ಬಿಎಂಟಿಸಿ ಬಸ್‍ನಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಸಿಹಿ ಸುದ್ದಿ

ಬೆಂಗಳೂರಿನಂತಹ ಮಹಾನಗರದಲ್ಲಿ ಟ್ರಾಫಿಕ್ ಸಮಸ್ಯೆ ಎಂದಿಗೂ ಇದ್ದೇ ಇರುತ್ತೆ. ಇದಕ್ಕೆ ಕಾರಣವೆಂದರೆ ಸ್ವಂತ ವಾಹನಗಳ ಬಳಕೆ ಅಂತಾನೇ ಹೇಳ್ಬೋದು. ಹೀಗಾಗಿ ಕೆಲವರು ಟ್ರಾಫಿಕ್ ಸಮಸ್ಯೆ ಬೇಡವೆಂದು ಸ್ವಂತ ವಾಹನಗಳು ಇದ್ದರೂ ಸಹ ಬಿಎಂಟಿಸಿ ಬಸ್‍ನಲ್ಲಿ ಸಂಚರಿಸುತ್ತಿದ್ದಾರೆ. ಬಿಎಂಟಿಸಿಯ ಸೇವೆಗಳು ಆರಾಂಭವಾದಗಿನಿಂದಲೂ ಪ್ರಯಾಣಿಕರಿಗೆ ಉತ್ತಮ ಸೇವೆಯನ್ನು ನೀಡುತ್ತಲೇ ಬಂದಿದೆ ಮತ್ತು ಇದು ಏಷ್ಯಾದಲ್ಲಿಯೆ ಸಾರ್ವಜನಿಕ ಸಾರಿಗೆಯ ವಿಷಯಕ್ಕೆ ಉನ್ನತ್ತ ಮಟ್ಟದಲ್ಲಿ ಗುರುತಿಸುವಿಕೆಯನ್ನು ಪಡೆದಿದೆ.

ಬಿಎಂಟಿಸಿ ಬಸ್‍ನಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಸಿಹಿ ಸುದ್ದಿ

ದಿನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಬಿಎಂಟಿಸಿ ಬಸ್‍ಗಳು ನಗರದಲ್ಲಿ ಸಂಚರಿಸುತ್ತಲೇ ಇರುತ್ತವೆ ಆದರೆ ಅವುಗಳು ಯಾವ ಸಮಯಕ್ಕೆ ಯಾವ ನಿಲ್ದಾಣದಲ್ಲಿರುತ್ತದೆ ಎಂಬುದು ಕೆಲವರಿಗೆ ಅದರಲ್ಲಿಯೂ ನಗರಕ್ಕೆ ಬಂದ ಹೊಸಬರಿಗಂತೂ ತಿಳಿದಿರುವುದಿಲ್ಲ. ಹೀಗಾಗಿ ಇಂತಹ ಪ್ರಯಾಣಿಕರಿಗೆ ಬಿಎಂಟಿಸಿ ಒಂದು ನೂತನ ಸೇವೆಯನ್ನು ಪ್ರಾರಂಭಿಸಲಿದ್ದು, ಆ ಸೇವೆ ಯಾವುದು ಮತ್ತು ಇದರಿಂದಾಗುವ ಲಾಭಗಳೇನು ಎಂದು ತಿಳಿಯಲು ಮುಂದಕ್ಕೆ ಓದಿರಿ.

ಬಿಎಂಟಿಸಿ ಬಸ್‍ನಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಸಿಹಿ ಸುದ್ದಿ

ಬೆಂಗಳೂರು ಮಹಾನಗರ ಸಾರಿಗೆ ನಿಗಮ (ಬಿಎಂಟಿಸಿ) ಕರ್ನಾಟಕ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ)ಯಂತೆಯೆ ಕೆಲವು ನಿಯಮಗಳನ್ನು ಅನುಸರಿಸುತ್ತಿದೆ, ಅವುಗಳಲ್ಲಿ ಒಂದಾದ ಬಸ್ ವೇಳಾಪಟ್ಟಿಗಳ ಡೇಟಾವನ್ನು ಬಿಎಂಟಿಸಿ ಸಾರ್ವಜನಿಕ ವಲಯದಲ್ಲಿ ಇರಿಸುವ ಯೋಜನೆಯಲ್ಲಿದೆ.

