ಶಾಲಾ ವಾಹನಗಳಲ್ಲಿ ಮಕ್ಕಳ ಸುರಕ್ಷತೆಗೆ ಮಾರ್ಗಸೂಚಿ
ಬೆಂಗಳೂರು ನಗರ ಪೊಲೀಸ್ ಪತ್ರಿಕಾ ಪ್ರಕಟಣೆ:
2013-14ನೇ ಶೈಕ್ಷಣಿಕ ವರ್ಷದಲ್ಲಿ ಈಗಾಗಲೇ ದಿನಾಂಕ 01-06-2013 ರಿಂದ ಎಲ್ಲಾ ಶಾಲೆಗಳು ಪ್ರಾರಂಭಗೊಂಡಿರುತ್ತದೆ. ಶಾಲೆಯ ಮಕ್ಕಳ ಸುರಕ್ಷತೆ ಯಾವುದೇ ನಾಗರಿಕ ಸಮಾಜದ ಅವಿಭಾಜ್ಯ ಪ್ರಾಮುಖ್ಯತೆಯನ್ನು ಹೊಂದಿದೆ. ರಸ್ತೆ ಪ್ರಯಾಣದ ಅವಧಿಯಲ್ಲಿ ವಯಸ್ಕರಿಗೆ ಹೋಲಿಸಿದರೆ ಮಕ್ಕಳಲ್ಲಿ ಹೆಚ್ಚಿನ ಆರೈಕೆ ಮತ್ತು ಸೌಕರ್ಯಗಳ ಅಗತ್ಯವಿದೆ. ಶಾಲಾ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಶಾಲಾ ವಾಹನಗಳಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ದಿನಾಂಕ 01-05-2013 ರಿಂದ ಜಾರಿಗೆ ಬರುವಂತೆ ಸರ್ಕಾರವು ಮಾರ್ಗಸೂಚಿಗಳನ್ನು ರೂಪಿಸಿತ್ತು. ಸರ್ಕಾರದ ಮಾರ್ಗದರ್ಶಿ ಸೂಚಿಗಳನ್ನು ಪಾಲಿಸಲು ಈಗಾಗಲೇ ಶಾಲಾ ಆಡಳಇತ ವರ್ಗದವರ ಗಮನಕ್ಕೆ ತರಲಾಗಿತ್ತು.
ಶಾಲಾ ಮಕ್ಕಳನ್ನು ಕರೆದೊಯ್ಯುವ ಶಾಲಾ ವಾಹನಗಳು ಸರ್ಕಾರದ ಮಾರ್ಗದರ್ಶಿ ಸೂಚಿಗಳನ್ನು ಪಾಲಿಸುತ್ತಿರುವುದನ್ನು ಖಾತ್ರಿಪಡಿಸಿಕೊಳ್ಳಲು ನಗರ ಸಂಚಾರ ಪೊಲೀಸರು ವಿಶೇಷ ಕಾರ್ಯಾಚರಣೆಯನ್ನು ಹಮ್ಮಿಕೊಂಡಿದ್ದು, ದಿನಾಂಕ 10-06-2013ರ ವರೆಗೆ ನಡೆಸಿದ ವಿಶೇಷ ಕಾರ್ಯಾಚರಣೆ ವೇಳೆ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸದಿರುವ ಒಟ್ಟು 264 ಶಾಲಾ ವಾಹನಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಂಡಿರುತ್ತಾರೆ.
ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸದಿರುವ ವಾಹನಗಳು ಶಾಲಾ ಮಕ್ಕಳ ಸುರಕ್ಷತೆಗೆ ಯೋಗ್ಯವಾಗಿಲ್ಲದೆ ಕಾರಣ ಪೋಷಕರು ಸಹ ಈ ನಿಟ್ಟಿನಲ್ಲಿ ವೈಯಕ್ತಿಕ ಗಮನ ಹರಿಸಿ ವಿಷಯವನ್ನು ಗಂಭೀರವಾಗಿ ಪರಿಗಣಿಸುವ ಜೊತೆಗೆ ಅಸುರಕ್ಷತೆಯ ಶಾಲಾ ವಾಹನಗಳಲ್ಲಿ ಮಕ್ಕಳನ್ನು ಕಳುಹಿಸದಂತೆ ನೋಡಿಕೊಳ್ಳುವುದು.
ಮುಂದಿನ ದಿನಗಳಲ್ಲೂ ಸಹ ಶಾಲಾ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಸರ್ಕಾರದ ಮಾರ್ಗಸೂಚಿಗಳಾದ
1. ನೋಂದಣಿಯಾದ ದಿನದಿಂದ ವಾಹನ 15 ವರ್ಷಕ್ಕಿಂತ ಹಳೆಯದಾಗಿರಬಾರದು.
2. ವಾಹನಕ್ಕೆ 40 ಕೀ.ಮೀ. ವೇಗಮಿತಿ ಆಳವಡಿಸಿರಬೇಕು.
3. ವಾಹನದ ಹೊರಭಾಗಕ್ಕೆ ಹಳದಿ ಬಣ್ಣದ ಪೇಯಿಂಟ್ ಮಾಡಿ, ಮಧ್ಯಭಾಗದಲ್ಲಿ ಹಸಿರು ಬಣ್ಣದ ಪಟ್ಟೆಯನ್ನು ಪೇಂಟ್ ಮಾಡಿರಬೇಕು. ಆ ಪಟ್ಟಿಯ ಮೇಲೆ ನಾಲ್ಕು ಬದಿಗಳಲ್ಲಿ ಗೋಚರಿಸುವಂತೆ ಶಾಲಾ ವಾಹನ ಎಂದು ಬರೆಯಬೇಕು.
4. ವಾಹನ ಗುತ್ತಿಗೆ ಸಾಗಾಣೆ (ಕಾಂಟ್ರಾಕ್ಟ್ ಕ್ಯಾರಿಯೇಟ್) ಪರವಾನಗಿ ಹೊಂದಿರಬೇಕು.
5. ಚಾಲಕ ಅಧಿಕೃತ ಚಾಲನಾ ಪರವಾನಿಗೆ ಹೊಂದಿರಬೇಕು ಇತ್ಯಾದಿ ಅಂಶಗಳನ್ನು ಪಾಲಿಸದಿರುವ ಶಾಲಾ ವಾಹನಗಳ ವಿರುದ್ಧ ನಿಯಮ ಜಾರಿಯನ್ನು ಪರಿಣಾಮಕಾರಿಗೊಳಿಸಲು ಕಾರ್ಯಾಚರಣೆಯನ್ನು ನಿರಂತರವಾಗಿ ಮುಂದುವರಿಸಲಾಗಿದೆ.


Click it and Unblock the Notifications









