ರದ ಬಗ್ಗೆ ಯಾವುದೇ ಅಧಿಕೃತ ಮಾಹಿತಿಗಳು ಬಂದಿಲ್ಲ. ಹೊಸ ಫೋರ್ಡ್ ಎಂಡೀವರ್ ಲ್ಯಾಡರ್-ಫ್ರೇಮ್ ಆರ್ಕಿಟೆಕ್ಚರ್ ಮತ್ತು ಅದರ ಪೂರ್ವವರ್ತಿಯಿಂದ ಕೆಲವು ವಿನ್ಯಾಸ ಅಂಶಗಳನ್ನು ಉಳಿಸಿಕೊಂಡಿದೆ, ಇದು ರೇಂಜರ್‌ನೊಂದಿಗೆ ಕೆಲವು ಸ್ಟೈಲಿಂಗ್ ಸೂಚನೆಗಳನ್ನು ಹಂಚಿಕೊಳ್ಳಲಾಗಿದೆ.
ಇನ್ನು ಗಮನಾರ್ಹ ವೈಶಿಷ್ಟ್ಯಗಳೆಂದರೆ ಇಂಟಿಗ್ರೇಟೆಡ್ ಸಿ-ಆಕಾರದ DRLಗಳೊಂದಿಗೆ ಮ್ಯಾಟ್ರಿಕ್ಸ್ LED ಹೆಡ್‌ಲ್ಯಾಂಪ್‌ಗಳು, ಪರಿಷ್ಕೃತ ಮುಂಭಾಗ ಮತ್ತು ಹಿಂಭಾಗದ ಬಂಪರ್‌ಗಳು, ವಿಸ್ತರಿಸಿದ ಮುಂಭಾಗದ ಗ್ರಿಲ್, 21-ಇಂಚಿನ ಅಲಾಯ್ ವ್ಹೀಲ್ ಗಳು, L- ಆಕಾರದ ಟೈಲ್‌ಲ್ಯಾಂಪ್‌ಗಳು ಮತ್ತು ಮರುವಿನ್ಯಾಸಗೊಳಿಸಲಾದ ಟೈಲ್‌ಗೇಟ್ ಅನ್ನು ಹೊಂದಿದೆ.
ಅಂತರಾಷ್ಟ್ರೀಯವಾಗಿ, ಹೊಸ ಫೋರ್ಡ್ ಎವರೆಸ್ಟ್ (ಎಂಡೀವರ್) ಎಸ್‍ಯುವಿಯಲ್ಲಿ 2.0 ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 170 bhp ಪವರ್ ಮತ್ತು 405 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.
ಇನ್ನು ಹೆಚ್ಚುವರಿಯಾಗಿ, 2.0-ಲೀಟರ್ ಬೈ-ಟರ್ಬೊ ಡೀಸೆಲ್ ಎಂಜಿನ್ ಅನ್ನು ನೀಡಲಾಗಿದೆ. ಈ ಎಂಜಿನ್ 210 bhp ಮತ್ತು 500 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 10-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ. ಈ ಎಸ್‍ಯುವಿಯು ಆರು ಡ್ರೈವ್ ಮೋಡ್‌ಗಳನ್ನು ನೀಡುತ್ತದೆ ಮತ್ತು 4X2 ಮತ್ತು 4X4 ಡ್ರೈವ್‌ಟ್ರೇನ್ ಕಾನ್ಫಿಗರೇಶನ್‌ಗಳಲ್ಲಿ ಲಭ್ಯವಿದೆ.


Click it and Unblock the Notifications








