2ರ ಸಂಭ್ರಮದಲ್ಲಿರುವ ಪೊಲರಿಸ್‌ನಿಂದ ರೇಂಜರ್ ಲಾಂಚ್
ಭಾರತದಲ್ಲಿ ಎರಡು ವಸಂತಗಳನ್ನು ಪೂರ್ಣಗೊಳಿಸಿರುವ ಪೊಲರಿಸ್ ವೆಹಿಕಲ್ಸ್ ಇಂಡಿಯಾ, ನೂತನ ರೇಂಜರ್ ಆರ್‌ಝಡ್‌ಆರ್ ಎಕ್ಸ್‌ಪಿ 900 ಆಲ್ ಟರೈನ್ ವಾಹನವನ್ನು ಲಾಂಚ್ ಮಾಡಿದೆ.
ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ನೂತನ ಪೊಲರಿಸ್ ಆಫ್ ರೋಡ್ ವಾಹನ ಲಾಂಚ್ ಮಾಡಲಾಗಿದೆ. ಇದು ದೇಶದ ಪೊಲರಿಸ್ ವಾಹನಕ್ಕೆ ಇನ್ನಷ್ಟು ಪ್ರತಿಷ್ಠೆ ತುಂಬುವಂತಾಗಿದೆ.

ಎಂಜಿನ್
ನೂತನ ಪೊಲರಿಸ್ ರೇಂಜರ್ RZR XP 900 ಆಲ್ ಟರೈನ್ ವೆಹಿಕಲ್ , ಪ್ರೊಸ್ಟಾರ್ 900 ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 88 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ.

ಎರಡು ಸೀಟು
ಎರಡು ಸೀಟಿನ ಈ ಪೊಲರಿಸ್ ವಾಹನದ ಒಟ್ಟು ಭಾರ 540 ಕೆ.ಜಿ ಆಗಿದೆ. ಇದರಲ್ಲಿ 136 ಕೆ.ಜಿ ಸಾಮರ್ಥ್ಯದ ಕಾರ್ಗೊ ಸ್ಪೇಸ್ ಇದೆ.

ಒಪ್ಟಿಮೈಸ್ಡ್ ಮಾಸ್ ಡಿಸೈನ್
ಪೊಲರಿಸ್ ರೇಂಜರ್ RZR XP 900, ಒಪ್ಟಿಮೈಸ್ಡ್ ಮಾಸ್ ಡಿಸೈನ್ ಹೊಂದಿದ ವಾಹನವಾಗಿದೆ. ಇದು ಆಲ್ ವೀಲ್ ಡ್ರೈವ್ ಆಯ್ಕೆಯನ್ನು ಹೊಂದಿದೆ.

ದರ ಮಾಹಿತಿ
ನೂತನ ಪೊಲರಿಸ್ RZR XP 900 ಎಕ್ಸ್ ಶೋ ರೂಂ ದರ 24.5 ಲಕ್ಷ ರು.ಗಳಾಗಿವೆ. ಇದು ದೇಶದಲ್ಲಿ ಹರಡಿರುವ 14 ಶೋ ರೂಂಗಳಲ್ಲಿ ಲಭ್ಯವಿರುತ್ತದೆ.

ಪೊಲರಿಸ್ ವೆಹಿಕಲ್
ಮುಂದಿನ ದಿನಗಳಲ್ಲಿ ಇನ್ನಷ್ಟು ಆಫ್ ರೋಡ್ ವಾಹನಗಳನ್ನು ದೇಶಕ್ಕೆ ಪರಿಚಯಿಸುವ ಯೋಜನೆಯನ್ನು ಪೊಲರಿಸ್ ಹೊಂದಿದೆ.


Click it and Unblock the Notifications








