ಬೆಂಝ್ ಹಾದಿ ಹಿಡಿದ ಆಡಿ; ದರ ಏರಿಕೆ ಘೋಷಣೆ

By Nagaraja

ಮರ್ಸಿಡಿಸ್ ಬೆಂಝ್ ಬೆನ್ನಲ್ಲೇ ಜರ್ಮನಿಯ ಮತ್ತೊಂದು ಐಷಾರಾಮಿ ವಾಹನ ತಯಾರಕ ಕಂಪನಿಯಾದ ಆಡಿ, ತನ್ನ ಕೆಲವು ಮಾಡೆಲ್‌ಗಳ ದರವನ್ನು ಏರಿಕೆಗೊಳಿಸಲು ನಿರ್ಧರಿಸಿದೆ.

ಹೊಸ ದರವು ಮಾರ್ಚ್ 16 ಶನಿವಾರದಿಂದ ಜಾರಿಗೆ ಬರಲಿದ್ದು, ಶೇಕಡಾ 15ರಷ್ಟು ಏರಿಕೆ ಮಾಡಲಾಗಿದೆ. ಆಡಿ ಕ್ಯೂ ರೇಂಜ್‌ನ ಎಸ್‌ಯುವಿ ಕಾರುಗಳಿಗೆ ಶೇಕಡಾ 2.5ರಷ್ಟು ದರ ಏರಿಕೆ ಘೋಷಿಸಲಾಗಿದೆ.

ಹಾಗೆಯೇ ಸ್ಪೋರ್ಟಿ ನಿರ್ವಹಣಾ ರೇಂಜ್ ಕಾರುಗಳಾದ ಆಡಿ ಆರ್8 ಹಾಗೂ ಆರ್‌ಎಸ್5 ಮಾದರಿಗಳಿಗೆ ಶೇಕಡಾ 15ರ ವರೆಗೆ ದರ ಏರಿಕೆ ಕಂಡುಬರಲಿದೆ ಎಂದು ಆಡಿ ಇಂಡಿಯಾ ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

ಇತ್ತೀಚೆಗಷ್ಟೇ ಸಂಸತ್‌ನಲ್ಲಿ ಮಂಡಿಸಲಾದ 2013-14ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಅಬಕಾರಿ ಸುಂಕ ಹೆಚ್ಚಳಗೊಳಿಸಿರುವುದು ಐಷಾರಾಮಿ ಕಾರು ತಯಾರಕರನ್ನು ದರ ಏರಿಕೆಗೊಳಿಸುವಂತೆ ಪ್ರೇರೇಪಿಸಿದೆ. ಹಾಗಿದ್ದರೂ ಆಡಿ ಕಾರುಗಳನ್ನು ಖರೀದಿಸಲು ಗ್ರಾಹಕರಿಗೆ ಫೈನಾನ್ಸ್ ಆಫರ್ ಒದಗಿಸಲಾಗುತ್ತಿದೆ ಎಂದು ಕಂಪನಿ ತಿಳಿಸಿದೆ.

ಒಟ್ಟಾರೆಯಾಗಿನ ಮಾರುಕಟ್ಟೆ ಪರಿಸ್ಥಿತಿ ಸವಾಲಿನಿಂದ ಕೂಡಿದ್ದರೂ ಫೆಬ್ರವರಿ ತಿಂಗಳಲ್ಲಿ ಆಡಿ ಮಾರಾಟವು ಶೇಕಡಾ 29ರಷ್ಟು ಪ್ರಗತಿ ಸಾಧಿಸಿದೆ. ಈ ಸಂದರ್ಭದಲ್ಲಿ 775 ಯುನಿಟ್ ಮಾರಾಟವಾಗಿವೆ. ಇನ್ನು ಜಾಗತಿಕವಾಗಿ 110,000 ಯುನಿಟ್ ಸೇಲ್ ಆಗಿವೆ.

ಕಂಪನಿಯು ಈಗಾಗಲೇ ಮುಂಬೈ ಹಾಗೂ ಲಕ್ನೋದಲ್ಲಿ ಹೊಸ ಶೋ ರೂಂ ತೆರೆದುಕೊಂಡಿದೆ. ಕಳೆದ ವರ್ಷ ರಾಯಪುರ, ಕಾನ್ಪುರ, ಗೋವಾ, ಕೊಯಂಬತ್ತೂರು, ದೆಹಲಿ ಪೂರ್ವ, ನಾಗ್ಪುರ ಹಾಗೂ ಭೋಪಾಲದಲ್ಲಿ ಶೋ ರೂಂ ತೆರೆದುಕೊಂಡಿತ್ತು.

More from DriveSpark

Article Published On: Tuesday, March 19, 2013, 13:08 [IST]
English summary
German luxury car manufacturer Audi has announced an increase in prices of some of its models by as much as 15 per cent, with effect from 16th march. While Audi Q range SUVs will be dearer by 2.5 per cent, sporty performance range Audi R8 and Audi RS5 would be costlier by close to 15 per cent, the company said in a statement.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+