ಭೂಲೋಕದ ಅರಮನೆಯಂತಿರುವ ದೈತ್ಯ MG M9 ಕಾರು ಖರೀದಿಸಿದ ಜನಪ್ರಿಯ ಉದ್ಯಮಿ: ಯಾರು?

ಕಾರುಗಳ ಮೇಲಿನ ಉತ್ಸಾಹ ಮತ್ತು ಪ್ರಾಯೋಗಿಕ ಐಷಾರಾಮಿ ಆದ್ಯತೆಗೆ ಹೆಸರುವಾಸಿಯಾದ ಉದ್ಯಮಿ ಮತ್ತು ಹೂಡಿಕೆದಾರ ಅಶ್ನೀರ್ ಗ್ರೋವರ್, MG M9 - ಪ್ರೆಸಿಡೆನ್ಶಿಯಲ್ ಲಿಮೋಸಿನ್ ಎಂಬ ದೈತ್ಯ ಕಾರನ್ನು ಖರೀದಿಸಿ ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ. ಸೌಕರ್ಯಯುತವಾದ ದೂರದ ಕುಟುಂಬ ಪ್ರಯಾಣಕ್ಕಾಗಿ ವಿನ್ಯಾಸಗೊಳಿಸಲಾದ MG M9, ಐಷಾರಾಮಿ ದೈನಂದಿನ ಬಳಕೆಗೂ ಬಳಸಬಹುದಾಗಿದೆ. ರಸ್ತೆಯಲ್ಲಿ ರಾಜಿಯಾಗದ ಅತ್ಯಾಧುನಿಕ ಹಾಗೂ ಐಷಾರಾಮಿಯನ್ನು ಬಯಸುವ ಭಾರತದ ಉನ್ನತ ವ್ಯಕ್ತಿಗಳಲ್ಲಿ ಈ ವಾಹನಕ್ಕೆ ಹೆಚ್ಚುತ್ತಿರುವ ಆಕರ್ಷಣೆಯನ್ನು ಇದು ಒತ್ತಿಹೇಳುತ್ತದೆ.

ಅಶ್ನೀರ್ ಗ್ರೋವರ್ ಪ್ರಮುಖ ಭಾರತೀಯ ಉದ್ಯಮಿಯಾಗಿದ್ದು, ವ್ಯಾಪಾರಿಗಳಿಗೆ ಡಿಜಿಟಲ್ ಪಾವತಿಗಳನ್ನು ಸುಗಮಗೊಳಿಸುವ ಫಿನ್‌ಟೆಕ್ ಕಂಪನಿಯಾದ ಭಾರತ್‌ಪೇಯ ಸಹ-ಸಂಸ್ಥಾಪಕ ಮತ್ತು ಮಾಜಿ ವ್ಯವಸ್ಥಾಪಕ ನಿರ್ದೇಶಕ ಎಂದು ಪ್ರಸಿದ್ಧರಾಗಿದ್ದಾರೆ. ಇವರು ರಿಯಾಲಿಟಿ ಟಿವಿ ಶೋ 'ಶಾರ್ಕ್ ಟ್ಯಾಂಕ್ ಇಂಡಿಯಾ'ದಲ್ಲಿ ಹೂಡಿಕೆದಾರರಾಗಿಯೂ ಖ್ಯಾತಿಯನ್ನು ಗಳಿಸಿದ್ದಾರೆ.

entrepreneur-ashneer-grover-bought-mg-m9-presidential-limousine

MG M9 ಲಿಮೋಸಿನ್ ವಿಶೇಷತೆಗಳು

MG M9 ಸೌಕರ್ಯ, ಸುಧಾರಿತ ತಂತ್ರಜ್ಞಾನ ಮತ್ತು ಐಷಾರಾಮಿ ವಿನ್ಯಾಸಕ್ಕೆ ಆದ್ಯತೆ ನೀಡುವ ವಿವೇಚನಾಶೀಲ ಗ್ರಾಹಕರಿಗಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಎಂಜಿ ಹೇಳಿದೆ. ಇದರೊಳಗೆ ನೀಡಲಾದ ಕ್ಯಾಪ್ಟನ್ ಸೀಟ್‌ಗಳು, 16-ವೇ ಎಲೆಕ್ಟ್ರಿಕಲ್ಲಿ ಅಡ್ಜಸ್ಟಬಲ್, ಎಂಟು ಮಸಾಜ್ ಮೋಡ್‌ಗಳು, ಹೀಟ್ ಮತ್ತು ವೆಂಟಿಲೇಷನ್ ನೀಡುತ್ತವೆ. ಇದು ವಿಹಾರ ನೌಕೆ-ಶೈಲಿಯ ಡ್ಯುಯಲ್ ಸನ್‌ರೂಫ್ ಹೊಂದಿದೆ, ಕ್ಯಾಬಿನ್ ಅನ್ನು ಪ್ರಶಾಂತ ಲೌಂಜ್ ಆಗಿ ಪರಿವರ್ತಿಸುತ್ತದೆ.

