ಗ್ರಾಹಕರ ಬಳಿ ತಲುಪಿದ ಚೊಚ್ಚಲ ಈಚರ್-ಪೊಲರಿಸ್ 'ಮಲ್ಟಿಕ್ಸ್' ವಾಹನ

By Nagaraja

ಎರಡು ತಿಂಗಳ ಹಿಂದೆ ಈಚರ್-ಪೊಲರಿಸ್ ಸಹಯೋಗದಲ್ಲಿ ಬಿಡುಗಡೆಗೊಂಡಿದ್ದ ಚೊಚ್ಚಲ 'ಮಲ್ಟಿಕ್ಸ್' ವೈಯಕ್ತಿಕ ಯುಟಿಲಿಟಿ ವಾಹನವನ್ನು ಮೊದಲ ಗ್ರಾಹಕರಿಗೆ ಹಸ್ತಾಂತರಿಸಲಾಗಿದೆ. ಗಣೇಶ್ ನಾರಾಯಣ್ ಚೌಧುರಿ ಎಂಬವರಿಗೆ ಈ ಅದೃಷ್ಟ ಒಲಿದು ಬಂದಿದೆ.

ಈಚರ್ ಮೋಟಾರ್ಸ್ ಮತ್ತು ಪೊಲರಿಸ್ ಇಂಡಿಯಾ (50:50) ಜಂಟಿಯಾಗಿ ಮಲ್ಟಿಕ್ಸ್ ವಾಹನವನ್ನು ಜೈಪುರದಲ್ಲಿರುವ ಘಟಕದಲ್ಲಿ ನಿರ್ಮಿಸುತ್ತಿದೆ. ಅಂದ ಹಾಗೆ ಮಲ್ಟಿಕ್ಸ್ ಮೂರು ವಿಧದ ಕ್ರಿಯಾತ್ಮಕತೆಗಳನ್ನು ಹೊಂದಿರಲಿದೆ. ಅವುಗಳೆಂದರೆ,

  • ಪ್ರಯಾಣಿಕ ವಾಹಕ,
  • ಸರಕು ಸಾಗಾಣಿಕೆ ಮತ್ತು
  • ಪವರ್ ಜನರೇಟರ್.
ಮಲ್ಟಿಕ್ಸ್
ಎರಡು ವೆರಿಯಂಟ್ ಗಳಲ್ಲಿ ಲಭ್ಯವಿರುವ ಮಲ್ಟಿಕ್ಸ್ ವೈಯಕ್ತಿಕ ಬಳಕೆಯ ವಾಹನವು 2.32 ಲಕ್ಷ ರು.ಗಳಿಂದ 2.7 ಲಕ್ಷ ರು.ಗಳಷ್ಟು (ಎಕ್ಸ್ ಶೋ ರೂಂ ಜೈಪುರ) ದುಬಾರಿಯೆನಿಸುತ್ತದೆ. ಐದು ಮಂದಿಗೆ ಆರಾಮದಾಯಕವಾಗಿ ಪಯಣಿಸಬಹುದಾಗ ಮಲ್ಟಿಕ್ಸ್ ವಾಹನದಲ್ಲಿ 1918 ಲೀಟರ್ ಡಿಕ್ಕಿ ಜಾಗವಿರುತ್ತದೆ. 3 ಕೆಡಬ್ಲ್ಯು ವಿದ್ಯುತ್ ಪ್ರತ್ಯುತ್ಪಾದನೆ ಮಾಡಬಲ್ಲ ಈ ವಾಹನದಿಂದ ಮನೆಯ ಅಗತ್ಯಗಳಿಗೆ ಬೆಳಕಿನ ಸೇವೆಯನ್ನು ಪಡೆಯಬಹುದಾಗಿದೆ.

510 ಸಿಸಿ ಎಂಜಿನ್ ಸಾಮರ್ಥ್ಯದ ಈ ಡೀಸೆಲ್ ವಾಹನವನ್ನು ಅಂಬುಲೆನ್ಸ್ ರೀತಿಯಲ್ಲೂ ಬಳಕೆ ಮಾಡಬಹುದಾಗಿದೆ. ಪ್ರಸ್ತುತ ವಾಹನವು ದೇಶದ 5.8 ಕೋಟಿ ವೈಯಕ್ತಿಕ ಉದ್ಯಮಿಗಳನ್ನು ಗುರಿ ಮಾಡುತ್ತಿರುವುದಾಗಿ ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ. ಇದರಂತೆ ಘಟಕ ನಿರ್ಮಾಣ ಹಾಗೂ ಉತ್ಪನ್ನ ಅಭಿವೃದ್ಧಿಗಾಗಿ ಈಚರ್ ಮೋಟಾರ್ಸ್ ಹಾಗೂ ಪೊಲರಿಸ್ ಬರೋಬ್ಬರಿ 350 ಕೋಟಿ ರು. ಹೂಡಿಕೆ ಮಾಡಿದ್ದು, ವಾರ್ಷಿಕವಾಗಿ 1.20 ಲಕ್ಷ ಯುನಿಟ್ ಗಳ ನಿರ್ಮಾಣ ಸಾಮರ್ಥ್ಯವನ್ನು ಗುರಿಯಿರಿಸಿದೆ. ಮಲ್ಟಿಕ್ಸ್ ಪ್ರಮುಖವಾಗಿಯೂ ಮಹೀಂದ್ರ ಮ್ಯಾಕ್ಸಿಮೊಗೆ ಪೈಪೋಟಿ ಒಡ್ಡಲಿದೆ.

Most Read Articles

Kannada
English summary
First Multix Personal Utility Vehicle Handed Over To Customer
Story first published: Saturday, August 29, 2015, 16:22 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X