ಬಿಎಂಟಿಸಿ ಬಸ್‍ನಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಸಿಹಿ ಸುದ್ದಿ

ಬಿಎಂಟಿಸಿ ಒಂದು ಹೊಸ ಡೇಟಾದ ಕರಡು ನೀತಿಯನ್ನು ತಂದಿದ್ದು, ಇದು ಖಾಸಗಿ ವ್ಯಕ್ತಿಗಳಿಗೆ ರಿಯಲ್ ಟೈಮ್ ಬಸ್ ಮಾಹಿತಿಯನ್ನು ತಿಳಿಯಲು ಅನುವು ಮಾಡಿಕೊಡುವ ಹಾಗೆ ವ್ಯವಸ್ಥೆ ಮಾಡಲಾಗುತ್ತಿದೆ. ಈ ಡೇಟಾವು ಮೊಬೈಲ್ ಅಪ್ಲಿಕೇಶನ್‌ಗಳು ಮತ್ತು ಉತ್ತಮ ಬಸ್ ಯೋಜನೆ ಕಲ್ಪನೆಗಳಿಗೆ ಕಾರಣವಾಗಬಹುದಾಗಿದೆ. "ಕರಡು ಅನುಮೋದನೆಗಾಗಿ ಮುಂದಿನ ಮಂಡಳಿಯ ಸಭೆಯಲ್ಲಿ ಪ್ರಸ್ತಾಪಿಸಲಾಗುವುದು" ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಎನ್.ವಿ.ಪ್ರಸಾದ್‍ರವರು ಹೇಳಿಕೊಂಡಿದ್ದಾರೆ.

ಬಿಎಂಟಿಸಿ ಬಸ್‍ನಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಸಿಹಿ ಸುದ್ದಿ

ಆದರೆ ಸುಮಾರು ಕಳೆದ 10 ದಿನಗಳ ಕಾಲ ರಾಜ್ಯದಲ್ಲಿ ನಡೆದ ರಾಜಕಿಯ ದೊಂಬರಾಟದ ಕಾರಣದಿಂದಾಗಿ ಈ ಹೊಸ ಬಿಎಂಟಿಸಿ ಯೋಜನೆಯ ಕುರಿತಾಗಿ ಪ್ರಸ್ಥಾಪನೆ ಮಾಡಲಾಗಲಿಲ್ಲ. ಕಳೆದ ವಾರ, ಗೂಗಲ್‌ನ ಪ್ರತಿನಿಧಿಗಳು ಬಸ್‌ ವೇಳಾಪಟ್ಟಿ ಮತ್ತು ಚಲನೆಗಳ ಕುರಿತು ರಿಯಲ್-ಟೈಮ್ ಡೇಟಾವನ್ನು ಹಂಚಿಕೊಳ್ಳುವ ಕುರಿತು ಬಿಎಂಟಿಸಿ ನಿರ್ವಹಣೆಯನ್ನು ಭೇಟಿಯಾದರು.

ಬಿಎಂಟಿಸಿ ಬಸ್‍ನಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಸಿಹಿ ಸುದ್ದಿ

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ವ್ಯವಸ್ಥಾಪಕ ನಿರ್ದೇಶಕರು ಸಭೆಯಲ್ಲಿ ಜನಪ್ರಿಯ ಸರ್ಚ್ ಎಂಜಿನ್‌ನೊಂದಿಗೆ ಡೇಟಾವನ್ನು ಹಂಚಿಕೊಳ್ಳುವ ಆಲೋಚನೆಗೆ ನಿಗಮವು ಮುಕ್ತವಾಗಿದೆ ಎಂದು ತಿಳಿದುಬಂದಿದೆ, ಏಕೆಂದರೆ ಅದು "ಸಮಾಜದ ಒಂದು ದೊಡ್ಡ ಭಾಗಕ್ಕೆ ಪ್ರಯೋಜನವನ್ನು ನೀಡುತ್ತದೆ ಮತ್ತು ಪ್ರಯಾಣಿಕರನ್ನು ಹೆಚ್ಚಿಸುತ್ತದೆ." ಎಂದು ಹೇಳಿದ್ದಾರೆ.