ಇದರೊಂದಿಗೆ ಹಿಂಭಾಗದ ಸಾಲಿನಲ್ಲಿ ಪ್ರತಿ ಸೀಟ್‌ 5.2-ಇಂಚಿರುವ ಟಚ್ ಕಂಟ್ರೋಲ್ ಪ್ಯಾನಲ್, ಕಪ್ ಹೋಲ್ಡರ್‌ಗಳು, ಯುಎಸ್‌ಬಿ ಟೈಪ್-ಎ & ಟೈಪ್-ಸಿ ಚಾರ್ಜಿಂಗ್ ಆಯ್ಕೆಯನ್ನು ಪಡೆದಿದೆ. ಡುಯಲ್ - ಝೋನ್ ಕ್ಲೇಮೇಟ್ ಕಂಟ್ರೋಲ್, ಸನ್‌ರೂಫ್, ಪ್ರೀಮಿಯಂ ಜೆಬಿಎಲ್ ಸೌಂಡ್ ಸಿಸ್ಟಮ್ ಮತ್ತು 64 ಕಲರ್ ಆಂಬಿಯೆಂಟ್ ಲೈಟಿಂಗ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

entrepreneur-ashneer-grover-bought-mg-m9-presidential-limousine

ಇವಿಷ್ಟೆ ಅಲ್ಲದೆ ಕಾಗ್ನ್ಯಾಕ್ ಬ್ರೌನ್ ಲೆದರ್ ಅಪ್ಹೋಲ್ಸ್ಟರಿ, ಆರ್ಮ್‌ರೆಸ್ಟ್ ಕಂಟ್ರೋಲ್‌ಗಳು ಪ್ರತಿ ಪ್ರಯಾಣವನ್ನು ಆರಾಮದಾಯಕವಾಗಿಸುತ್ತದೆ. ಇನ್ನು ಮೂರನೇ ಸಾಲಿನಲ್ಲಿರುವ ಸೀಟ್‌ಗಳಲ್ಲಿ ಇಬ್ಬರು ಪ್ಯಾಸೆಂಜರ್‌ಗಳಿಗಾಗಿ ಅಡ್ಜೆಸ್ಟೇಬಲ್ ಹೆಡ್‌ರೆಸ್ಟ್‌ಗಳನ್ನು ನೀಡಲಾಗಿದೆ. ಜೊತೆಗೆ ಸ್ಟೋರೇಜ್ ಹಾಗೂ ಚಾರ್ಜಿಂಗ್ ಪಾಯಿಂಟ್‌ಗಳನ್ನು ಒದಗಿಸಲಾಗಿದ್ದು, ಅದರ ಹೊರತಾಗಿ ರೇರ್ ಕ್ವಾರ್ಟರ್ ವಿಂಡೋಗಳಿಗೆ ಸನ್‌ಶೇಡ್‌ಗಳು ನೀಡಿಲ್ಲ.

ಇದೇ ಮೂರನೇ ಸಾಲಿನ ಸೀಟ್‌ಗಳನ್ನು ಮಡಚಿದರೆ ಬೂಟ್ ಸ್ಪೇಸ್‌ನ್ನು 1,700 ಲೀಟರ್‌ಗೆ ವಿಸ್ತರಿಸಬಹುದು. ಪ್ರಯಾಣಿಕರಿಗೆ ವಿಮಾನದಲ್ಲಿ ಪ್ರಯಾಣಿಸುವಂತಹ ಅನುಭವ ನೀಡುವ ಈ ಕಾರು, ಪ್ರಯಾಣಿಕರಿಗೆ ಸೌಕರ್ಯದಲ್ಲಿ ಯಾವುದೆ ರಾಜಿ ಮಾಡಿಕೊಂಡಿಲ್ಲ. ಪ್ರಶಾಂತವಾದ ಹಾಗೂ ಐಷಾರಾಮಿ ಫೀಚರ್ಸ್ ಮತ್ತೊಮ್ಮೆ ಈ ಕಾರಿನಲ್ಲಿ ಪ್ರಯಾಣಿಸಬೇಕಿಸುತ್ತವೆ ಎಂದು ಎಂಜಿ ಮೋಟಾರ್ ಹೇಳಿಕೊಂಡಿದೆ.

