ಆಡಿ ಕ್ಯೂ3 ಎಸ್ 24 ನಿಮಿಷಗಳಲ್ಲಿ 24 ಬುಕ್ಕಿಂಗ್ಸ್!

By Nagaraja

ಕಳೆದ ದಿನವಷ್ಟೇ ಭರ್ಜರಿ ಬಿಡುಗಡೆ ಕಂಡಿರುವ ನೂತನ ಆಡಿ ಕ್ಯೂ3 ಎಸ್ ಐಷಾರಾಮಿ ಕಾರು ಕೇವಲ 24 ನಿಮಿಷಗಳಲ್ಲಿ 24 ಬುಕ್ಕಿಂಗ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಅಂತರ್ಜಾಲದಲ್ಲಿ ಆಡಿ ಕ್ಯೂ3 ಎಸ್ ಬುಕ್ಕಿಂಗ್ ತೆರೆದುಕೊಳ್ಳುತ್ತಿರುವಂತೆಯೇ ಭಾರಿ ಬೇಡಿಕೆ ಕಂಡುಬಂದಿದೆ. ಅಷ್ಟೇ ಅಲ್ಲದೆ ಬುಕ್ ಮಾಡಿದ ಮೊದಲ ಹತ್ತು ಗ್ರಾಹಕರಿಗೆ ಆಡಿ ಆಫ್ ರೋಡ್ ಸ್ಟೈಲ್ ಪ್ಯಾಕೇಜ್ ಸಂಪೂರ್ಣ ಉಚಿತವಾಗಿ ಲಭಿಸಲಿದೆ.

ಆಡಿ ಕ್ಯೂ3 ಎಸ್ ಎಂಟ್ರಿ ಲೆವೆಲ್ ಐಷಾರಾಮಿ ಕಾರಿನ ದರ 24.99 ಲಕ್ಷ ರು.ಗಳಾಗಿವೆ. ಇದು ಬೆಂಝ್ ಎ ಹಾಗೂ ಬಿ ಕ್ಲಾಸ್ ಹಾಗೂ ಇನ್ನಷ್ಟೇ ಬಿಡುಗಡೆಯಾಗಲಿರುವ ಬಿಎಂಡಬ್ಲ್ಯು 1 ಸಿರೀಸ್ ಕಾರುಗಳಿಗೆ ಪ್ರತಿಸ್ಪರ್ಧಿ ಎನಿಸಿಕೊಂಡಿದೆ.


2.0 ಲೀಟರ್ ಟಿಡಿಐ ಎಂಜಿನ್‌ನಿಂದ ನಿಯಂತ್ರಿಸಲ್ಪಡುವ ನೂತನ ಆಡಿ ಕ್ಯೂ3 ಎಸ್, ಪ್ರತಿ ಲೀಟರ್‌ಗೆ 17.32 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ.

ನಿಮ್ಮ ಮಾಹಿತಿಗಾಗಿ 2012ರಲ್ಲಿ ಮೊದಲ ಬಾರಿಗೆ ಆಡಿ ಕ್ಯೂ3 ಬಿಡುಗಡೆಯಾದ ಮೊದಲ ಐದು ದಿನಗಳಲ್ಲೇ 500 ಬುಕ್ಕಿಂಗ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಇದೀಗ ಈ ದಾಖಲೆಯನ್ನು ಆಡಿ ಕ್ಯೂ3 ಎಸ್ ಮುರಿಯಲಿದೆಯೇ ಎಂಬುದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ಲಭಿಸಲಿದೆ.

More from DriveSpark

Article Published On: Tuesday, August 20, 2013, 10:20 [IST]
English summary
It was confirmed that 24 Audi Q3s Editions were booked in just under 24 minutes at the Audi Delhi Central dealership
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+