ಹೊಸ ವರ್ಷಕ್ಕೆ ಬಿಎಂಡಬ್ಲ್ಯು ಬೆಲೆಯೇರಿಕೆ ಬಿಸಿ
ಜರ್ಮನಿಯ ಐಷಾರಾಮಿ ಕಾರು ತಯಾರಕ ಸಂಸ್ಥೆಯಾದ ಬಿಎಂಡಬ್ಲ್ಯು, ಹೊಸ ವರ್ಷದಲ್ಲಿ ಗ್ರಾಹಕರಿಗೆ ಶಾಕ್ ನೀಡಲಿದೆ. ಹೌದು, 2014 ಜನವರಿ ತಿಂಗಳಿಂದ ಬಿಎಂಡಬ್ಲ್ಯು ಎಲ್ಲ ರೇಂಜ್ ಕಾರುಗಳಲ್ಲೂ ಶೇಕಡಾ 7ರಿಂದ 10ರಷ್ಟು ಬೆಲೆಯೇರಿಕೆ ಕಂಡುಬರಲಿದೆ.
ವಾಹನೋದ್ಯಮದ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಭೇಟಿ ಕೊಡುತ್ತಿರಿ
ಲಾಭಾಂಶ ಹಾಗೂ ಕಂಪನಿಯ ಬೆಳವಣಿಗೆ ಮುಖ್ಯವಾಗಿರುತ್ತದೆ. ಹಾಗಾಗಿ ದೂರ ದೃಷ್ಟಿಕೋನದಲ್ಲಿ ದರ ಏರಿಕೆಗೊಳಿಸಲಾಗುತ್ತದೆ ಎಂದು ಬಿಎಂಡಬ್ಲ್ಯು ಇಂಡಿಯಾ ತಿಳಿಸಿದೆ.

ಕಳೆದ ಆಗಸ್ಟ್ ತಿಂಗಳಿನಲ್ಲಷ್ಟೇ ಆಮದು ಶುಲ್ಕ ಏರಿಕೆ ಹಾಗೂ ರುಪಾಯಿ ಮೌಲ್ಯ ಏರಿಳಿತದ ಹಿನ್ನಲೆಯಲ್ಲಿ ಬಿಎಂಡಬ್ಲ್ಯು ಕಾರುಗಳ ದರಗಳಲ್ಲಿ ಶೇಕಡಾ 5ರಷ್ಟು ವರ್ಧನೆ ಕಂಡುಬಂದಿತ್ತು.
ಭಾರತದಲ್ಲಿ ಲಭ್ಯವಿರುವ ಬಿಎಂಡಬ್ಲ್ಯು ಮಾದರಿಗಳು: 1 ಸಿರೀಸ್, ಸೆಡಾನ್ 3, 5, 6 ಮತ್ತು 7 ಸಿರೀಸ್ ಜತೆಗೆ ಎಸ್‌ಯುವಿ ಎಕ್ಸ್1, ಎಕ್ಸ್3, ಎಕ್ಸ್5 ಹಾಗೂ ಸ್ಪೋರ್ಟ್ಸ್ ಕಾರು ಎಂ ಸಿರೀಸ್. ಈ ಎಲ್ಲ ಕಾರಗಳ ಬೆಲೆ 20.9 ಲಕ್ಷ ರು.ಗಳಿಂದ ಆರಂಭವಾಗಿ 1.78 ಕೋಟಿ ರು.ಗಳ ವರೆಗಿದೆ.


Click it and Unblock the Notifications