entrepreneur-ashneer-grover-bought-mg-m9-presidential-limousine

ಕ್ಯಾಬಿನ್ ಒಳಗೆ ಅದ್ಭುತ ಅನುಭವ ನೀಡುವ MG M9, ಸಬ್ ವೂಫರ್ ಮತ್ತು ಆಂಪ್ಲಿಫೈಯರ್ ಜೊತೆಗೆ 13-ಸ್ಪೀಕರ್ ಪ್ರೀಮಿಯಂ ಸೌಂಡ್ ಸಿಸ್ಟಮ್ ಅನ್ನು ಹೊಂದಿದೆ. ಪರ್ಲ್ ಲಸ್ಟರ್ ವೈಟ್, ಮೆಟಲ್ ಬ್ಲ್ಯಾಕ್ ಮತ್ತು ಕಾಂಕ್ರೀಟ್ ಗ್ರೇ ಬಣ್ಣಗಳಲ್ಲಿ ಲಭ್ಯವಿದೆ, ಇದು ದಪ್ಪ ಟ್ರೆಪೆಜಾಯಿಡಲ್ ಗ್ರಿಲ್, ಸ್ಪ್ಲಿಟ್ LED ಹೆಡ್‌ಲ್ಯಾಂಪ್‌ಗಳು, ಫಾಲ್-ಶೈಲಿಯ LED ಟೈಲ್‌ಲ್ಯಾಂಪ್‌ಗಳು ಮತ್ತು 19-ಇಂಚಿನ ಕಾಂಟಿಸೀಲ್ ಟೈರ್‌ಗಳೊಂದಿಗೆ ಗಮನ ಸೆಳೆಯುತ್ತದೆ.

ಸುರಕ್ಷತೆಯನ್ನು ಮೂಲಾಧಾರವಾಗಿ ವಿನ್ಯಾಸಗೊಳಿಸಲಾದ MG M9 ಅಲ್ಟ್ರಾ- ಹೈ -ಸ್ಟ್ರೆಂತ್ ಸ್ಟೀಲ್‌ನೊಂದಿಗೆ ನಿರ್ಮಾಣಗೊಂಡಿದೆ. 7 ಏರ್‌ಬ್ಯಾಗ್‌ಗಳು, ಲೆವೆಲ್ 2 ADAS, ಜೊತೆಗೆ 5 - ಸ್ಟಾರ್ EURO NCAP ಮತ್ತು ANCAP ಸುರಕ್ಷತಾ ರೇಟಿಂಗ್‌ಗಳನ್ನು ಪಡೆದುಕೊಂಡಿದೆ. ಇದು ಈಗ 14 ಪ್ರಮುಖ ನಗರಗಳಾದ್ಯಂತ 15 ಎಂಜಿ ಸೆಲೆಕ್ಟ್ ಅನುಭವ ಕೇಂದ್ರಗಳಲ್ಲಿ ಬುಕಿಂಗ್‌ಗಳಿಗೆ ಲಭ್ಯವಿದೆ ಎಂದು ಕಂಪನಿ ತಿಳಿಸಿದೆ.

ಬೆಲೆ: MG M9 ಪ್ರೆಸಿಡೆನ್ಶಿಯಲ್ ಲಿಮೋಸಿನ್, MG M9 ಶ್ರೇಣಿಯಲ್ಲಿನ ಟಾಪ್ ಮಾಡೆಲ್ ಆಗಿದ್ದು, ಬೆಂಗಳೂರಿನಲ್ಲಿ M9 ಟಾಪ್ ಮಾಡೆಲ್‌ನ ಆನ್‌-ರೋಡ್ ಬೆಲೆ ರೂ. 83.04 ಲಕ್ಷವಿದೆ. ಇದು 7 ಆಸನಗಳನ್ನು ಹೊಂದಿದ್ದು, ವಾರಾಂತ್ಯ ಹಾಗೂ ರಜಾದಿನಗಳಲ್ಲಿ ಪ್ರವಾಸಕ್ಕೆ ಹೋಗುವ ಸಂದರ್ಭದಲ್ಲಿ ಹೆಚ್ಚಿನ ಲಗೇಜ್ ಸಾಗಿಸಲು ಸಾಧ್ಯವಾಗುವಂತೆ 465 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್‌ನ್ನು ಒಳಗೊಂಡಿದೆ.

More from DriveSpark

Article Published On: Thursday, February 26, 2026, 17:19 [IST]
English summary
Entrepreneur ashneer grover bought mg m9 presidential limousine
Read more on mg motor india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+