ಬಜಾಜ್ ಬೈಕ್‌ಗಳ ಆವೇಗ ಕುಸಿತ
ಅಕ್ಟೋಬರ್ ತಿಂಗಳ ಮಾರಾಟ ಅಂಕಿಅಂಶದಲ್ಲಿ ದೇಶದ ಮುಂಚೂಣಿಯ ದ್ವಿಚಕ್ರ ತಯಾರಕ ಕಂಪನಿಗಳಲ್ಲಿ ಒಂದಾಗಿರುವ ಬಜಾಜ್ ಆಟೋ ಕುಸಿತ ದಾಖಲಿಸಿದೆ.
ಅಕ್ಟೋಬರ್ ತಿಂಗಳ ಮಾರಾಟದಲ್ಲಿ ಬಜಾಜ್ ಆಟೋ ಶೇಕಡಾ 4ರಷ್ಟು ಕುಸಿತ ಕಂಡಿದ್ದು, 3,48,323 ಯುನಿಟ್ ಮಾತ್ರ ಮಾರಾಟ ಕಂಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಕಂಪನಿಯು 3,61,186 ಯುನಿಟ್ ಮಾರಾಟ ಮಾಡಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇನ್ನು ವಾಣಿಜ್ಯ ವಿಭಾಗದಲ್ಲಿ ಬಜಾಜ್ ಆಟೋ ಶೇಕಡಾ 26ರಷ್ಟು ಗಣನೀಯ ಕುಸಿತ ಕಂಡಿದೆ. ಕಳೆದ ಬಾರಿಯ 50,316ಗಳಿಗೆ ವಿರುದ್ಧವಾಗಿ ಈ ಬಾರಿ 37,000 ಯುನಿಟ್ ಮಾತ್ರ ಮಾರಾಟವಾಗಿದೆ.
ಹಾಗಿದ್ದರೂ ರಫ್ತು ವಿಭಾಗದಲ್ಲೂ ಶೇ. 9ರಷ್ಟು ಏರಿಕೆ ದಾಖಲಿಸುವಲ್ಲಿ ಬಜಾಜ್ ಆಟೋ ಯಶಸ್ಸನ್ನು ಕಂಡಿದೆ. ಒಟ್ಟು 1,38,022 ಯುನಿಟ್ ಮಾರಾಟದ ಮೂಲಕ ಬಜಾಜ್ ನಿಟ್ಟುಸಿರುಬಿಡುವಂತಾಗಿದೆ. ಕಳೆದ ಬಾರಿಯಿದು 1,26,091 ಯನಿಟ್‌ಗಳಾಗಿದ್ದವು.
ಈ ಮೂಲಕ ಅಕ್ಟೋಬರ್ ತಿಂಗಳ ಒಟ್ಟಾರೆ ಮಾರಾಟ ಪರಿಗಣಿಸಿದಾಗ ಬಜಾಜ್, ಶೇಕಡಾ 6ರಷ್ಟು ದಾಖಲಿಸಿದೆ. ಇಲ್ಲೂ ಕಳೆದ ಬಾರಿಯ 4,11,502 ಯುನಿಟ್‌ಗಳಿಗೆ ವಿರುದ್ಧವಾಗಿ ಈ ಬಾರಿ 3,85,323 ಯುನಿಟ್ ಮಾತ್ರ ಮಾರಾಟವಾಗಿದೆ.


Click it and Unblock the Notifications