ಬಿಎಂಟಿಸಿ ಬಸ್‍ನಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಸಿಹಿ ಸುದ್ದಿ

ಕರಡು ಕೆಎಸ್‌ಆರ್‌ಟಿಸಿಯ ಮುಕ್ತ ದತ್ತಾಂಶ ನೀತಿಯ ಪ್ರತಿ ಪೂರ್ತಿ ಅಥವಾ ಹೆಚ್ಚು ಕಡಿಮೆ ಇದೆ ಎಂದು ಮೂಲಗಳು ತಿಳಿಸಿವೆ. ಮೈಸೂರಿನಲ್ಲಿ ಸುಮಾರು 600 ಸಿಟಿ ಬಸ್ ಸೇವೆಗಳನ್ನು ನಿರ್ವಹಿಸುತ್ತಿರುವ ಕೆಎಸ್‌ಆರ್‌ಟಿಸಿ ತನ್ನ ಸಾರಿಗೆ ಡೇಟಾವನ್ನು ಕಳೆದ ವಾರ ತನ್ನ ವೆಬ್‌ಸೈಟ್‌ನಲ್ಲಿ ಅಪ್ಲೋಡ್ ಮಾಡಲಾಗಿದ್ದು, ಸಾರಿಗೆ ಮಾರ್ಗಗಳು, ಬಸ್ ನಿಲ್ದಾಣಗಳು ಮತ್ತು ಪ್ರವಾಸಗಳಂತಹ ಮಾಹಿತಿಗಳಿಗೆ ಸಾರ್ವಜನಿಕರಿಗೆ ಪ್ರವೇಶವನ್ನು (ಆಕ್ಸಿಸ್) ನೀಡುತ್ತದೆ. ಈ ಡೇಟಾ ಉಚಿತವಾದರೂ ಸಹ ಇದನ್ನು ವಾಣಿಜ್ಯ ಉದ್ದೇಶಗಳಿಗಾಗಿ ಬಳಸುವಂತಿಲ್ಲ ಎನ್ನಲಾಗಿದೆ.

ಬಿಎಂಟಿಸಿ ಬಸ್‍ನಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಸಿಹಿ ಸುದ್ದಿ

"ರಿಯಲ್ ಟೈಮ್‍ನಲ್ಲಿ ಬಸ್ ಎಲ್ಲಿದೆ ಎಂದು ಜನರು ಪತ್ತೆಹಚ್ಚಲು ಸಾಧ್ಯವಾದರೆ, ಹೆಚ್ಚಿನ ಜನರು ಬಿಎಂಟಿಸಿ ಸೇವೆಗಳನ್ನು ಬಳಸಲು ಪ್ರಾರಂಭಿಸುತ್ತಾರೆ. ಹೀಗಾಗಿ ಪ್ರಯಾಣಿಕರನ್ನು ಹೆಚ್ಚಿಸಲು ಬಿಎಂಟಿಸಿ ಈ ಯೋಜನೆಯನ್ನು ಮಾಡಲಾಗುತ್ತದೆ,"ಎಂದು ಸಂಶೋಧಕ ಶ್ರೀನಿವಾಸ್ ಕೊಡಾಲಿ ಅವರು ಹೇಳಿದರು. ಡೇಟಾವನ್ನು ಮಾರಾಟ ಮಾಡುವ ಸಾಧ್ಯತೆಯನ್ನು ಬಿಎಂಟಿಸಿ ಅನ್ವೇಷಿಸಬೇಕು ಎಂದು ಕೊಡಾಲಿ ಅಭಿಪ್ರಾಯಪಟ್ಟಿದ್ದಾರೆ.

ಬಿಎಂಟಿಸಿ ಬಸ್‍ನಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಸಿಹಿ ಸುದ್ದಿ

ನವದೆಹಲಿ, ಕೊಚ್ಚಿ ಮತ್ತು ಹೈದರಾಬಾದ್‌ನಂತಹ ನಗರಗಳು ಈಗಾಗಲೇ ಓಪೆನ್ ಡೇಟಾ ಪಾಲಿಸಿಯನ್ನು ಪರಿಚಯಿಸಿದ್ದು, ಜನರಿಗೆ ಆನ್‌ಲೈನ್‌ನಲ್ಲಿ ಸಾರಿಗೆ ಡೇಟಾದ ಆಕ್ಸಿಸ್ ಪಡೆಯಲು ಅನುವು ಮಾಡಿಕೊಡುತ್ತಿದೆ. ಬಿಎಂಟಿಸಿಯ 6,500 ಜಿಪಿಎಸ್ ಶಕ್ತಗೊಂಡ ಬಸ್‌ಗಳೊಂದಿಗೆ, ಆನ್‌ಲೈನ್‌ನಲ್ಲಿ ಬಸ್ ಡೇಟಾದ ಲಭ್ಯತೆಯು ದೊರೆಯುವ ಹಾಗೆ ಮೊಬೈಲ್ ಅಪ್ಲಿಕೇಶನ್‌ಗಳನ್ನು ಅಭಿವೃದ್ಧಿಪಡಿಸಲು ಅಥವಾ ಬಸ್ ಕಾರ್ಯಾಚರಣೆಯನ್ನು ಪರಿಶೀಲಿಸಲು ಹಲವಾರು ಸ್ಟಾರ್ಟ್-ಅಪ್ ಕಂಪನಿಗಳು ಮತ್ತು ಸಂಶೋಧಕರನ್ನು ಆಕರ್ಷಿಸಬಹುದಾಗಿದೆ.

