ಬಿಎಂಡಬ್ಲ್ಯು ಫೈವ್ ಡೋರ್ ಅಗ್ಗದ ಲಗ್ಷುರಿ ಕಾರು ಬಿಡುಗಡೆಗೆ ಸಿದ್ಧ

Written By:

ತಮ್ಮ ನಿಕಟ ಪ್ರತಿಸ್ಪರ್ಧಿಗಳಾದ ಮರ್ಸಿಡಿಸ್ ಎ ಕ್ಲಾಸ್, ಬಿ ಕ್ಲಾಸ್ ಹಾಗೂ ಆಡಿ ಕ್ಯೂ3 ಆವೃತ್ತಿಗಳಿಗೆ ತಿರುಗೇಟು ನೀಡಲು ಸಜ್ಜಾಗುತ್ತಿರುವ ಬಿಎಂಡಬ್ಲ್ಯು ಸದ್ಯದಲ್ಲೇ ಅಂದರೆ ಸೆಪ್ಟೆಂಬರ್ 3ರಂದು ಐದು ಡೋರಿನ ಐಷಾರಾಮಿ 1 ಸಿರೀಸ್ ಕಾರನ್ನು ಬಿಡುಗಡೆಗೊಳಿಸಲಿದೆ.

ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ವೆರಿಯಂಟ್‌ಗಳಲ್ಲಿ ಬಿಎಂಡಬ್ಲ್ಯು 1 ಸಿರೀಸ್ ಆಗಮನವಾಗಲಿದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಸಣ್ಣ ಕ್ರಾಸೋವರ್ ರೀತಿಯಲ್ಲಿ ಕಾರನ್ನು ವಿನ್ಯಾಸಗೊಳಿಸಲಾಗಿದ್ದು, ಎ ಕ್ಲಾಸ್‌ಗೆ ಹೋಲಿಸಿದರೆ ಹೆಚ್ಚು ಸ್ಥಳಾವಕಾಶ ಹೊಂದಿರಲಿದೆ.

ಬಿಎಂಡಬ್ಲ್ಯು ಎಂಟ್ರಿ ಲೆವೆಲ್ ಕಾರು 2.0 ಲೀಟರ್ 118ಡಿ ಟರ್ಬೊ ಡೀಸೆಲ್ ಯುನಿಟ್ ಹೊಂದಿರಲಿದ್ದು, ಇದು 143 ಅಶ್ವಶಕ್ತಿ (320 ಎನ್‌ಎಂ ಟರ್ಕ್ಯೂ) ಉತ್ಪಾದಿಸಲಿದೆ. ಇದು ಪ್ರತಿ ಲೀಟರ್‌ಗೆ 24.39 ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ.

ಹಾಗೆಯೇ 116ಐ 1.6 ಲೀಟರ್ ಪೆಟ್ರೆಲ್ ಎಂಜಿನ್ 136 ಅಶ್ವಶಕ್ತಿ (220ಎನ್‌ಎಂ ಟರ್ಕ್ಯೂ) ಉತ್ಪಾದಿಸಲಿದೆ. ಇದು ಕೂಡಾ ಪ್ರತಿ ಲೀಟರ್‌ಗೆ 18.51 ಕೀ.ಮೀ ಮೈಲೇಜ್ ನೀಡುವಲ್ಲಿ ಸಕ್ಷಮವಾಗಿದೆ. ಎರಡು ಎಂಜಿನ್‌ಗಳಲ್ಲಿ 8 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷ್ ಹೊಂದಿರಲಿದೆ.

ಐದು ಡೋರಿನ ಈ ಬಿಎಂಡಬ್ಲ್ಯು 1 ಸಿರೀಸ್ 22ರಿಂದ 25 ಲಕ್ಷ ರು.ಗಳ ಅಸುಪಾಸಿನಲ್ಲಿ ಮಾರುಕಟ್ಟೆಗಿಳಿಯುವ ನಿರೀಕ್ಷೆಯಿದೆ. ಹಾಗಿದ್ದರೂ ಚೆನ್ನೈನ ಘಟಕದಲ್ಲಿ ಕಾರು ಸ್ಥಳೀಯವಾಗಿ ತಯಾರಿಯಾಗಲಿರುವುದರಿಂದ ಬಿಎಂಡಬ್ಲ್ಯು ನಮ್ಮನ್ನು ಅಚ್ಚರಿಗೊಳಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಹೆಚ್ಚಿನ ಮಾಹಿತಿಗಾಗಿ ಸದಾ ಡ್ರೈವ್ ಸ್ಪಾರ್ಕ್ ಓದುತ್ತಿರಿ.

English summary
BMW's answer to the Mercedes A Class, B Class and Audi Q3, is nearing launch date in India. The 5 door variant of the BMW 1 Series will make its debut here on September 3 and will be offered with a petrol and diesel engine variant.
Story first published: Wednesday, August 7, 2013, 14:19 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark