ಸಚಿನ್ ಡ್ರೈವಿಂಗ್ ಬೇಡಿಕೆ ಈಡೇರಿಸಿದ ಬಿಎಂಡಬ್ಲ್ಯು
ಕಾರು ಮಾರುಕಟ್ಟೆಯಲ್ಲಿ ತನ್ನ ನಿಕಟ ಸ್ಪರ್ಧಿಗಳು ನೂತನ ಕಾರುಗಳನ್ನು ಲಾಂಚ್ ಮಾಡುತ್ತಿರುವಂತೆಯೇ ಜರ್ಮನಿಯ ಐಷಾರಾಮಿ ಕಾರು ತಯಾರಕ ಸಂಸ್ಥೆಯಾಗಿರುವ ಬಿಎಂಡಬ್ಲ್ಯು ಕೂಡಾ ಪ್ರತಿತಂತ್ರ ಹೆಣೆಯುತ್ತಿದೆ.
ಇದರ ಅಂಗವಾಗಿ ಬ್ರಾಂಡ್ ಅಂಬಾಸಿಡರ್ ಸಚಿನ್ ತೆಂಡೂಲ್ಕರ್ ಅವರನ್ನು ಪ್ರಮುಖ ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ. ಜರ್ಮನಿಯ ಈ ಪ್ರೀಮಿಯಂ ಕಾರು ಪ್ರಕಾರ, ನೂತನ ಬಿಎಂಡಬ್ಲ್ಯು 1 ಸಿರೀಸ್ ಸದ್ಯದಲ್ಲೇ ಲಾಂಚ್ ಆಗಲಿದ್ದು, ಕ್ರಿಕೆಟ್ ಜೀವಂತ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಎಲ್ಲ ಡ್ರೈವಿಂಗ್ ಬೇಡಿಕೆಗಳನ್ನು ಈಡೇರಿಸಿಕದೆ ಎಂದಿದೆ.
ಇದರ ಅಂಗವಾಗಿ ಅಂತರ್ಜಾಲದಲ್ಲಿ ಪ್ರಚಾರವನ್ನು ಕೂಡಾ ಬಿಎಂಡಬ್ಲ್ಯು ಹಮ್ಮಿಕೊಂಡಿದೆ. ಈ ಮೂಲಕ ಕಾಂಪಾಕ್ಟ್ ಐಷಾರಾಮಿ ಕಾರು ವಿಭಾಗದಲ್ಲಿ ಮರ್ಸಿಡಿಸ್ ಬೆಂಝ್ ಎ ಕ್ಲಾಸ್ ಮಾರಾಟಕ್ಕೆ ಕನ್ನ ಹಾಕಲು ಬಿಎಂಡಬ್ಲ್ಯು ಪೂರ್ವ ತಯಾರಿಯಲ್ಲಿ ತೊಡಗಿಸಿಕೊಂಡಿದೆ.
ಡೈನಾಮಿಕ್1 ವೆಬ್‌ಸೈಟ್‌ನಲ್ಲಿ ಬಿಎಂಡಬ್ಲ್ಯು ಗ್ರಾಹಕರಿಗಾಗಿ ಸ್ಪರ್ಧೆ ಏರ್ಪಡಿಸಿದ್ದು, ವಿಜೇತರಿಗೆ ಜರ್ಮನಿ ಪ್ರವಾಸ ಕೈಗೊಳ್ಳುವ ಜತೆಗೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಜತೆ ಬಿಎಂಡಬ್ಲ್ಯು 1 ಸಿರೀಸ್ ಡ್ರೈವಿಂಗ್ ಮಾಡುವ ಅಪೂರ್ವ ಅವಕಾಶ ಲಭಿಸಲಿದೆ.
ಕಂಪ್ಲೀಟ್ ನಾಕ್ಡ್ ಡೌನ್ (ಸಿಕೆಡಿ) ಮೂಲಕ ಬಿಎಂಡಬ್ಲ್ಯು ಭಾರತಕ್ಕೆ ಎಂಟ್ರಿ ಕೊಡಲಿದ್ದು, ಆ ಬಳಿಕ ಚೆನ್ನೈ ಘಟಕದಲ್ಲಿ ಜೋಡಣೆಯಾಗಲಿದೆ. ಇದರಿಂದ ಸ್ಮರ್ಧಾತ್ಮಕ ದರಗಳಲ್ಲಿ ಬಿಡುಗಡೆ ಮಾಡಲು ಕಂಪನಿಗೆ ನೆರವಾಗಲಿದೆ.

ವೀಡಿಯೋಗಾಗಿ ಮುಂದಿನ ಫೋಟೊ ತಿರುವಿರಿ
ವೀಡಿಯೋ ವೀಕ್ಷಿಸಿ


Click it and Unblock the Notifications