ಬಿಎಂಟಿಸಿ ಬಸ್‍ನಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಸಿಹಿ ಸುದ್ದಿ

ಇವುಗಳ ಜೊತೆಗೆ ಬಿಎಂಟಿಸಿ ಮತ್ತೊಂದು ಹೊಸ ಯೋಜನೆಯಲ್ಲಿದ್ದು, ತಮ್ಮಲ್ಲಿರುವ ಇಂಧನ ಆಧಾರಿತ ಬಿಎಂಟಿಸಿ ಬಸ್‍ಗಳ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿ 2030ರೊಳಗೆ ಎಲೆಕ್ಟ್ರಿಕ್ ಮಾದರಿಯ ಬಿಎಂಟಿಸಿ ಬಸ್ಸುಗಳ ಸಂಚಾರವನ್ನು ಪ್ರಾರಂಭಿಸಲಿದೆ ಎಂದು ವರದಿಗಳು ಹೇಳುತ್ತಿದೆ.

ಬಿಎಂಟಿಸಿ ಬಸ್‍ನಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಸಿಹಿ ಸುದ್ದಿ

ಈ ಹೊಸ ಯೋಜನೆಯ ಕುರಿತಾಗಿ ಅಧಿಕಾರಿಗಳು ತಾವು ಮಾಲಿನ್ಯ ಉಂಟು ಮಾಡುತ್ತಿರುವ ಡೀಸೆಲ್ ಆಧಾರಿತ ಬಸ್‍ಗಳನ್ನು ಸ್ಥಗಿತಗೊಳಿಸಿ, ಎಲೆಕ್ಟ್ರಿಕ್ ಬಸ್ಸುಗಳನ್ನು ಬಳಸುವ ಬಗ್ಗೆ ಹೇಳಿಕೊಂಡಿದ್ದು, ಮೊದಲನೆಯದಾಗಿ ಮುಂದಿನ ಮೂರು ವರ್ಷದಲ್ಲಿ ಸುಮಾರು 1500 ಎಲೆಕ್ಟ್ರಿಕ್ ಬಸ್ಸುಗಳನ್ನು ಬಿಡುಗಡೆ ರಸ್ತೆಗಿಳಿಸಲಿದೆ.

ಬಿಎಂಟಿಸಿ ಬಸ್‍ನಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಸಿಹಿ ಸುದ್ದಿ

ರಸ್ತೆಗಳಿಯಲಿರುವ 1500 ಹೊಸ ಎಲೆಕ್ಟ್ರಿಕ್ ಬಸ್ಸುಗಳಲ್ಲಿ 100 ಎಸಿ ಬಸ್ (20 ಏರ್‍‍ಪೋರ್ಟ್ ಬಸ್, 80 ಇನ್ನಿತರೆ ಎಸಿ ಸರ್ವೀಸ್ ಬಸ್) ಹಾಗು 400 ಎಸಿ ರಹಿತ ಎಲೆಕ್ಟ್ರಿಕ್ ಬಸ್ಸುಗಳನ್ನು ಮೊದಲ ಒಂದು ವರ್ಷದಲ್ಲಿ ನಿರ್ಮಾಣ ಮಾಡುವುದಾಗಿ ಹೇಳಿಹೊಂಡಿದೆ. ಈಗಿರುವ ಡೀಸೆಲ್ ಆಧಾರಿತ ಬಸ್ಸುಗಳನ್ನು ಸ್ಥಗಿತಗೊಳಿಸಲು ಕೊಂಚ ಸಮಯ ಬೇಕಾಗಬಹುದು.

Source: ETAuto

Most Read Articles

Kannada
English summary
Know The Real Times Schedule Of Buses In Bangalore BMTC To Share Data. Read In Kannada
Story first published: Thursday, July 25, 2019, 13:58 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more