ಚುನಾವಣೆ ಮುಗಿದಿದ್ದೇ ತಡ; ಪ್ರಯಾಣಿಕರ ಜೇಬಿಗೆ ಕತ್ತರಿ
ಸಗಟು ಡೀಸೆಲ್ ಖರೀದಿ ದರ ಹೆಚ್ಚಳವಾಗಿದೆಯೆಂಬ ಕಾರಣಕ್ಕೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಕಳೆದ ದಿನವಷ್ಟೇ ದೈನಿಕ ಹಾಗೂ ಮಾಸಿಕ ಪಾಸ್ ದರ ಹೆಚ್ಚಳಗೊಳಿಸಗೊಳಿಸುವ ಮೂಲಕ ಪ್ರಯಾಣಿಕರಿಗೆ ಶಾಕ್ ನೀಡಿತ್ತು.
ವಿಧಾನಸಭಾ ಚುನಾವಣೆ ಬೆನ್ನಲ್ಲೇ ಬಿಎಂಟಿಸಿ ಇಂತಹದೊಂದು ನಡೆ ಪ್ರಯಾಣಿಕರಿಗೆ ಶಾಕ್ ನೀಡಿದಂತಾಗಿದೆ. ವೋಲ್ವೋ ಮತ್ತು ವಾಯುವಜ್ರ ಹೊರತುಪಡಿಸಿ ಎಲ್ಲ ಪ್ರಕಾರದ ದಿನ ಹಾಗೂ ಮಾಸಿ ಬಸ್ ಪಾಸ್‌ಗಳ ದರವನ್ನು ಹೆಚ್ಚಳಗೊಳಿಸಲಾಗಿತ್ತು.
ದಿನದ ಪಾಸಿನಲ್ಲಿ 10 ರು.ಗಳಷ್ಟು ಹಾಗೂ ಮಾಸಿಕ ಬಸ್ ಪಾಸ್‌ಗೆ 100 ರುಪಾಯಿ ವರೆಗೆ ದರ ಹೆಚ್ಚಳಗೊಳಿಸಲಾಗಿತ್ತು. ಹೊಸ ದರವು ಮೇ 11ರಿಂದಲೇ ಜಾರಿಗೆ ಬರಲಿದೆ.
ಅಂದ ಹಾಗೆ ಪ್ರಯಾಣಿಕರ ದೃಷ್ಟಿಕೋನದಿಂದ ಬಿಎಂಟಿಸಿ ದರ ಏರಿಕೆ ನೀತಿ ನ್ಯಾಯ ಸಮ್ಮತವೇ? ಈ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ.

ಬಿಎಂಟಿಸಿ ಖಾಸಿಗಿ ಬಂಕ್‌ಗಳಿಂದ ಹೆಚ್ಚಾಗಿ ಡೀಸೆಲ್ ಖರೀದಿಸುತ್ತಿದ್ದು, ಡೀಸೆಲ್ ಖರೀದಿ ದರ ಪ್ರತಿ ಲೀಟರ್‌ಗೆ 12 ರು.ಗಳಷ್ಟು ಹೆಚ್ಚಳವಾಗಿದೆ. ಇದರ ಪರಿಣಾಮವಾಗಿ ಟೈರ್, ಟ್ಯೂಬ್, ಲ್ಯೂಬ್ರಿಕೆಂಟ್ಸ್ ಮತ್ತಿತರ ಅವಶ್ಯಕ ವಸ್ತುಗಳ ದರ ಕೂಡಾ ಏರಿಕೆಯಾಗಿದೆ. ಡೀಸೆಲ್‌ಗೆ ತಿಂಗಳಲ್ಲಿ ಪ್ರತಿ ಲೀಟರ್‌ಗೆ 0.60 ಪೈಸೆಯಂತೆ ಹೆಚ್ಚಾಗುತ್ತಿದ್ದು, ಆರು ತಿಂಗಳಲ್ಲಿ ಪ್ರತಿ ಲೀಟರ್‌ಗೆ 3.60 ರು.ಗಳಷ್ಟು ಹೆಚ್ಚಳವಾಗುತ್ತಿದೆ. ಇದರಿಂದ ದರ ಏರಿಕೆ ಅನಿವಾರ್ಯ ಎಂಬ ಕಾರಣ ನೀಡುತ್ತಿದೆ.

ಇದಲ್ಲದೆ ಸಂಸ್ಥೆಯ ಸಿಬ್ಬಂದಿಗೆ ಜನವರಿಯಿಂದ ಶೇಕಡಾ 4.5 ತುಟ್ಟಿಭತ್ಯೆಯನ್ನು ನೀಡುತ್ತಿದ್ದು, ಈ ಎಲ್ಲ ಕಾರಣದಿಂದಾಗಿ ಹೆಚ್ಚಿನ ಆರ್ಥಿಕ ಹೊರೆಯಾಗುತ್ತಿದೆ. ಇದನ್ನು ಸರಿದೂಗಿಸುವ ಸಲುವಾಗಿ ಸಂಸ್ಥೆಯ ವಾಸುಗಳ ದರಗಳನ್ನು ಹೆಚ್ಚಿಸಿದೆ ಎಂದು ಬಿಎಂಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.

ದಿನದ ಪಾಸುಗಳ ಪರಿಷ್ಕೃತ ಪಟ್ಟಿ
ಗುರುತಿನ ಚೀಟಿಯ ಪಾಸು: ಪ್ರಸ್ತುತ ದರ: 45, ಪರಿಷ್ಕೃತ ದರ: 55
ಗುರುತಿನ ಚೀಟಿ ಹೊರತುಪಡಿಸಿದ ಪಾಸು: ಪ್ರಸ್ತುತ ದರ: 50, ಪರಿಷ್ಕೃತ ದರ: 60

ತಿಂಗಳ ಪಾಸುಗಳ ಪರಿಷ್ಕೃತ ದರ
ಕಪ್ಪು ಹಲಗೆ: ಪ್ರಸ್ತುತ ದರ: 625, ಪರಿಷ್ಕೃತ ದರ: 725
ಕೆಂಪು ಹಲಗೆ, ಪುಷ್ಫಕ್, ಸುವರ್ಣ, ಬಿಗ್-10: ಪ್ರಸ್ತುತ ದರ: 825, ಪರಿಷ್ಕೃತ ದರ: 925

ಹಿರಿಯ ನಾಗರಿಕರ ಮಾಸಿಕ ಪಾಸುಗಳ ದರ
ಕಪ್ಪು ಹಲಗೆ: ಪ್ರಸ್ತುತ ದರ: 560, ಪರಿಷ್ಕೃತ ದರ: 650
ಕೆಂಪು ಹಲಗೆ, ಪುಷ್ಫಕ್, ಸುವರ್ಣ, ಬಿಗ್-10: ಪ್ರಸ್ತುತ ದರ: 745, ಪರಿಷ್ಕೃತ ದರ: 830


Click it and Unblock the Notifications








