ನಿಕಟ ಭವಿಷ್ಯದಲ್ಲಿ ಆಲ್ಫಾ ರೊಮಿಯೊ ಎಸ್‌ಯುವಿ ಆಗಮನ

Written By:

ನಿಕಟ ಭವಿಷ್ಯದಲ್ಲಿ ಆಲ್ಫಾ ರೊಮಿಯೊ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ (ಎಸ್‌ಯುವಿ) ಆಗಮನವಾಗಲಿದೆ. ಇದನ್ನು ಆಲ್ಫಾ ರೊಮಿಯೊ ಖಚಿತಪಡಿಸಿದ್ದು, ಮುಂದಿನ ಒಂದೆರಡು ವರ್ಷದೊಳಗೆ ಎಸ್‌ಯುವಿ ಪ್ರವೇಶ ಪಡೆಯಲಿದೆ ಎಂದಿದೆ.

ಇಲ್ಲಿ ಪ್ರಮುಖ ವಿಚಾರ ಏನೆಂದರೆ ಫಿಯೆಟ್ ಜೀಪ್ ಬ್ರಾಂಡ್‌ನಲ್ಲಿರುವ ಅದೇ ತಂತ್ರಜ್ಞಾನ ನೂತನ ಎಸ್‌ಯುವಿ ಕಾರಿನಲ್ಲೂ ಬಳಕೆ ಮಾಡಲಾಗುವುದು. ವರ್ಷಾರಂಭದ ನ್ಯೂಯಾರ್ಕ್ ಮೋಟಾರ್ ಶೋದಲ್ಲಿ ಪ್ರದರ್ಶನಗೊಂಡಿದ್ದ ಜೀಪ್ ಕೆರೊಕೆ ಫ್ಲಾಟ್ ಫಾರ್ಮ್‌ನಲ್ಲಿ ಆಲ್ಫಾ ರೊಮಿಯೊ ಎಸ್‌ಯುವಿ ನಿರ್ಮಾಣವಾಗಲಿದೆ.

ಈ ನಡುವೆ ಜಿನೆವಾ ಮೋಟಾರ್ ಶೋದಲ್ಲಿ ಆಲ್ಫಾ ಎಸ್‌ಯುವಿ ಮುಂಚಿತವಾಗಿ ನೂತು ಆಲ್ಫಾ ರೊಮಿಯೊ 4ಸಿ ಸ್ಪೋರ್ಟ್ಸ್ ಕಾರು ಅನಾವರಣಗೊಂಡಿದೆ. ಪ್ರಸ್ತುತ ಕಾರು ವರ್ಷಾಂತ್ಯದಲ್ಲಿ ಬ್ರಿಟನ್‌ನಲ್ಲಿ ಲಾಂಚ್ ಆಗಲಿದೆ ಎಂದು ಕಂಪನಿ ಸ್ಪಷ್ಟಪಡಿಸಿದೆ.

Alfa Romeo Kamal Concept
Alfa Romeo Kamal Concept
Alfa Romeo Kamal Concept
Alfa Romeo Kamal Concept
Alfa Romeo Kamal Concept
English summary
Alfa Romeo will in the near future come out with a Sports Utility Vehicle. This news has been confirmed by Alfa Romeo UK boss, Damien Dally. In an interview given to The Telegraph, Mar. Dally said, "There will certainly be an SUV in the next two or three years.
Story first published: Wednesday, May 8, 2013, 17:05 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark