ಬಿಎಂಡಬ್ಲ್ಯು, ಆಡಿ, ಬೆಂಝ್; ಯಾವುದು ಮುಂದು?

By Nagaraja

ದೇಶದ ಮಾರುಕಟ್ಟೆಯಲ್ಲಿ ಐಷಾರಾಮಿ ಕಾರುಗಳಿಗೆ ಬೇಡಿಕೆ ಹೆಚ್ಚುತ್ತಿರುವುದಕ್ಕೆ ಇದು ಸ್ಪಷ್ಟ ನಿದರ್ಶನವಾಗಿದೆ. 2012ನೇ ಸಾಲಿನಲ್ಲಿ ಜರ್ಮನಿಯ ಪ್ರೀಮಿಯಂ ಕಾರು ತಯಾರಕ ಕಂಪನಿಗಳು ಉತ್ತಮ ಮಾರಾಟ ದಾಖಲೆಯನ್ನು ಕಾಯ್ದುಕೊಂಡಿದೆ. ಇದು ಪ್ರಸಕ್ತ ಸಾಲಿನಲ್ಲೂ ಮುಂದುವರಿಯುವ ಸಾಧ್ಯತೆಯಿದೆ.

2012 ಮಾರಾಟ ಅಂಕಿಅಂಶ

ಬಿಎಂಡಬ್ಲ್ಯು- 9,375 ಯುನಿಟ್
ಆಡಿ- 9,003 ಯುನಿಟ್
ಮರ್ಸಿಡಿಸ್ ಬೆಂಝ್- 7,138 ಯುನಿಟ್

ಕಳೆದ ಸಾಲಿನಲ್ಲಿ 9,375 ಯುನಿಟ್ ಪ್ರೀಮಿಯಂ ಕಾರುಗಳನ್ನು ಮಾರಾಟ ಮಾಡಿರುವ ಬಿಎಂಡಬ್ಲ್ಯು ದೇಶದ ಐಷಾರಾಮಿ ಕಾರುಗಳ ಪೈಕಿ ನಂ.1 ಸ್ಥಾನದಲ್ಲಿದೆ. ಆದರೆ 2011ನೇ ಸಾಲಿಗೆ ಹೋಲಿಸಿದರೆ ಕೇವಲ ನಾಲ್ಕು ಯುನಿಟ್‌ಗಳ ಹೆಚ್ಚಳ ಮಾತ್ರ ಕಂಡುಬಂದಿದೆ.

ಮತ್ತೊಂದೆಡೆ ಸೇಲ್ಸ್‌ನಲ್ಲಿ ಭಾರಿ ಹೆಚ್ಚಳ ಕಂಡಿರುವ ಆಡಿ 9,003 ಕಾರುಗಳನ್ನು ಮಾರಾಟ ಮಾಡಿವೆ. ಅಂದರೆ ಬರೋಬ್ಬರಿ 3,492 ಯುನಿಟ್ ಮಾರಾಟದ ಹೆಚ್ಚಳ ಕಂಡಿದೆ. ಅದೇ ಹೊತ್ತಿಗೆ 292 ಯುನಿಟ್ ಮಾರಾಟ ಹಿನ್ನಡೆ ಅನುಭವಿಸಿರುವ ಮರ್ಸಿಡಿಸ್ ಬೆಂಝ್ 7,138 ಕಾರುಗಳಿಗೆ ಸೀಮಿತಗೊಂಡಿದೆ.

ವರ್ಷಂಪ್ರತಿ ದೇಶದ ಲಗ್ಷುರಿ ಕಾರುಗಳ ಪೈಕಿ ಬಿಎಂಡಬ್ಲ್ಯು, ಆಡಿ ಹಾಗೂ ಬೆಂಝ್ ನಡುವೆ ಕಠಿಣ ಪೈಪೋಟಿ ಕಂಡುಬರುತ್ತಿದೆ. ಬಿಎಂಡಬ್ಲ್ಯು ಮಗದೊಮ್ಮೆ ಗೆಲುವು ಸಾಧಿಸಿರಬಹುದು. ಆದರೆ ಈ ಬಾರಿಯಿದು ನಿರೀಕ್ಷಿಸಿದಷ್ಟು ಸುಲಭವಾಗಿರಲಿಲ್ಲ.

ಒಟ್ಟಾರೆಯಾಗಿ 2010ನೇ ಸಾಲಿಗೆ ಹೋಲಿಸಿದಾಗ ಬಿಎಂಡಬ್ಲ್ಯು ಶೇಕಡಾ 50,03, ಬೆಂಝ್ 27.68 ಹಾಗೂ ಆಡಿ 83.51ರಷ್ಟು ವೃದ್ಧಿ ದರವನ್ನು ಕಂಡಿದೆ.

Article Published On: Friday, January 11, 2013, 13:54 [IST]
English summary
Audi, the German luxury car manufacturer, has recorded an impressive 63 percent growth in India in the calendar year 2012, exceeding its annual sales targets, yet again (Jan-Dec 2011: 5511 units). BMW sold 9,375 cars, Audi sold 9,003 cars and Mercedes Benz sold 7,138 cars in India for 2012.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+