ಮುಂದುವರಿದ ಅಮೇಜ್ ಬೇಟೆ; ಹೋಂಡಾ ಮಾರಾಟ ವೃದ್ಧಿ

Amaze Shines Honda sales growth in June 2013
ದೇಶದ ಪ್ರಮುಖ ವಾಹನ ಉತ್ಪನ್ನ ಸಂಸ್ಥೆಗಳು ಕುಸಿತದ ಹಂತದಲ್ಲಿರುವ ಈ ಕ್ಲಿಷ್ಟಕರ ಹಂತದಲ್ಲಿಯೂ ಅಮೋಘ ಮಾರಾಟ ವೃದ್ಧಿ ಸಾಧಿಸಿರುವ ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್ (ಎಚ್‌ಸಿಎಲ್‌ಐ), ಅಮೇಜ್ ನೆರವಿನಿಂದ ಜುಲೈ ತಿಂಗಳ ಮಾರಾಟದಲ್ಲಿ ಭರ್ಜರಿ ಏರಿಕೆ ದಾಖಲಿಸಿದೆ.

ಜುಲೈ ತಿಂಗಳಲ್ಲಿ 9,297 ಯುನಿಟ್ ಮಾರಾಟ ಸಾಧಿಸಿರುವ ಹೋಂಡಾ ಕಾರ್ಸ್, ಶೇಕಡಾ 248ರಷ್ಟು ಏರಿಕೆ ದಾಖಲಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಕೇವಲ 2,667 ಯುನಿಟ್ ಮಾತ್ರ ಸೇಲಾಗಿತ್ತು.

ಈ ಪೈಕಿ ಗ್ರಾಹಕರ ನೆಚ್ಚಿನ ಕಾರು ಎನಿಸಿಕೊಂಡಿರುವ ಹೋಂಡಾ ಅಮೇಜ್ 4,965 ಯುನಿಟ್ ಮಾರಾಟ ದಾಖಲಿಸಿದೆ. ಅಂದರೆ ಒಟ್ಟು ಮಾರಾಟದ ಅರ್ಧದಷ್ಟು ಪಾಲನ್ನು ಅಮೇಜ್ ನಿಭಾಯಿಸಿಕೊಂಡಿದೆ. ಉಳಿದಂತೆ ಬ್ರಿಯೊ ಹ್ಯಾಚ್‌ಬ್ಯಾಕ್ 2,375, ಸಿಟಿ 1,830, ಅಕಾರ್ಡ್ 27 ಹಾಗೂ ಸಿಆರ್‌-ವಿ 100 ಯುನಿಟ್ ಸೇಲಾಗಿವೆ.

ಈ ಮೂಲಕ ಕಳೆದ ಮೂರು ತಿಂಗಳ ಅವಧಿಯಲ್ಲಿ ಹೋಂಡಾ 20,076 ಯುನಿಟ್ ಮಾರಾಟ ದಾಖಲಿಸುವಲ್ಲಿ ಯಶಸ್ವಿಯಾಗಿದೆ. ಈ ಅವಧಿಯಲ್ಲಿ ಶೇಕಡಾ 45ರಷ್ಟು ವೃದ್ಧಿ ಸಾಧಿಸಿದೆ.

ಈಗಾಗಲೇ ಅಮೇಜ್ ಖರೀದಿಸಿರುವ 18,000ದಷ್ಟು ನೂತನ ಗ್ರಾಹಕರು ಸಂತೃಪ್ತಿ ವ್ಯಕ್ತಪಡಿಸಿರುವುದಾಗಿ ಕಂಪನಿ ವ್ಯಕ್ತಪಡಿಸಿದೆ. ಮುಂದಿನ ದಿನಗಳಲ್ಲಿ ಸೇಲ್ಸ್ ಮತ್ತಷ್ಟು ಏರಿಕೆ ಸಾಧಿಸುವ ನಿರೀಕ್ಷೆಯಲ್ಲಿದೆ.

More from DriveSpark

Article Published On: Wednesday, July 3, 2013, 14:01 [IST]
English summary
Honda Cars India Limited (HCIL) have reported sales growth to the tune of 248% during the month of June 2013. The company sold a total of 9,297 units during the month as compared to 2,667 units in June 2012.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+