ಫೋರ್ಡ್ ಇಕೊಸ್ಪೋರ್ಟ್ ಬುಕ್ಕಿಂಗ್ ಪ್ರಕ್ರಿಯೆ ಜೂನಲ್ಲೇ ಆರಂಭ

By Nagaraja

ಫೋರ್ಡ್ ಇಕೊಸ್ಪೋರ್ಟ್ ಎಸ್‌ಯುವಿ ಕಾರು ಆಗಮನಕ್ಕಾಗಿ ನೀವು ಬಹಳ ದಿನಗಳಿಂದ ಕಾಯುತ್ತಿದ್ದೀರಾ? ಆದರೆ ಇನ್ನು ಹೆಚ್ಚು ದಿನಗಳ ಕಾಲ ನಿರಾಸೆಪಡಬೇಕಿಲ್ಲ. ಯಾಕೆಂದರೆ ಬಹುನಿರೀಕ್ಷಿತ ಫೋರ್ಡ್ ಇಕೊಸ್ಪೋರ್ಟ್ ಜೂನ್ ತಿಂಗಳಲ್ಲಿ ಮಾರುಕಟ್ಟೆಗೆ ಅಪ್ಪಳಿಸಲಿದೆ.

ಅದೇ ರೀತಿ ಬುಕ್ಕಿಂಗ್ ಪ್ರಕ್ರಿಯೆ ಕೂಡಾ ಜೂನ್ ತಿಂಗಳಲ್ಲೇ ಆರಂಭಗೊಳ್ಳಲಿದೆ ಎಂಬುದು ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ದೊರಕಿದೆ. ಅಂದರೆ ಇನ್ನು ಕೇವಲ ಒಂದು ತಿಂಗಳೊಳಗೆ ದೇಶದ ಕಾರು ಪ್ರಿಯರು ಎದುರು ನೋಡುತ್ತಿದ್ದ ಅತ್ಯಂತ ಜನಪ್ರಿಯ ಕಾರಿನ ಆಗಮನವಾಗಲಿದೆ.

ಫೋರ್ಡ್ ಇಕೊಸ್ಪೋರ್ಟ್ ಬಿಡುಗಡೆ ಸಂಬಂಧ ಮುಂದುವರಿದಿದ್ದ ಅನಿಶ್ಚಿತತೆ ಗ್ರಾಹಕರಲ್ಲಿ ಭಾರಿ ಗೊಂದಲ ಸೃಷ್ಟಿ ಮಾಡುವಲ್ಲಿ ಕಾರಣವಾಗಿತ್ತು. ಆದರೆ ದೇಶದ ಎಂಟು ಪ್ರಮುಖ ನಗರಗಳಲ್ಲಿ ಪ್ರದರ್ಶನ ನಡೆಸಿದ ಬಳಿಕ ಗ್ರಾಹಕರ ನಂಬಿಕೆ ಉಳಿಸಿಕೊಳ್ಳುವಲ್ಲಿ ಫೋರ್ಡ್ ಯಶಸ್ವಿಯಾಗಿತ್ತು.

ಒಟ್ಟಿನಲ್ಲಿ ಫೋರ್ಡ್ ಇಕೊಸ್ಪೋರ್ಟ್ ಇನ್ನಷ್ಟು ತಡವಾಗಿ ಆಗಮನವಾದರೆ ಅದು ಕಂಪನಿಯ ಹೆಸರಿಗೆ ಧಕ್ಕೆಯನ್ನುಂಟು ಮಾಡುವ ಸಾಧ್ಯತೆಗಳಿದ್ದವು. ಬಿಡುಗಡೆ ತಡವಾಗಿದ್ದರಿಂದ ಗ್ರಾಹಕರು ತಮ್ಮ ಅತೃಪ್ತಿಯನ್ನು ವ್ಯಕ್ತಪಡಿಸಿದ್ದರು.

ಇಷ್ಟೆಲ್ಲ ಆದರೂ ಫೋರ್ಡ್ ಇಕೊಸ್ಪೋರ್ಟ್ ಅನಧಿಕೃತ ಬುಕ್ಕಿಂಗ್ ಬಲು ಜೋರಾಗಿ ನಡೆಯುತ್ತಿದೆ ಎಂಬುದರ ಬಗ್ಗೆ ನಾವು ಈ ಹಿಂದೆಯೇ ಮಾಹಿತಿ ನೀಡಿದ್ದೇವೆ. ಫೋರ್ಡ್ ಇಕೊಸ್ಪೋರ್ಟ್ ಡೀಲರ್‌ಗಳ ಬಳಿ ಅನಧಿಕೃತ ಬುಕ್ಕಿಂಗ್ ಪ್ರಕ್ರಿಯೆ ನಡೆಯುತ್ತಿದೆ.

More from DriveSpark

Article Published On: Tuesday, May 7, 2013, 14:25 [IST]
English summary
The social networking websites are buzzing about it and have revealed that Ford will officially open bookings for the Ecosport in June.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+